

ಪೂರ್ವ ನಿಶ್ಚಯದಂತೆ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೊಂದು ಬಾರಿ ಮೂರ್ನಾಲ್ಕು ವರ್ಷದ ನಂತರ ಮತ್ತೊಂದು ಬಾಂಬ್ ಪ್ರಯೋಗಿಸಿದ್ದಾರೆ.

ಹೀಗೆ ಹುಸಿ ಬಾಂಬ್ ಪ್ರಯೋಗಿಸಿ ಅದರ ಸಾಧಕ-ಬಾಧಕ ನೋಡಿ ಫೀಲ್ಡಿಗಿಳಿಯುವುದು ಈ ಅನಂತಕುಮಾರ ಹೆಗಡೆ ಯೋಜನೆ….
ಹಿಂದೆಲ್ಲಾ ಈ ಬಾರಿ ನಾನು ಚುನಾವಣೆಗೆ ಸ್ಫರ್ಧಿಸುವುದಿಲ್ಲ ಎನ್ನುವ ಮಾತಿನ ಬಾಂಬ್ ಪ್ರಯೋಗಿಸಿ ಅದರ ಹಿಂದೆ ಹಿಂದೂ ಸಾಮ್ರಾಟ್ ನಿಮ್ಮ ಸೇವೆ ದೇಶಕ್ಕೆ ಅಗತ್ಯವಿದೆ ಎಂದು ತನ್ನ ಅನುಯಾಯಿಗಳಿಂದಲೇ ಹೇಳಿಸಿ ಅದರ ಲಾಭ ಪಡೆದು ಚುನಾವಣೆಗೆ ನಿಂತು ಬಿಡುತಿದ್ದರು!


ಹೀಗೆ ಮಳೆಬಿದ್ದ ನಂತರ ಭೂಮಿಯ ಕುಕ್ಕಿ ನೋಡುವ ರೈತನಂತೆ ಅನಂತಕುಮಾರ ಹೆಗಡೆ ಪಕ್ಕಾ ರಾಜಕಾರಣಿ ಅವರಿಗೆ ಯಾವ ಸಮಯದಲ್ಲಿ ಯಾವ ಬಾಂಬ್ ಪ್ರಯೋಗಿಸಿ ಮುಗ್ಧರನ್ನು ಮೂರ್ಖರನ್ನಾಗಿಸಬೇಕೆಂಬ ಪಕ್ಕಾ ಲೆಕ್ಕಾಚಾರವಿದೆ.
ಚುನಾವಣೆ ಹೊಸ್ತಿಲಲ್ಲಿ… ಅಣ್ಣಾ, ದೋಸ್ತ ಎನ್ನುತ್ತಾ ಯಾರ ಹೆಗಲ ಮೇಲೂ ಕೈ ಹಾಕಿ ತಾನೊಬ್ಬ ಸಾದಾ ಸೀದಾ ಮನುಷ್ಯ ಎಂದು ತೋರಿಸಿಕೊಳ್ಳುವ ಅನಂತಕುಮಾರ ಹೆಗಡೆ ಚುನಾವಣೆ ಗೆದ್ದ ನಂತರ ಅಂಡರ್ಗ್ರೌಂಡ್ ಸೇರಿ ʼಸರ್ ಓದುತಿದ್ದಾರೆ… !ಸರ್ ಮನೆಯಲಿಲ್ಲ ಎಂದು ಕಾರ್ಯಕರ್ತರನ್ನು ಸಾಗಹಾಕುವ (ಅನಂತಕುಮಾರ ಹೆಗಡೆ) ತಮ್ಮ ರಾಜಕೀಯ ಪ್ರಾರಂಭದ ದಿನಗಳಿಂದ ಇವತ್ತಿನ ವರೆಗೆ ಮಾಡಿದ್ದು ಇಂಥ ನಾಟಕಗಳನ್ನೇ… ಹಿಂದುತ್ವದ ವಿಚಾರ ಎತ್ತಿಕೊಂಡು ವೀರಾವೇಶದ ಮಾತನಾಡುವ ಈ ಹೆಗಡೆ ಚುನಾವಣೆ ಮುಗಿದ ಮೇಲೆ ಸ್ವಜಾತಿ ಸ್ವಾಮಿ, ಸ್ವಜಾತಿ ಸಮ್ಮೇಳನ, ಸ್ವಂತಸರ್ಕಾರೇತರ ಸಂಸ್ಥೆ ಗಳ ವೇದಿಕೆ ಮೇಲೆ ಮಾತ್ರ ಕಾಣಿಸಿಕೊಂಡು ಭೂಗತನಾಗುವ ರೂಢಿ ಮಾಡಿಕೊಂಡಿದ್ದಾರೆ.
ಈ ಹಿಂದಿನ ಲೋಕಸಭೆ ಚುನಾವಣೆ ಮೊದಲು ಅನಾರೋಗ್ಯದ ನೆಪ ಒಡ್ಡಿ ಸಾರ್ವಜನಿಕ ಜೀವನದಿಂದ ನಾಪತ್ತೆಯಾಗಿದ್ದವರು ಪುನ: ತಮ್ಮ ಎಂದಿನ ಚಾಳಿಯಂತೆ ಚುನಾವಣೆ ಮುನ್ನ ಮತ್ತೆ ದಿಢೀರ್ ಪ್ರವೇಶ ಪಡೆದಿದ್ದರು!
ಈ ದಿಢೀರ್ ಪ್ರವೇಶದ ಉತ್ತರಕುಮಾರನ ತಂತ್ರ ಅರಿತಿದ್ದ ಹಿರಿಯ ರಾಜಕಾರಣಿ ವಿಶ್ವೇಶ್ವರ ಹೆಗಡೆ ತನ್ನ ರಾಜಕೀಯಜೀವನದ ಹಣ ಬಳಸಿ ಅನಂತಕುಮಾರ ರಂಥ ಅನಂತಕುಮಾರ್ ರಿಗೆ ಚಿತ್ ಕೊಡುವಲ್ಲಿ ಯಶಸ್ವಿಯಾದರು ನೋಡಿ ಅನಂತಕುಮಾರ ಹೆಗಡೆ ಮತ್ತೆ ಭೂಗತರಾದರು.
ಈಗ ಈ ಎಲ್ಲಾ ಪೂರ್ವತಯಾರಿ, ಉದ್ದೇಶಪೂರ್ವಕ ಪ್ರಹಸನಗಳ ಒಟ್ಟೂ ಕ್ಲೈಮ್ಯಾಕ್ಸ್ ಎನ್ನುವಂತೆ ತನ್ನ ಸುಧೀರ್ಘ ಕಾಲದ ಡೆಲ್ಲಿ ಸಂಪರ್ಕ ಬಳಸಿ ಯೋಗಿ ಆದಿತ್ಯನಾಥ್ ರಂತೆ ದಿಢೀರನೇ ರಾಜ್ಯ ರಾಜಕಾರಣ ಪ್ರವೇಶಿಸುವ ತಾಲೀಮಿನ ಪಕ್ಕಾ ತಯಾರಿ ಶುರುಹಚ್ಚಿಕೊಂಡಿದ್ದಾರೆ. ಅದರ ತಂತ್ರಗಳೇ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಅನಂತಕುಮಾರ ಮುಂದಿನ ಮುಖ್ಯಮಂತ್ರಿ ಎಂದು ಘೋಶಿಸಿಕೊಳ್ಳುವ ಹುನ್ನಾರ!
ಸನಾತನ ವೈದಿಕ ಕುಟಿಲತೆಯ ಆರೆಸ್ಸೆಸ್ ಮತ್ತು ಬಿ.ಜೆ.ಪಿ. ಈಗ ಮೊದಲಿನಂತೆ ಮತದಾರರಿಗೆ, ಜನಸಾಮಾನ್ಯರಿಗೆ ಅಚ್ಚೇದಿನದಂಥ ಕನಸು ತೋರಿಸುವ ಸ್ಥಿತಿಯಲ್ಲಿಲ್ಲ.. ಪರಿವಾರ ಕಟ್ಟಿಕೊಡುತಿದ್ದ ನಿರೂಪಣೆಗಳ ಮೂಲಕ ಮತದಾರರನ್ನು ಬ್ಲಫ್ ಮಾಡುವ ತಂತ್ರ ಈಗ ಹಳತಾಗಿದೆ,
ಅಸಲಿಗೆ ಥರಾವರಿ ಸುಳ್ಳುಗಳ ಮೂಲಕ ಜನರ ಬಳಿ ತೆರಳಿ ಕನಸಿನ ರಾಜ್ಯ ತೋರಿಸುವ ಸಮರ್ಥ ನಾಯಕತ್ವ ಈಗ ಪರಿವಾರದಲ್ಲಿಲ್ಲ ಇಂದಿನ ಬಿ.ಜೆ.ಪಿ. ಮಾತು ನಾಳೆಯ ಸುಳ್ಳು, ನಿನ್ನೆಯ ಅವರ ಭರವಸೆ ಇಂದಿನ ಸುಳ್ಳು ಹೀಗೆ ಸುಳ್ಳಿನ ಮೇಲೆ ಸುಳ್ಳು ಹೇಳುವ ಪರಿವಾರದ ನಾಯಕರ ಸುಳ್ಳಿನಪ್ರಣಾಳಿಕೆಗಳು ಈಗ ಜನರತಲೆ ತಿರುಗಿಸುತ್ತಿಲ್ಲ.

ನಾವು ಅಧಿಕಾರಕ್ಕೆ ಬಂದರೆ ದೇಶ, ಸಂವಿಧಾನ, ವ್ಯವಸ್ಥೆ ಬದಲಾವಣೆ ಎನ್ನುತಿದ್ದ ಹಳೆ ಹುಲಿಗಳ ಹಲ್ಲು ಬಿದ್ದು ಅವೆಲ್ಲಾ ಹುಸಿ ಭರವಸೆಗಳು ಎಂಬುದನ್ನು ಇಂಡಿಯಾ ಅರಿತಿದೆ. ಆದರೆ ಬಿ.ಜೆ.ಪಿ. ತನ್ನ ನವನವೀನ ನಿರೂಪಣೆಗಳ ಭತ್ತಳಿಕೆಗಳ ಮರು ಪ್ರಯೋಗ ಎನ್ನುವಂತೆ ಕಾಂಗ್ರೆಸ್ ಜೊತೆಗೆ ಇತರ ಪಕ್ಷಗಳ ನಾಯರನ್ನು ಕರೆತಂದು ಅವರ ಪೂರ್ವಾಶ್ರಮದ ಬಗ್ಗೆ ಸುಳ್ಳು ಹೇಳಿಸುತ್ತೆ… ತಮ್ಮ ನಾಯಕರನ್ನೇ ಮುಂದೆ ಮಾಡಿ ಹೊಸ ಭರವಸೆ, ಹೊಸ ಪ್ರಣಾಳಿಕೆಗಳ ಕಲ್ಪನೆ ತೋರುತ್ತೆ ಇವು ಪರಿವಾರದ ಶಡ್ಯಂತ್ರದ ಶಸ್ತಾಸ್ತ್ರಗಳು!
ಇಂಥ ಪ್ರಯೋಗಗಳ ಹೊಸ ತುಣುಕು ಅನಂತಕುಮಾರ ಹೆಗಡೆ…… ಹಿಂದುತ್ವ ರಾಷ್ಟ್ರೀಯತೆ ಎನ್ನುವ ಲಾಗಾಯ್ತಿನ ನಾಟಕಗಳನ್ನೇ ಹೊಸ ಲೇಬಲ್ಲುಗಳ ಮೂಲಕ ಪ್ರಯೋಗಿಸಿ ಸಾರ್ವಜನಿಕರ ತಲೆ ತಿರುಗಿಸುವ ಪರಿವಾರದ ತಂತ್ರಗಳ ಪ್ರಯೋಗ ಈಗ ಸವಕಲು ಸರಕು… ಕರ್ನಾಟಕದಲ್ಲಿ ಲಿಂಗಾಯತರು, ಒಕ್ಕಲಿಗರು, ಹಿಂದುಳಿದವರು ಎಲ್ಲರ ಬಾಯಲ್ಲಿ ವೈದಿಕ ತಂತ್ರಗಳ ಮಂತ್ರ ಘೋಷಣೆ ಮಾಡಿಸಿ ಸೋತಿರುವ ಬಿ.ಜೆ.ಪಿ. ಅನಂತಕುಮಾರರಂಥ ಕಟ್ಟಾ ವೈದಿಕ ಮಾತುಗಾರನ ಮೂಲಕ ಮತದಾರರನ್ನು ಬ್ಲಫ್ ಮಾಡುವ ವಿನೂತನ ತಂತ್ರ ಬಿಟ್ಟರೆ ಕರ್ನಾಟಕದಲ್ಲಿ ತನಗೆ ಅಸ್ತ್ರ-ಶಸ್ತ್ರಗಳೇ ಇಲ್ಲ ಎನ್ನುವ ಸತ್ಯ ಅರಿತಿದೆ.

ಈ ಪ್ರಯೋಗದ ಮೂಲಕ ಆಗಬಹುದಾದ ಡ್ಯಾಮೇಜ್ ಕಂಟ್ರೋಲ್ ಯೋಜನೆ ಸಿದ್ದವಾದರೆ ಬಿ.ಜೆ.ಪಿ. ಅನಂತಕುಮಾರರಂಥ ಒಣ ಮಾತುಗಾರನ ನೆಚ್ಚಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಆದರೆ ಕರ್ನಾಟಕ ಬಿಹಾರವೂ ಅಲ್ಲ, ಉತ್ತರ ಪ್ರದೇಶವೂ ಅಲ್ಲ ಗುಜರಾತ್ ಹಾಗಿರಲಿ ಮಧ್ಯಪ್ರದೇಶದಂಥ ರಾಜಕೀಯ ನೆಲವೂ ಅಲ್ಲ.. ಇಲ್ಲಿ ವೈದಿಕ ಸುಳ್ಳಿನ ಕಾರ್ಯತಂತ್ರ ಫಲನೀಡುವುದಾದರೆ ಅನಂತಕುಮಾರ್, ಯಡಿಯೂರಪ್ಪ, ಸದಾನಂದ ಗೌಡ, ಯತ್ನಾಳ್ ಮೂಲಕ ಈಗಾಗಲೇ ಕರ್ನಾಟಕ ಬಿ.ಜೆ.ಪಿ. ವಶವಾಗುವುದಿತ್ತು! ಆದರೆ ಈಗ ಕಾಲ ಬದಲಾಗಿದೆ… ಸಂಘ, ಮೋದಿ- ಪರಿವಾರದ ತಂತ್ರಗಳೆಲ್ಲಾ ಕೈ ಕೊಡುತ್ತಿವೆ.

ಅಂತಿಮ ಎನ್ನುವ ಜೆ.ಡಿ.ಎಸ್. ಹೊಂದಾಣಿಕೆಯ ಕಾರ್ಯತಂತ್ರ ಈಗ ಫಲ ನೀಡುವ ಸಂಭವ ಕ್ಷೀಣಿಸಿದೆ. ಅಧಿಕಾರಕ್ಕಾಗಿ ಪಕ್ಷ-ಜಾತ್ಯಾತೀತತೆ ತ್ಯಾಗ ಮಾಡುವ ಜನತಾ ದಳದ ದಿಢೀರ್ ಯೋಜನೆಗಳೂ ಕೈ ಕೊಟ್ಟು ಅವರಿಗೆ ಇವರ ನೆರವು ಇವರಿಗೆ ಅವರ ಒಲವಿನ ಅನಿವಾರ್ಯ ಹೊಂದಾಣಿಕೆಯಲ್ಲಿ ಬಿ.ಜೆ.ಪಿ, ಜಾ ದಳದ ಹೊಂದಾಣಿಕೆ ಅನಂತಕುಮಾರ ಹೆಗಡೆಯಂಥ ಪಕ್ಕಾ ಮತೀಯವಾದಿ ನಾಯಕತ್ವಕ್ಕೆ ಒಗ್ಗಲ್ಲ…. ಇವನ್ನೆಲ್ಲಾ ಗಣನೆಗೆ ತೆಗೆದುಕೊಂಡಿರುವ ಬಿ.ಜೆ.ಪಿ. ಅಧಿಕಾರದಾಹಿ ಜಾತ್ಯಾತೀತರನ್ನು ಜೊತೆಗಿಟ್ಟುಕೊಂಡು ಇತರ ಬಿ.ಜೆ.ಪಿ. ವಿರೋಧಿಗಳನ್ನು ವಿಘಟಿಸಿ ಚುನಾವಣೆಯ ತಂತ್ರ ಹೆಣೆದರೆ ನಾಲ್ಕರಲ್ಲಿ ಒಂದು ಭಾಗ ಮತ ಕ್ರೋಢೀಕರಣವಾದರೂನಮ್ಮದೇ ಅಧಿಕಾರ ಎಂದು ಬಿ.ಜೆ.ಪಿ. ಸಿದ್ಧತೆ ಮಾಡಿಕೊಂಡಿದೆ ಆದರೆ ಬಿ.ಜೆ.ಪಿ.ಯ ಹೊಸ ಪ್ರಯೋಗ, ಲಾಭದ ತಂತ್ರಕ್ಕೆ ಜೊತೆಗಾರ ಗೌಡ -ಎಂಡ್ ಸನ್ಸ್ ವಿರೋಧ! ಇಷ್ಟಾದ ಮೇಲೇ ಮತೀಯತೆಯಿಂದ ಅಧಿಕಾರ ಬಂದರೆ ಬರಲಿ ಇಲ್ಲವಾದರೆ ಜಾದಳವಂತೂ ಜೊತೆಗಿದೆ. ಕಾಂಗ್ರೆಸ್ ನ ಅಧಿಕಾರ ವಿರೋಧಿ ಅಲೆಯಿಂದಲಾದರೂ ಕರ್ನಾಟಕ ವನ್ನು ತಾನು ಗೆಲ್ಲಬೇಕು ಎಂದುಕೊಂಡಿರುವ ಬಿ.ಜೆ.ಪಿ. ಮಾಡಬಹುದಾದ ಅನಿವಾರ್ಯ ನೂತನ ಪ್ರಯೋಗಗಳಲ್ಲಿ ಅನಂತಕುಮಾರ ಹೆಗಡೆ ನಾಯಕತ್ವ ಒಂದು ಅವಕಾಶವಷ್ಟೇ…..
ಆದರೆ ಅನಂತ ನಾಯಕತ್ವಕ್ಕೆ ಪಕ್ಷದ ೯೦% ನಾಯಕತ್ವ ವಿರೋಧ ಹಾಗಾಗಿ ಎಲ್ಲಿಂದಲೋ ಬಂದವರು ಭಟ್ಕಳದಲ್ಲಿ ಅನಂತಕುಮಾರ ಹೆಗಡೆ ಮುಖ್ಯಮಂತ್ರಿ ಎಂದರೆ…. ಅದು ಕರ್ನಾಟಕಕ್ಕೆ ಎನ್ನುವ ಯಾವ ನಾಯಕನೂ ಇಲ್ಲ…. ಕ್ಷಮಿಸಿ ಭಟ್ಕಳದಲ್ಲಿ ಅನಂತಕುಮಾರ ಹೆಗಡೆವರನ್ನು ಮುಖ್ಯಮಂತ್ರಿ ಮಾಡುವ ಯಾವ ಅವಕಾಶವೂ ಇಲ್ಲ… ವಾಸ್ತವವೆಂದರೆ,,… ಅಲ್ಲಿಂದ ಅನಂತಕುಮಾರ ಶಾಸಕರಾಗಲೂ ಸಾಧ್ಯವಿಲ್ಲ ಭಟ್ ಬಿ.ಜೆ.ಪಿ. ಯಾವತ್ತೂ ಜನವಿರೋಧವನ್ನೇ ತಮ್ಮ ಆಯ್ಕೆ, ಸಿದ್ದಾಂತ ಎಂದು ಪ್ರತಿಪಾದಿಸಿದೆ ಈಶತಮಾನದ ಜನ ಬಿ.ಜೆ.ಪಿ.ಯ ಪುರಾತನ ಶಿಲಾಯುಗದ ಭರವಸೆ, ಘೋಷಣೆಗಳನ್ನು ಕೇಳುವ ಸ್ಥಿತಿಯಲ್ಲೇ ಇಲ್ಲ, ಇನ್ನು ನಂಬುವ ಮಾತು ಬಹುದೂರವಿದೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






