

ಉತ್ತರ ಕಕನ್ನಡ ಜಿಲ್ಲೆಯಲ್ಲಿ ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂದು ಜಿಲ್ಲೆಯಲ್ಲಿ ದೃಢವಾಗುತ್ತಿರುವ 27 ಪ್ರಕರಣಗಳಲ್ಲಿ ಯಥಾ ಪ್ರಕಾರ ಭಟ್ಕಳಕ್ಕೆ ಸಿಂಹಪಾಲು ಉಳಿದಂತೆ ಕುಮಟಾ, ಶಿರಸಿ, ಹಳಿಯಾಳ ಸೇರಿದ ಪ್ರಕರಣಗಳಿವೆ.


ಇದೇವಾರದಲ್ಲಿ ಒಂದು ಕಾಲು ಶತಕ ಕರೋನಾ ಸೋಂಕಿತರ ಸಂಖ್ಯೆ ದಾಖಲಿಸಿರುವ ಉತ್ತರಕನ್ನಡ ಜಿಲ್ಲೆ ಈ ವರೆಗೆ ಮೂರು ಸಾವುಗಳಿಗೂ ಸಾಕ್ಷಿಯಾಗಿದೆ. ಈ ಸಂಕಷ್ಟದ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ತಾಲೂಕುಗಳ ಹೆಚ್ಚಿನ ಜನ ಲಾಕ್ ಡೌನ್ ನತ್ತ ಒಲವು ತೋರಿದ್ದು ಸ್ವಯಂಪ್ರೇರಿತರಾಗಿ ಲಾಕ್ಡೌನ್ ಗೆ ಮುಂದಾಗಿದ್ದಾರೆ. ಕುಮಟಾದಲ್ಲಿ ಸರ್ವಪಕ್ಷಗಳ ಮುಖಂಡರ ಸಭೆ ನಡೆಸಿದ ಸ್ಥಳಿಯರು ಅರ್ಧದಿನ ಲಾಕ್ ಡೌನ್ ಗೆ ನಿರ್ಣಯಿಸಿದ್ದಾರೆ. ಸರ್ಕಾರ ಲಾಕ್ ಡೌನ್ ಇಲ್ಲ ಎನ್ನುತ್ತಿರುವಂತೆ ಜಿಲ್ಲೆಯಾದ್ಯಂತ ಸ್ಥಳಿಯರು, ಸಂಘಟನೆಗಳು ಸ್ವಯಂ ಪ್ರೇರಿತ ಲಾಕ್‍ಡೌನ್ ಮುಂದುವರಿಸಿದ್ದಾರೆ.
ಉ.ಕ. ಲಾಕ್ ಡೌನ್ ಗೆ ಒಲವು,ಸ್ವಯಂ ಪ್ರೇರಿತ ಬಂದ್ ಗೆ ತೀರ್ಮಾನ
ಬೆಂಗಳೂರಿನಲ್ಲಿ ಚಿಕಿತ್ಸೆ ಸಿಗದೆ ಅಲ್ಲಿಂದ ಹುಟ್ಟೂರು ಶಿರಸಿಗೆ ಬಂದು ದೂರದ ಕಾರವಾರದ ಜಿಲ್ಲಾ ಕೇಂದ್ರದ ಕೋವಿಡ್ ಆಸ್ಫತ್ರೆ ಕ್ರಿಮ್ಸ್ ಗೆ ದಾಖಲಾಗಿ ಅಲ್ಲಿ ಜೀವತೆತ್ತು ಹೆಣವನ್ನೂ ಪಡೆಯದ ದುಸ್ಥಿತಿಯ ನಿನ್ನೆಯ ಶಿರಸಿಯ ಮೊದಲ ಕರೋನಾ ಸಾವು ಪರಿಸ್ಥಿತಿಯ ಭೀಕರತೆಗೆ ಹಿಡಿದ ಕನ್ನಡಿ.


ಉತ್ತರಕನ್ನಡ ಜಿಲ್ಲೆಗೆ ಮೊದಲು ವಿದೇಶಗಳಿಂದ ನಂತರ ಪರ ರಾಜ್ಯಗಳಿಂದ ಈಗೀಗ ಹೊರ ಜಿಲ್ಲೆಗಳಿಂದ ಕರೋನಾ ಕರೆತರುತ್ತಿರುವವರು ಹೊಟ್ಟೆಪಾಡಿನ ಉದ್ಯೋಗ ಅರಸಿ ಹೊರೂರುಗಳಿಗೆ ನಡೆದವರು. ಅವರಿಂದ ಭಟ್ಕಳ ಸೇರಿದಂತೆ ಜಿಲ್ಲೆಯ 12 ತಾಲೂಕುಗಳೂ ನಲುಗುತ್ತಿವೆ.,,,,,,……………….. for athentic news &views visit-samajamukhi.net, samajamukhi ಸಮಾಜಮುಖಿ ಕನ್ನೇಶ್ youtube channel plz-subscribe,like, share samajamukhi
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






