


ಎರಡು ಹೆಣ್ಣು, ಒಂದು ಗಂಡು: 7 ತಿಂಗಳಿಗೇ ನಾರ್ಮಲ್ ಡೆಲಿವರಿ, ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಕುಮಟಾದ ತಾಯಿ
ಕಾರವಾರದ ಡಾ. ಜಾನು ಮಣಕಿಕರ್ಸ್ ಮೆಟರ್ನಿಟಿ ಮತ್ತು ನರ್ಸಿಂಗ್ ಹೋಮ್ ಮಹಿಳೆಯೊಬ್ಬರು ಏಳು ತಿಂಗಳಲ್ಲೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.
ನಿವೃತ್ತ ನೌಕರರ ಸಂಘದ ಅಡಿಯಲ್ಲಿ ಐವರಿಗೆ ಸನ್ಮಾನ _
ಸಿದ್ದಾಪುರ-: ತಾಲೂಕಾ ನಿವೃತ್ತ ನೌಕರರ ಸಂಘದ ವತಿಯಿಂದ ಹಿರಿಯ ನಾಗರಿಕರುಗಳಿಗೆ ಸನ್ಮಾನ್ಯ ಕಾರ್ಯಕ್ರಮ ಲಯನ್ಸ್ ಬಾಲಭವನದಲ್ಲಿ ನೆರವೇರಿತು. ಅಧ್ಯಕ್ಷತೆಯನ್ನು ತಾಲೂಕಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್ ಹೆಗ್ಗೋಡಮನೆಯವರು ವಹಿಸಿ, ಹಿರಿಯ ನಾಗರಿಕರಿಗೆ ಗೌರವ ಸಲ್ಲಿಸುವುದು ಸಂಘದ ಉದ್ದೇಶ ಹಾಗೂ ಆರೋಗ್ಯ ರಕ್ಷಣೆಯೊಂದಿಗೆ ಉತ್ತಮ ಗ್ರಂಥಗಳ ಅಧ್ಯಯನದ ಮೂಲಕ ಜೀವನೋತ್ಸಾಹ ಹೆಚ್ಚಿಸಿಕೊಳ್ಳುವಂತೆ ಕರೆ ನೀಡಿದರು.
ಸಾಹಿತಿಗಳು, ನಿವೃತ್ತ ಶಿಕ್ಷಕರು ಆದ ಆರ್.ಕೆ. ಹೊನ್ನೆಗುಂಡಿ, ನಿವೃತ್ತ ಉಪತಹಶೀಲದಾರ ಎಂ.ಜಿ. ಗೌಡರ್ ನೆಜ್ಜೂರು, ಕವಿಗಳು, ನಿವೃತ್ತ ವೈದ್ಯಾಧಿಕಾರಿ ಡಾ|| ಪ್ರಭಾಶಂಕರ ಹೆಗಡೆ ಕಿಲಾರ, ನಿವೃತ್ತ ಮುಖ್ಯ ಶಿಕ್ಷಕ ಕೆ.ಐ. ಹೆಗಡೆ ತಾರಗೋಡ, ನಿವೃತ್ತ ಪೌರಕಾರ್ಮಿಕ ಯಮುನಾ ಶೇಖರ್ ಸಿದ್ದಾಪುರ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತರೆಲ್ಲರೂ ಮಾತನಾಡಿ ಕೃತಜ್ಞತೆ ಅರ್ಪಿಸಿ ಸಂಘವು ಕ್ರಿಯಾತ್ಮಕವಾಗಿ ಕೆಲಸ ನಿರ್ವಹಿಸುತ್ತಿದ್ದ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.
ಪ್ರಾರಂಭದಲ್ಲಿ ನಿವೃತ್ತ ನೌಕರರುಗಳಾದ ೯ ಜನ ಸದಸ್ಯರುಗಳು ಎರಡು ವರ್ಷದ ಅವಧಿಯಲ್ಲಿ ಮೃತರಾಗಿದ್ದು ಅವರಿಗೆಲ್ಲ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ರವಿಕುಮಾರ್ ಹಿರಿಯ ನಾಗರಿಕರಿಗೆ ಬ್ಯಾಂಕಿನಲ್ಲಿ ಕಲ್ಪಿಸುವ ಸೌಲಭ್ಯವನ್ನು ಹೆಚ್ಚಿಸಿ ಅವರ ತೊಂದರೆಗಳಿಗೆ ಸಹಕರಿಸುವುದಾಗಿ ಹೇಳಿ, ಬ್ಯಾಂಕಿನಿಂದ ಸಿಗಬಹುದಾದ ಸೌಲಭ್ಯಗಳ ಕುರಿತು ತಿಳಿಸಿದರು. ಬ್ಯಾಂಕಿನ ಕ್ಷೇತ್ರ ವಿಸ್ತರಣಾಧಿಕಾರಿ ನಿತಿನ್ ಉಪಸ್ಥಿತರಿದ್ದರು.
ಬ್ಯಾಂಕಿನಿಂದ ಕಲ್ಪಿಸಲಾಗುವ ವಿವಿಧ ಸೌಲಭ್ಯಗಳನ್ನು ಸಕಾಲದಲ್ಲಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಂತೆ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್ ಹೆಗ್ಗೋಡಮನೆ ಹೇಳಿದರು.
ಸನ್ಮಾನಿತರ ಕುರಿತು ರಾಷ್ಟçಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಸಾಹಿತಿ ತಮ್ಮಣ್ಣ ಬೀಗಾರ ಅಭಿನಂದಿಸಿ ಮಾತನಾಡಿದರು. ಸಂಘದ ಕಾರ್ಯದರ್ಶಿ ವಾಸುದೇವ ಎಸ್. ಶೇಟ್ ಹಾಳದಕಟ್ಟಾ ಸ್ವಾಗತಿಸಿ, ಲೆಕ್ಕಪತ್ರಗಳ ವಿವರ ಸಾದರ ಪಡಿಸಿದರು.
ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು. ನಿವೃತ್ತ ಶಿಕ್ಷಣ ಸಂಯೋಜಕ ಜಿ.ಎಂ. ಕುಮಟಾಕರ ವಂದಿಸಿದರು.
ಕಾರವಾರ: ಮಹಿಳೆಯೋರ್ವಳು ಅವಧಿ ಪೂರ್ವವೇ ತ್ರಿವಳಿ ಮಕ್ಕಳಿಗೆ ಸಹಜ ಹೆರಿಗೆ ಮೂಲಕ ಜನ್ಮ ನೀಡಿರುವ ಅಪರೂಪದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದ್ದು, ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ.
ತ್ರಿವಳಿ ಮಕ್ಕಳಿಗೆ ಮಹಿಳೆ ಜನ್ಮ ನೀಡಿದ ಬಗ್ಗೆ ವೈದ್ಯರಿಂದ ಮಾಹಿತಿ
ಗೋಕರ್ಣದ ಗಂಗಾವಳಿ ನಿವಾಸಿ ಹಲೀಮಾ ಸಾಧಿಕ್ ಸಾಬ್ ಎಂಬುವರಿಗೆ 7ನೇ ತಿಂಗಳಿನಲ್ಲೇ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ, ಪಟ್ಟಣದ ಡಾ. ಜಾನು ಮಣಕಿಕರ್ಸ್ ಮೆಟರ್ನಿಟಿ ಮತ್ತು ನರ್ಸಿಂಗ್ ಹೋಮ್‍ನಲ್ಲಿ ದಾಖಲಿಸಲಾಗಿತ್ತು. ಗರ್ಭಿಣಿಯನ್ನು ಪರೀಕ್ಷಿಸಿದ ವೈದ್ಯ ಡಾ. ಪ್ರಶಾಂತ ಮಣಕಿಕರ್ ಹೆರಿಗೆ ಮಾಡಿಸುವ ಬಗ್ಗೆ ತಿಳಿಸಿದ್ದರು. ಅದರಂತೆ ಇಂದು ಸುರಕ್ಷಿತ ಮತ್ತು ಯಶಸ್ವಿಯಾಗಿ ನಾರ್ಮಲ್ ಹೆರಿಗೆ ಮಾಡಿಸಲಾಗಿದ್ದು, ಹಲೀಮಾ ಸಾದಿಕ್ ಸಾಬ್ ಅವರು ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ತಾಯಿ ಮತ್ತು ಮೂರೂ ಶಿಶುಗಳು ಆರೋಗ್ಯವಾಗಿವೆ. ಆದರೂ ಕೂಡ ಶಿಶುಗಳ ಸಂಪೂರ್ಣ ಬೆಳವಣಿಗೆಯಾಗದ ಕಾರಣ ಅವುಗಳ ಆರೋಗ್ಯ ಸುರಕ್ಷತಾ ದೃಷ್ಟಿಯಿಂದ ಮಣಿಪಾಲ ಆಸ್ಪತ್ರೆಯ ಶಿಶು ಸುರಕ್ಷತಾ ಕೇಂದ್ರದಲ್ಲಿ ಇರಿಸಲಾಗಿದೆ.


7 ತಿಂಗಳಿಗೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಪ್ರಶಾಂತ ಮಣಕಿಕರ್ ತಮ್ಮ ಆಸ್ಪತ್ರೆಯಲ್ಲಿ ಇದೇ ಮೊದಲು ತ್ರಿವಳಿ ಮಕ್ಕಳಿಗೆ ಮಹಿಳೆ ಜನ್ಮ ನೀಡಿದ ಘಟನೆ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹೆರಿಗೆ ಸಮಯದಲ್ಲಿ ಯಾವುದೇ ತೊಂದರೆಯಾಗಿಲ್ಲ, ಎಲ್ಲಾ ಸುಸೂತ್ರವಾಗಿ ನಾರ್ಮಲ್ ಹೆರಿಗೆ ಆಗಿದೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. (etbk)
