ಮಂಗನಖಾಯಿಲೆ ನಿಯಂತ್ರಣಕ್ಕೆ ಸಕಲವೂ ಸಿದ್ಧ ಸರ್ವ ಸನ್ನದ್ಧ

  • ವಿಶೇಶಚೇತನರಿಗೆ ತಾಲೂಕಾ ಆಸ್ಫತ್ರೆಯಲ್ಲಿಯೇ ಪ್ರಮಾಣಪತ್ರ ನೀಡಿಕೆ.
    ಪ್ರತಿಮಂಗಳವಾರ ವಿಶೇಶಚೇತನರ ಪ್ರಮಾಣಪತ್ರ,ಚಿಕಿತ್ಸೆಗೆ ದಿನ ನಿಗದಿ
  • 2019 ರ ಆಗಸ್ಟ್ ನಿಂದಲೇ ಮಂಗನಕಾಯಿಲೆ ನಿರೋಧಕ ಲಸಿಕೆ ನೀಡಿಕೆ ಪ್ರಾರಂಭ,84 ಸಾವಿರ ಡೋಜ್ ಗುರಿ,58706 ಜನರಿಗೆ ಲಸಿಕೆ ನೀಡಲು ಯೋಜನೆ, ಈಗಾಗಲೇ 11 ಸಾವಿರ ಜನರಿಗೆ ನೀಡಿಕೆ.
  • ಜನ,ಜಾನುವಾರುಗಳ ರಕ್ಷಣೆಗೆ ಹೈಪರ್ಮೆಟ್ರಿನ್ ಔಷಧಿ ಬಳಕೆ.
    *ಫೆಬ್ರವರಿ ಅಂತ್ಯದ ಒಳಗೆ ಲಸಿಕೆ ನೀಡಿಕೆ ಸಮಯಮಿತಿ.
  • ಮಂಗನಕಾಯಿಲೆಯ ಸಂಪೂರ್ಣ ಚಿಕಿತ್ಸೆಗೆ ವ್ಯವಸ್ಥೆ, ಮೂರು ತುರ್ತು ವಾಹನ ವ್ಯವಸ್ಥೆ.
    *ಅರಣ್ಯ ಪ್ರವೇಶಕ್ಕೆ ಆರೋಗ್ಯಇಲಾಖೆಯ ಗುರುತಿನ ಚೀಟಿ ಕಡ್ಡಾಯ.
  • ರಕ್ತ ಪರೀಕ್ಷಾ ವರದಿ 48 ಗಂಟೆಗಳೊಳಗೆ ಲಭ್ಯ.
  • ಮಂಗನ ಕಾಯಿಲೆಗೆ ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸರ್ಕಾರದಿಂದ ವೆಚ್ಚಭರಣ
  • ಜಿಲ್ಲೆಯ266 ಶಾಲೆಗಳಲ್ಲಿ ನೋಡೆಲ್ ಟೀಚರ್ ನೇಮಕ.
  • ಜಿ.ಪಂ.ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಕೆಲಸ.
  • ತಾಲೂಕು ಆಸ್ಫತ್ರೆಯ ಹೊರ ರೋಗಿ ಪ್ರವೇಶ ಚೀಟಿ ಶುಲ್ಕ 15 ರಿಂದ 10 ರೂ ಗಳಿಗೆ ಇಳಿಕೆ.
  • ಕಾಡುಪ್ರವೇಶಿಸುವವರಿಗೆ ಸೈಪರ್‍ಮೆಟ್ರಿನ್ ಜೊತೆ ಸಂಪೂರ್ಣ ಬಟ್ಟೆ ಧರಿಸಲು ಸೂಚನೆ, ಕಾಡಿಗೆ ಹೋಗಿ ಬರುವ ಜಾನುವಾರುಗಳು,ಕೊಟ್ಟಿಗೆಗೆ ಸೈಪರ್ ಮೆಟ್ರಿನ್ ನಿಂದ ನಿತ್ಯ ಸ್ನಾನದ ಸಲಹೆ.
  • ತಾಲೂಕಾ ಆಸ್ಫತ್ರೆ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ರಿಂದ ಆಸ್ಫತ್ರೆ ಸುಧಾರಣೆಗೆ ಬೇಡಿಕೆಗಳ ಬೃಹತ್ ಪಟ್ಟಿ ಸಲ್ಲಿಕೆ.
    ಮಂಗನ ಕಾಯಿಲೆ ಮುನ್ನೆಚ್ಚರಿಕೆ ಮತ್ತು ರೋಗಿಗಳ ಉಪಚಾರಕ್ಕೆ ಸರ್ವಸಿದ್ಧತೆಗಳಾಗಿದ್ದು ಸಿದ್ಧಾಪುರ ಮತ್ತು ಉತ್ತರ ಕನ್ನಡದ ಜನತೆ ಈ ಬಗ್ಗೆ ಆತಂಕಕ್ಕೊಳಗಾಗುವ ಅನಿವಾರ್ಯತೆ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಅಶೋಕಕುಮಾರ ಹೇಳಿದ್ದಾರೆ.
    ಇಲ್ಲಿಯ ಸರ್ಕಾರಿ ಆಸ್ಫತೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಕಳೆದ ವರ್ಷ ಅನಿರೀಕ್ಷಿತವಾಗಿ ಬಂದ ಮಂಗನಕಾಯಿಲೆ ಸಾವು-ನೋವುಗಳನ್ನು ಉಂಟುಮಾಡಿ ಜನರು ಭಯಭೀತರಾಗುವಂಥ ಸ್ಥಿತಿ ಉದ್ಭವಿಸಿತ್ತು. ಈ ವóರ್ಷ ಕಳೆದ ವರ್ಷದಂತೆ ಆಗಬಾರದೆಂಬ ಮುನ್ನೆಚ್ಚರಿಕೆಯಿಂದ ಸಕಲ ಸಿದ್ಧತೆ ಮಾಡಿಕೊಂಡಿದ್ದು ಮಂಗನಕಾಯಿಲೆ ನಿರೋಧ ಮತ್ತು ನಿಯಂತ್ರಣಕ್ಕೆ ಅವಶ್ಯವಾದ ಎಲ್ಲಾ ಅನುಕೂಲ, ಸಂಪನ್ಮೂಲಗಳನ್ನು ಕ್ರೋಢೀಕರಿಸಲಾಗಿದೆ ಎಂದರು.
    ಇಲ್ಲಿಯವರೆಗೆ ತಾಲೂಕಿನಲ್ಲಿ 19 ಮಂಗಗಳು ಸಾವನ್ನಪ್ಪಿದ್ದು ಮಂಗನಕಾಯಿಲೆ ನಿರೋಧಕ್ಕಾಗಿ ಹನ್ನೊಂದುಸಾವಿರ ಜನರಿಗೆ ಲಸಿಕೆ ನೀಡಲಾಗಿದೆ ಎಂದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *