

ಜಲ ಜೀವನ ಮಿಷನ್ ವತಿಯಿಂದ ಯಲ್ಲಾಪುರ ದಲ್ಲಿ
ನಡೆದ ಜಿಲ್ಲಾ ಮಟ್ಟದ ಚರ್ಚಾಸ್ಪರ್ಧೆಯಲ್ಲಿ ಸಿದ್ದಾಪುರ ತಾಲೂಕಿನ ಬಿಳೇಗೋಡ ಹಿ. ಪ್ರಾಥಮಿಕ. ಶಾಲೆಯ ವಿದ್ಯಾರ್ಥಿನಿ ಕುಮಾರಿ ವರ್ಷಿತಾ ನಾಯ್ಕ ಪ್ರಥಮ ಬಹುಮಾನ ಪಡೆದಿದ್ದಾ ಳೆ
ಸರಕುಳಿಯಲ್ಲಿ ಬ್ಯಾಗ್ ವಿತರಣೆ, ಮಾಹಿತಿ ಕಾರ್ಯಾಗಾರ
ಸಿದ್ದಾಪುರ: ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಗಡಿಯಲ್ಲಿ ಇರುವ ಸರಕುಳಿ ಶ್ರೀಜಗದಾಂಬಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ, ಸಿ ಸಿ ಕೆಮರಾ ಉದ್ಘಾಟನೆ, ಸಾರಿಗೆ ಅಧಿಕಾರಿಗಳಿಂದ ಸಂಚಾರ ಮಾರ್ಗದರ್ಶನ ಕಾರ್ಯಕ್ರಮಗಳು ನಡೆದವು.
ನಿವೃತ್ತ ಮುಖ್ಯಾಧ್ಯಾಪಕ ಎಂ.ಎಂ.ಹೆಗಡೆ ಅವರು ಸಿಸಿಟಿವಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿರಸಿ ಆರ್ ಟಿಓ ಸಿ.ಡಿ.ನಾಯ್ಕ ಮಕ್ಕಳಿಗೆ ಸಾರಿಗೆ, ಸಂಚಾರದ ಮಾಹಿತಿ ನೀಡಿದರು. ಸಂಚಾರದ ನಿಯಮಗಳ ಕುರಿತು ಕೇಳಲಾದ ಪ್ರಶ್ನೆಗೆ ಸರಿ ಉತ್ತರ ಕೊಟ್ಟ ಮಕ್ಕಳಿಗೆ ಬಹುಮಾನ ಕೂಡ ವಿತರಿಸಿದರು.
ಎಂಟನೇ ವರ್ಗದ ೩೫ ಮಕ್ಕಳಿಗೆ ಆರ್ ಡಿಎಸ್ ಸ್ವಯಂ ಸೇವಾ ಸಂಸ್ಥೆ ೧೨೦೦ ರೂ. ಮೌಲ್ಯದ ಬ್ಯಾಗ್, ೨ ಜೊತೆ ಸಮಸವಸ್ತ್ರ, ಎರಡುಪಟ್ಟಿ ವಿತರಿಸಿ ಶುಭಕೋರಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.೯೦ಕ್ಕಿಂತ ಅಧಿಕ ಅಂಕ ಪಡೆದು ಸಾಧನೆ ಮಾಡಿದ ೧೦ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಆರು ಮುಖ್ಯಾಧ್ಯಾಪಕರು ಪಾಲ್ಗೊಂಡಿದ್ದರು. ಬಿ.ಎಂ.ಚಿತ್ರ ಗಿಮಠ, ಜಿ.ಎಸ್.ಹೆಗಡೆ, ಜಿ.ಆರ್.ಭಾಗವತ, ಟಿ.ಆರ್.ಜೋಶಿ, ಎಸ್.ಎನ್.ಭಟ್ಟ, ಎಂ.ಎಂ.ಹೆಗಡೆ ಪಾಲ್ಗೊಂಡರು. ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಎಂ.ಜಿ.ಹೆಗಡೆ ವಹಿಸಿದ್ದರು.
ಸ್ತುತಿ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕ ಕೃಷ್ಣಮೂರ್ತಿ ಹೆಗಡೆ ಸ್ವಾಗತಿಸಿದರು. ಎಂ.ವಿ.ನಾಯ್ಕ ವಂದಿಸಿದರು. ವಿ.ಎಸ್.ಭಟ್ಟ ನಿರ್ವಹಿಸಿದರು.


ಸಿದ್ಧಾಪುರ ಹಾವಿನಬೀಳು ಗ್ರಾಮದ ಹಿರಿಯ ವ್ಯಕ್ತಿ ಗಣಪತಿ ರಾಮಚಂದ್ರ ಭಟ್ಟ (87 ವರ್ಷ) ಇವರು ಇಂದು ನಿಧನರಾದರು .
ಇವರು ಈ ಹಿಂದೆ ಹಾವಿನಬೀಳು ಗ್ರಾಮದಲ್ಲಿ ಪೊಲೀಸ್ ಪಟೇಲರಾಗಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೇ ಇವರ ತಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು.
ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿಯನ್ನು ‘ಹಾವಿನಬೀಳು ಯುವ ವಾಹಿನಿ’, ‘ಹಳೆಯ ವಿದ್ಯಾರ್ಥಿಗಳ ಸಂಘ, ಹುಲ್ಕುತ್ರಿ’, ‘ಹುಲ್ಕುತ್ರಿ ಶಾಲೆಯ ಪಾಲಕರು’ ಹಾಗೂ ಸಮಸ್ತ ಹಾವಿನಬೀಳು ಗ್ರಾಮದ ನಾಗರಿಕರು ಅಂತಿಮ ನಮನ ಸಲ್ಲಿ ಸಿದ್ದಾರೆ.


