

ಈ ವರ್ಷ ಅದಾನಿ ಆದಾಯ ದಿನವೊಂದಕ್ಕೆ 1,000 ಕೋಟಿ: ಶ್ರೀಮಂತರ ಪಟ್ಟಿ ಹೀಗಿದೆ…
ಈ ವರ್ಷ ಭಾರತ 179 ಮಂದಿ ಸೂಪರ್ ರಿಚ್ ವ್ಯಾಪ್ತಿಗೆ ಬಂದಿದ್ದು, ಅದಾನಿ ಸಮೂಹದ ಗೌತಮ್ ಅದಾನಿ ವಾರ್ಷಿಕ 3,65700 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅಥವಾ ದಿನವೊಂದಕ್ಕೆ 1,000 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಸಂಪಾದಿಸಿದ್ದಾರೆ.
ಉತ್ತರ ಕನ್ನಡ ಸುಂದರ ಜಿಲ್ಲೆಯಾಗಿದ್ದು ಇಲ್ಲಿಯ ಜನರ ಪ್ರೀತಿಗೆ ತಲೆಬಾಗಿದ್ದೇನೆ ಎಂದಿರುವ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಜಿಲ್ಲೆಯಲ್ಲಿ ಬಹುವಿಶೇಶಗಳ ಮಲ್ಟಿಸ್ಪೆಶಾಲಿಟಿ ಆಸ್ಫತ್ರೆ ನಿರ್ಮಾಣಕ್ಕೆ ಪ್ರಯತ್ನಿಸದಿರುವುದು ಸೋಜಿಗ ಎಂದಿದ್ದಾರೆ. ಸಿದ್ಧಾಪುರದ ಕಾವಂಚೂರು ಬಸರಮನೆ ಹಳ್ಳಕ್ಕೆ ತಮ್ಮ ಅನುದಾನದಲ್ಲಿ ನಿರ್ಮಾಣವಾದ ಸೇತುವೆ ಉದ್ಘಾಟಿಸಿದ ನಂತರ ಅತ್ತಿಸವಲು ಸಭಾಭವನ ನಿರ್ಮಾಣಕ್ಕೆ ಅನುದಾನ ಘೋಶಿಸಿ ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಯ ರಾಜಕಾಣಿಗಳ ಬಗ್ಗೆ ಗೌರವವಿದೆ ಆದರೆ ಈ ಕ್ಷೇತ್ರದ ಶಾಸಕರು, ಸ್ಫೀಕರ್ ಕಾಗೇರಿಯವರಾಗಲಿ,ಸಂಸದ ಅನಂತಕುಮಾರ ಹೆಗಡೆಯವರಾಗಲಿ ಕ್ಷೇತ್ರ, ಜಿಲ್ಲೆಯ ಮೂಲಭೂತ ಅಗತ್ಯಗಳಿಗೆ ಸ್ಫಂದಿಸುವ ಕೆಲಸ ಮಾಡಿದಂತೆ ಕಾಣುತ್ತಿಲ್ಲ.ಮಾಜಿ ಸಚಿವ ಅನಂತಕುಮಾರ ಹೆಗಡೆಯವರ ಸಹಾಯ ನಮಗೂ ದೊರೆತಿದೆ ಆದರೆ ಜಿಲ್ಲೆಗೆ ಸುಸಜ್ಜಿತ ಆಸ್ಫತ್ರೆ ನಿರ್ಮಾಣ ಮಾಡುವ ವಿಚಾರದಲ್ಲಿ ಅವರು ಪ್ರಯತ್ನಿಸಿದ್ದರೆ ನಾವೂ ಸಹಕರಿಸುತಿದ್ದೆವು ಎಂದು ಜಿಲ್ಲೆಯ ತೊಂದರೆಗೆ ಮರುಗಿದ ಚಂದ್ರಶೇಖರ್ ಕನ್ನಡ ಶಾಲೆ ಉಳಿಸುವ ಕೆಲಸ,ಮೂಲಭೂತ ಸೌಲಭ್ಯ ನೀಡಿಕೆ ಸೇರಿದಂತೆ ಜಿಲ್ಲೆಯ ಅಗತ್ಯಕ್ಕೆ ಸ್ಫಂದಿಸುವ ಕೆಲಸಕ್ಕೆ ತಮ್ಮ ಸಹಕಾರ ಮುಂದುವರಿಯಲಿದೆ ಎಂದರು.
ರಾಜ್ಯ ಕೇಂದ್ರ ಸರ್ಕಾರಗಳಿಗೆ ಕಾರ್ಯಕ್ರಮ ಅನುಷ್ಠಾನದ ಆಸಕ್ತಿ ಇಲ್ಲ, ಹೊಸ ಶಿಕ್ಷಣ ನೀತಿಯಂತೆ ಈ ಸರ್ಕಾರಗಳ ಬಹುತೇಕ ಯೋಜನೆಗಳು ವಿಮಾನ ಬರುವಂತೆ ಮಾಡಿ ಲ್ಯಾಂಡಿಂಗ್ ವ್ಯವಸ್ಥೆ ಮಾಡದಂತಾಗಿವೆ. ಜನರ ತೆರಿಗೆ ಹಣ ತ್ರಿಶಂಕು ಸ್ಥಿತಿಯಲ್ಲಿ ಪೋಲಾಗುತ್ತಿರುವುದಕ್ಕೆ ಈ ಸರ್ಕಾರದ ನೀತಿಗಳೇ ಉದಾಹರಣೆ ಎಂದರು

ಮುಂಬೈ: ಈ ವರ್ಷ ಭಾರತ 179 ಮಂದಿ ಸೂಪರ್ ರಿಚ್ ವ್ಯಾಪ್ತಿಗೆ ಬಂದಿದ್ದು, ಅದಾನಿ ಸಮೂಹದ ಗೌತಮ್ ಅದಾನಿ ವಾರ್ಷಿಕ 3,65700 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅಥವಾ ದಿನವೊಂದಕ್ಕೆ 1,000 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಸಂಪಾದಿಸಿದ್ದಾರೆ.
ಭಾರತದಲ್ಲಿನ ಸೂಪರ್ ರಿಚ್ ಗಳ ಸಂಖ್ಯೆ 1,000 ನ್ನು ದಾಟಿದೆ ಎಂದು ಸೆ.30 ರಂದು ಪ್ರಕಟಗೊಂಡ ಹುರುನ್ ಇಂಡಿಯಾ-ಐಐಎಫ್ಎಲ್ ಶ್ರೀಮಂತ ಪಟ್ಟಿ ಮೂಲಕ ತಿಳಿದುಬಂದಿದೆ.

https://imasdk.googleapis.com/js/core/bridge3.482.0_en.html#goog_130422801
ಭೌಗೋಳಿಕವಾಗಿ ಐದು ನಗರಗಳು ಸೂಪರ್ ರಿಚ್ ಗಳ ವಾಸಸ್ಥಾನಕ್ಕೆ ಸೇರ್ಪಡೆಯಾಗಿದ್ದು, ಸೂಪರ್ ರಿಚ್ ನಗರಳ ಸಂಖ್ಯೆ 119 ಕ್ಕೆ ಏರಿಕೆಯಾಗಿದೆ ಹಾಗೂ ಈ 1007 ವ್ಯಕ್ತಿಗಳು 2021 ರಲ್ಲಿ ಶೇ.51 ರಷ್ಟು ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ.
ಈ ವರ್ಷ ಕೊರೋನಾ ಸಾಂಕ್ರಾಮಿಕದ ಅಂಗವಾಗಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದರೆ ಇತ್ತ ಸರಾಸರಿ ಶೇ.25 ರಷ್ಟು ಸಂಪತ್ತು ಏರಿಕೆಯಾಗಿದೆ.
ಹುರುನ್ ಇಂಡಿಯಾ-ಐಐಎಫ್ಎಲ್ ವರದಿಯ ಪ್ರಕಾರ, 1,007 ರ ಮಂದಿಯ ಪೈಕಿ 13 ಮಂದಿ 1,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಂಪತ್ತು ಹೊಂದಿರುವ ದೇಶದಲ್ಲಿ 1 ಲಕ್ಷ ಕೋಟಿಗಿಂತಲೂ ಹೆಚ್ಚಿನ ಸಂಪತ್ತನ್ನು ಹೊಂದಿದ್ದು,
ಮುಖೇಶ್ ಅಂಬಾನಿ 7,18,000 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಸತತ 10ನೇ ವರ್ಷವೂ ಶ್ರೀಮಂತರ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಮುಂದುವರೆದಿದ್ದು 2020 ರಲ್ಲಿ ಶೇ.9 ರಷ್ಟು ಮಾತ್ರ ಏರಿಕೆಯಾಗಿದೆ. ನಂತರದ ಸ್ಥಾನದಲ್ಲಿ ಅದಾನಿ ಕುಟುಂಬ ಇದ್ದು 5,05,900 ಕೋಟಿ ರೂಪಾಯಿಗಳ ಸಂಪತ್ತನ್ನು ಹೊಂದಿದ್ದು, 1,40,200 ಕೋಟಿ ರೂಪಾಯಿಗಳಿಂದ ಶೇ.261 ರಷ್ಟು ಏರಿಕೆ ಕಂಡಿದೆ. ಈ ಮೂಲಕ ಅದಾನಿ ಏಷ್ಯಾದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಮೂರನೇ ಸ್ಥಾನದಲ್ಲಿ ಹೆಚ್ ಸಿಎಲ್ ನ ಶಿವ್ ನಾದರ್ ಹಾಗೂ ಕುಟುಂಬದವರಿದ್ದು 2,36,600 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು ಶೇ.67 ರಷ್ಟು ಏರಿಕೆಯಾಗಿದೆ. (kpc)

