

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇಪ೯ಡೆಯಾದ ಪುಠಾಣಿ ತ್ರಿಶಿಕಾ..
ಸಿದ್ದಾಪುರದ ಚಿನ್ನದ ಉದ್ಯಮಿಗಳಾದ ಪ್ರಸನ್ನ ಜ್ಯೂವೆಲಸ್೯ನ ಸುಶಾಂತ್ ಶೇಟ್ ಮತ್ತು ನಂದಿನಿ ಶೇಟ್ ದಂಪತಿಗಳ ಕೇವಲ 2 ವಷ೯ 8 ತಿಂಗಳ ಪುಠಾಣಿ ಪೋರಿ ತ್ರಿಶಿಕಾ ಶೇಟ್ ತನ್ನ ಅಸಾಧಾರಣ ನೆನಪಿನ ಶಕ್ತಿಯ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾಡ್೯ ದಾಖಲೆಯಲ್ಲಿ ಸೇಪ೯ಡೆಯಾಗಿದ್ದಾಳೆ.
ತನ್ನ ತೊದಲು ನುಡಿಗಳ ಮೂಲಕವೇ ಸಾಮಾನ್ಯ ವಿಷಯಗಳ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಪಟಪಟನೆ ನುಡಿ ಮುತ್ತುಗಳನ್ನು ಉದುರಿಸುವ ಪುಠಾಣಿ ತ್ರಿಶಿಕಾಳಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು 2021 ನೇ ಸಾಲಿನ ಪ್ರಶಸ್ತಿ ಹಾಗೂ ಪದಕವನ್ನು ನೀಡಿ ಗೌರವಿಸಿದೆ.
ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ 6 ಮಕ್ಕಳನ್ನು ಲೈಫ್ ಗಾರ್ಡ್ ಹಾಗೂ ಟೂರಿಸ್ಟ್ ಮಿತ್ರ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ದೇಶ ಹಾಗೂ ರಾಜ್ಯಕ್ಕೆ ಸಂಬಂಧಪಟ್ಟ ಹಲವು ಮಾಹಿತಿಗಳ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ವಣ೯ಮಾಲೆ, ಇಂಗ್ಲಿಷ್ ವಣ೯ಮಾಲೆಯ ಎ ಯಿಂದ ಜೆಡ್ ವರೆಗಿನ ಪ್ರತಿ ಅಕ್ಷರಗಳ ಪದ ಜೋಡಣೆ, 1ರಿಂದ 20ವರೆಗಿನ ಸಂಖ್ಯೆ ಹೇಳುವುದು, ಮನುಷ್ಯನ ದೇಹದ 18 ಅಂಗಾಂಗಗಳ ಹೆಸರು, ಬಣ್ಣಗಳನ್ನು ಗುರುತು ಹಿಡಿಯುವುದು, ಸೂಯ೯ ನಮಸ್ಕಾರ, ಶಾಸ್ತ್ರದ 8 ಮಂತ್ರಗಳು, ಕಾಮನ ಬಿಲ್ಲಿನ ಬಣ್ಣವನ್ನು ಹೇಳುವುದು, ಪಂಚೇಂದ್ರಿಯಗಳು, ವಾರಗಳು, ಮಾಸಗಳು, ದಿಕ್ಕುಗಳು, ಋತುಗಳು, ಸೂಯ೯ಮಂಡಲದ ಗ್ರಹಗಳ ಹೆಸರು, ತಿಥಿಗಳು, ಕಾಲಗಳು ಸೇರಿದಂತೆ ಸಾಮಾನ್ಯ ಜ್ಞಾನದ ಬಗ್ಗೆ ಅಗಾಧವಾದ ಜ್ಞಾಪಕ ಶಕ್ತಿ ಹೊಂದಿರುವ ತ್ರಿಶಿಕಾ ಎಲ್ಲವನ್ನೂ ಹೇಳುತ್ತಾಳೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ನ ದಾಖಲೆಯಲ್ಲಿ ಸೇಪ೯ಡೆಯಾದ ಕುಮಾರಿ ತ್ರಿಶಿಕಾ ಸಾಧನೆಗೆ ಜನತೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಕಾರವಾರದಲ್ಲಿ ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ 6 ಮಕ್ಕಳ ರಕ್ಷಣೆ
ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ 6 ಮಕ್ಕಳನ್ನು ಲೈಫ್ ಗಾರ್ಡ್ ಹಾಗೂ ಟೂರಿಸ್ಟ್ ಮಿತ್ರ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಕಾರವಾರ: ಪ್ರವಾಸಕ್ಕೆ ಬಂದು ಸಮುದ್ರ ಪಾಲಾಗುತ್ತಿದ್ದ 6 ಮಕ್ಕಳನ್ನು ಲೈಫ್ ಗಾರ್ಡ್ ಹಾಗೂ ಟೂರಿಸ್ಟ್ ಮಿತ್ರ ಸಿಬ್ಬಂದಿ ಇಂದು ರಕ್ಷಿಸಿದ್ದಾರೆ. ಇಲ್ಲಿನ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಈ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಪ್ರವಾಸಕ್ಕೆ ಆಗಮಿಸಿದ್ದ 13 ಮಂದಿ ಪೈಕಿ ಒಂದೇ ಕುಟುಂಬದ 4 ಮಕ್ಕಳು ಸೇರಿ ಒಟ್ಟು 6 ಮಕ್ಕಳು ವಾಟರ್ ಸ್ಪೋರ್ಟ್ಸ್ ಮುಗಿಸಿಕೊಂಡು ಕಡಲ ತೀರದಲ್ಲಿ ಆಟವಾಡುತ್ತಿದ್ದರು. ಈ ವೇಳೆ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಪಾಲಕರಿಗೆ ಮಕ್ಕಳನ್ನು ನೀರಿನಲ್ಲಿ ಮುಂದೆ ಹೋಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು. ಆದರೂ ಮಕ್ಕಳು ಆಟವಾಡುತ್ತ ಮುಂದೆ ಸಾಗಿದ್ದು, ಒಮ್ಮೆಲೇ ಬಂದ ಅಲೆಯಿಂದ ಎಲ್ಲರೂ ಕೊಚ್ಚಿ ಹೋಗಿದ್ದಾರೆ.
ತಕ್ಷಣ ಕುಟುಂಬಸ್ಥರು ಕೂಗಿಕೊಂಡಿದ್ದಾರೆ. ಬಳಿಕ ರಕ್ಷಣೆಗೆ ಧಾವಿಸಿದ ಲೈಫ್‌ಗಾರ್ಡ್, ಟೂರಿಸ್ಟ್ ಮಿತ್ರ ಸಿಬ್ಬಂದಿ 6 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಮಕ್ಕಳು ನೀರು ಕುಡಿದಿದ್ದರಿಂದ ಪ್ರಜ್ಞೆ ತಪ್ಪಿದ್ದರು. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. (etbk)
