ಸಾಮಾಜಿಕ ಅಶಾಂತಿಗೆ ಗುದ್ದು, ವಿಶ್ವಶಾಂತಿಯ ಮದ್ದು ದೇವರಾಜ್‌ ಅರಸು ಸಾಧನೆ achivement of d.devaraj arasu

೯ನೇ ವರ್ಷದಲ್ಲಿ ತಂದೆಯನ್ನು ಕಳೆದುಕೊಂಡ ಹಡುಗ ಕೃಷಿ ಕೆಲಸ ಮಾಡುತ್ತಾ ಸಣಕಲನಾಗಿ ಬೆಳೆಯುತ್ತಿರುವಾಗ ಸಹಪಾಠಿಯೊಂದಿಗೆ ಜಗಳವಾಡಿ ಹೊಡೆತ ತಿಂದಾಗ ನಾನು ಬಲಿಷ್ಠನಾಗಿದ್ದರೆ ಇವನಿಂದ ಹೊಡೆತ ತಿನ್ನುವ ದರ್ದು ಬರುತಿತ್ತೇ ಎಂದು ಯೋಚಿಸಿ ಕುಸ್ತಿ ಪಯಲ್ವಾನ್‌ ಆಗಿ ಮುಂದೆ ಪ್ರಬಲ ರಾಜಕೀಯ ಶಕ್ತಿಗಳೆದುರು ಮುಖ್ಯಮಂತ್ರಿಯಾಗಿ ತಾನು ರಾಜಕೀಯ ಜಗಜಟ್ಟಿ ಕೂಡಾ ಎಂದು ಸಾಬೀತು ಮಾಡಿದವರು ದೇವರಾಜ್‌ ಅರಸು.

ದೇವರಾಜ್‌ ಅರಸು ಜಮೀನ್ಧಾರರಾಗಿದ್ದ ಮನೆತನದಲ್ಲಿ ಮೈಸೂರು ಜಿಲ್ಲೆ ಹುಣಸೂರಿನ ಕಲ್ಲಹಳ್ಳಿಯಲ್ಲಿ ಹುಟ್ಟಿದಾಗ ಕುಟುಂಬಕ್ಕೆ ಕೃಷಿ ಜಮೀನಿತ್ತಾದರೂ ಸ್ಥಿತಿವಂತಿಕೆ ಇರಲಿಲ್ಲ. ಬಡತನದಲ್ಲಿ ಹುಟ್ಟಿ ಪದವಿ ಪಡೆದು ಗ್ರಾಮದ ಪಂಚಾಯ್ತಿ ನಡೆಸುವ ಮಟ್ಟಕ್ಕೆ ಬೆಳೆದು ಹೆಸರು ಮಾಡುತಿದ್ದಾಗ ಮೈಸೂ ರಿನ ಪ್ರಜಾಪ್ರತಿನಿಧಿ ಸಭೆಗೆ ೧೯೪೧ ರಲ್ಲಿ ಆಯ್ಕೆಯಾಗುತ್ತಾರೆ. ನಂತರ ೧೯೪೫ ರಲ್ಲಿ ನೂರೈವತ್ತು ರೂಪಾಯಿ ಠೇವಣಿ ನೀಡಲು ಹಣವಿಲ್ಲದ ದೇವರಾಜ್‌ ಅರಸುರನ್ನು ಮೈಸೂರು ಪ್ರಜಾಪ್ರತಿನಿಧಿ ಸಭೆ ನಂತರ ಮೈಸೂರು ರಾಜ್ಯದ ವಿಧಾನಸಭೆಗೆ ಕಳುಹಿಸಿದ್ದು ಹುಣಸೂರಿನ ಹೆಚ್ಚುಗಾರಿಕೆ.

೧೯೫೨ ರಲ್ಲಿ ಹುಣಸೂರಿನ ಶಾಸಕರಾಗಿದ್ದ ದೇವರಾಜು ಅರಸು ಮೈಸೂರು ಸಂಸ್ಥಾನ, ಜಮೀನ್ಧಾರಿಕೆ, ರಾಜಪ್ರಭುತ್ವದ ವಿರುದ್ಧ ಸೆಣಸುತ್ತಾ ೧೯೭೨ ರಲ್ಲಿ ಮುಖ್ಯಮಂತ್ರಿಯಾಗುವ ವರೆಗೆ ದೇವರಾಜ್‌ ಅರಸು ಸವೆಸಿದ್ದು ಹೋರಾಟದ ರಾಜಕೀಯ ಬದುಕನ್ನು.

ಸ್ವಾತಂತ್ರ್ಯ ಪೂರ್ವಕಾಲದಿಂದ ಜನಪ್ರತಿನಿಧಿಯಾಗುತ್ತಾ ನಂತರ ಸಚಿವ, ಮುಖ್ಯಮಂತ್ರಿ ಆಗುವವರೆಗೆ ಸಮಾಜದ ಎಲ್ಲಾ ಜನವರ್ಗಗಳನ್ನು ಗಮನಿಸುತ್ತಾ ಬಂದಿದ್ದ ದೇವರಾಜ್‌ ಅರಸು ಅವರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲದ ತಬ್ಬಲಿ ಜಾತಿಗಳ ಬಗ್ಗೆ ಕಳಕಳಿ ಹುಟ್ಟಲು ಕಾರಣವಾದದ್ದು ಲೋಹಿಯಾವಾದ ಮತ್ತು ಸಮಾಜವಾದ.

ಕಾಂಗ್ರೆಸ್‌ ನಲ್ಲಿದ್ದು ಸಮಾಜವಾದ ಲೋಹಿಯಾವಾದಗಳ ಅಧ್ಯಯನ ನಡೆಸಿದ್ದ ದೇವರಾಜ್‌ ಅರಸು ಭೂ ಸುಧಾರಣೆ, ಸ್ಟೈಪಂಡ್ರಿ ಯೋಜನೆ ಜಾರಿಮಾಡಬೇಕಾದಾಗ ನೆರವಿಗೆ ಬಂದಿದ್ದು ಇದೇ ಓದು, ಗೃಹಿಕೆ.

ಭೂಮಾಲಿಕರು,ಜಮೀನ್ಧಾರರ ಒಡನಾಟದ ಕಾಂಗ್ರೆಸ್‌ ಮುಖಂಡ ದೇವರಾಜ್‌ ಅರಸು ಮುಖ್ಯಮಂತ್ರಿಯಾಗಿ ೧೯೭೨ ರಲ್ಲಿ ಊಳುವವನೇ ನೆಲದೊಡೆಯ, ಪದವಿಧರ ನಿರುದ್ಯೋಗಿಗಳಿಗೆ ಸ್ಟೈಪಂಡರಿ ಯೋಜನೆ, ಗ್ರಾಮೀಣ ಬಡವರಿಗೆ ಭಾಗ್ಯಜ್ಯೋತಿ ಯೋಜನೆ ಜಾರಿಮಾಡದಿದ್ದರೆ ಕರ್ನಾಟಕದ ಸಾಮಾಜಿಕ ವ್ಯವಸ್ಥೆ ನಕ್ಸಲ್‌ ಬರಿ ಚಳವಳಿಯತ್ತ ಮುಖಮಾಡುವ ಅಪಾಯವಿತ್ತು ಎಂದು ಅರಿತಿದ್ದ ದೇವರಾಜ್‌ ಅರಸು ಭಾರತದ ರೈತನಿಗೆ ಭೂಮಿ ಭದ್ರತೆಯ ಭಾವ ನೀಡುವ ಜೊತೆಗೆ ನೆಲದಭಾವನಾತ್ಮಕತೆ ಇಲ್ಲಿಯ ಬಡವರ ಉಸಿರು ಎಂಬುದನ್ನೂ ಅರಿತಿದ್ದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ೧೯೩೮ ರಷ್ಟು ಹಿಂದೆ ಉತ್ತರ ಕನ್ನಡಜಿಲ್ಲೆಯ ಅಂಕೋಲಾದಲ್ಲಿ ರೈತಕೂಟದ ಮೂಲಕ ದಿನಕರ ದೇಸಾಯಿಯವರ ನೇತೃತ್ವದಲ್ಲಿ ರೈತಹೋರಾಟ ಪ್ರಾರಂಭವಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಚಳವಳಿ, ರೈತ ಹೋರಾಟಗಳಿಂದ ಸ್ಫೂರ್ತಿಗೊಂಡಿದ್ದ ಸಿದ್ಧಾಪುರದ ಹೊಸೂರಿನ ಗಣಪತಿಯಪ್ಪ ಸಾಗರದ ಕಾಗೋಡಿನಲ್ಲಿ ರೈತಸಂಘದ ನೇತೃತ್ವದಲ್ಲಿ ಪ್ರಾರಂಭಿಸಿದ್ದ ಕಾಗೋಡು ಹೋರಾಟಸ್ವಾತಂತ್ರ್ಯಾ ನಂತರ ಪ್ರಾರಂಭಗೊಂಡು ಸಮಾಜವಾದಿಗಳ ಅನುಕಂಪ,ಬೆಂಬಲ ಗಿಟ್ಟಿಸಿತ್ತು.

ಈ ಹೋರಾಟ, ಇದರಿಂದ ಆದ ಸಾಮಾಜಿಕ ಸ್ಥಿತ್ಯಂತರಗಳ ಅರಿವಿದ್ದ ಡಿ.ದೇವರಾಜ್‌ ಅರಸು ಭೂಸುಧಾರಣೆ ಮಸೂದೆ ಜಾರಿ ಮಾಡುವ ಮೂಲಕ ಈ ಹೋರಾಟ ಮತ್ತು ಹೋರಾಟಗಾರರಿಗೆ ಗೌರವ ನೀಡಿದರು. ಈ ಸರ್ಕಾರಿ ಕಾನೂನುಕ್ರಮದ ಜನಪರ ಕಾರ್ಯಕ್ರಮವನ್ನು ಡಾ. ಚಂದ್ರಶೇಖರ್‌ ಕಂಬಾರ್‌ ಕರೆದದ್ದು ಈ ಕಾರ್ಯಕ್ರಮ ಕಾಗೋಡು ಹೋರಾಟದ ತಾರ್ಕಿಕ ಅಂತ್ಯ ಎಂದು. ಒಂದು ಚಳವಳಿ ಸಫಲವಾಗುವುದು ಆ ಹೋರಾಟದ ತಾರ್ಕಿಕ ಅಂತ್ಯ ಎನ್ನುವ ಫಲಿತಾಂಶ ದೇವರಾಜ್‌ ಅರಸು ಕಾರ್ಯಕ್ರಮದ ಹೆಚ್ಚುಗಾರಿಕೆ ಕೂಡಾ.

ದೇವರಾಜ್‌ ಅರಸು ದೀನದುರ್ಬಲರಿಗೆ, ಹಿಂದುಳಿದವರಿಗೆ,ನಿಮ್ನವರ್ಗಗಳಿಗೆ ಸಾಮಾಜಿಕ,ರಾಜಕೀಯ ಸಮಾನತೆಯ ಜೊತೆಗೆ ಆರ್ಥಿಕ ಸಮಾನತೆಯ ಮಹತ್ವವನ್ನು ಪ್ರತಿಪಾದಿಸಿದ್ದರು.ಜೀತಪದ್ಧತಿ ನಿವಾರಣೆ, ನಿರುದ್ಯೋಗ ನಿವಾರಣೆ,ಅಶಕ್ತರ ಸಬಲೀಕರಣದ ಕನಸು ಕಂಡಿದ್ದ ದೇವರಾಜ್‌ ಅರಸು ಸಾಹಿತಿಗಳು, ಸಮಾಜವಿಜ್ಞಾನಿಗಳು ಗುರುತಿಸುವ ಕರ್ನಾಟಕದ ಮಹತ್ವದ ಕೊಡುಗೆಗಳಲ್ಲಿ ದೇವರಾಜ್‌ ಅರಸು ನೇತೃತ್ವದ ಸರ್ಕಾರ ಜಾರಿಮಾಡಿದ ಭೂಸುಧಾರಣೆ ಮತ್ತು ಲಂಕೇಶರ ಗದ್ಯ ಎನ್ನುವುದು. ಕರ್ನಾಟಕದ ಅಸ್ಮಿತೆ,ಐಡೆಂಟಿಟಿ ಕೂಡಾ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *