ದೊಡ್ಡ ಬಾಯಿಯ ಅಪಾಯಕಾರಿ ಗೋಬ್ರಿಯಾ ಮೀನು & ಹಿಂದುತ್ವ ಹಾಗೂ ಮುಂದುತ್ವ

ಕಾರವಾರ: ಕಡ್ಲೆ ಕಡಲತೀರದಲ್ಲಿ ಮೂರಿಯಾ ಮೀನಿನ ಕಳೇಬರ ಪತ್ತೆ

ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಮಾತ್ರ ಕಂಡುಬರುವ ಮೀನು ಇದಾಗಿದ್ದು, ದೇಹದ ಶೇ.25ರಷ್ಟು ಭಾಗ ಬಾಯಿ ಹೊಂದಿರುತ್ತದೆ. ಜೊತೆಗೆ ಹಲ್ಲುಗಳಿರುವುದರಿಂದ ಈ ಮೀನುಗಳ ದಾಳಿಗೆ ಸಿಕ್ಕರೆ ಗಂಭೀರ ಸ್ವರೂಪದ ಗಾಯ ಮಾಡುವ ಸಾಮರ್ಥ್ಯ ಇದೆ ಎಂಬುದು ಮೀನುಗಾರರ ಅಭಿಪ್ರಾಯ.

ಕಾರವಾರ (ಉ.ಕ): ಇಲ್ಲಿನ ಕಡ್ಲೆ ಕಡಲತೀರದಲ್ಲಿ ಅಪರೂಪದ ಮೂರಿಯಾ ಮೀನಿನ ಕಳೇಬರ ಪತ್ತೆಯಾಗಿದೆ. ಈ ಮೀನು ಸುಮಾರು 2 ಮೀಟರ್ ಉದ್ದದ 20 ಕೆ.ಜಿ ತೂಕವಿದೆ ಎಂದು ಅಂದಾಜಿಸಲಾಗಿದೆ.

ಗೋಬ್ರಿಯಾ ಮೀನು ಎಂದೂ ಕರೆಯಲ್ಪಡುವ ಇದು ಚಂಡಮಾರುತ ಅಪ್ಪಳಿಸಿದ ಪರಿಣಾಮ ದಡಕ್ಕೆ ಅಪ್ಪಳಿಸಿರಬಹುದು. ಅಥವಾ, ಸಮುದ್ರದಾಳದಲ್ಲಿ ಆಮ್ಲಜನಕ ಕೊರತೆ ಉಂಟಾಗಿ ದಡಕ್ಕೆ ಬಂದು ಸತ್ತಿರಲೂಬಹುದು ಎಂಬ ಶಂಕೆ ಇದೆ.

ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಮಾತ್ರ ಕಂಡುಬರುವ ಮೀನು ಇದಾಗಿದ್ದು, ದೇಹದ ಶೇ.25ರಷ್ಟು ಭಾಗ ಇದರ ಬಾಯಿ ಇರುತ್ತದೆ. ಜೊತೆಗೆ ಹಲ್ಲುಗಳಿರುವುದರಿಂದ ಈ ಮೀನುಗಳ ದಾಳಿಗೆ ಸಿಕ್ಕರೆ ಗಂಭೀರ ಸ್ವರೂಪದ ಗಾಯ ಮಾಡುವ ಸಾಮರ್ಥ್ಯ ಇದೆ ಎಂಬುದು ಮೀನುಗಾರರ ಅಭಿಪ್ರಾಯ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮೀನಿನ ಮಾಂಸಕ್ಕೆ ಬಹಳ ಬೇಡಿಕೆ ಇದ್ದು, ಸ್ಥಳೀಯ ಮಾರುಕಟ್ಟೆಯಲ್ಲಿಯೇ ಕೆ.ಜಿಗೆ ಸುಮಾರು 400ರಿಂದ 500 ರೂಪಾಯಿ ವರೆಗೂ ಮಾರಾಟವಾಗುತ್ತದೆ. (etbk)

ಹಿಂದುತ್ವದ ಜತೆ ಮುಂದುತ್ವವೂ ಬೇಕು; ತಮಿಳರು ತೋರಿದ ಧೈರ್ಯ ನಮ್ಮಲ್ಲಿಲ್ಲ: ಹಂಸಲೇಖ

ಹಿಂದುತ್ವದ ಜತೆ ಮುಂದುತ್ವವೂ ಬೇಕು, ಬದುಕು ಮುಂದುವರಿಯಬೇಕು. ಅದಕ್ಕಾಗಿ ಅಭಿವೃದ್ಧಿ ಹಾಗೂ ರಾಷ್ಟ್ರೀಯತೆ ಎರಡೂ ಅಗತ್ಯವಾಗಿದೆ. ಹಾಗಾಗಿ ಇಲ್ಲಿನ ಬಹುಭಾಷೆಗಳು ದೇಶದ ಏಕತೆಗೆ ಕಾರಣವಾಗಿದೆ ಎಂದ ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ.

Hamsalekha

ಬೆಂಗಳೂರು: ಹಿಂದುತ್ವದ ಜತೆ ಮುಂದುತ್ವವೂ ಬೇಕು, ಬದುಕು ಮುಂದುವರಿಯಬೇಕು. ಅದಕ್ಕಾಗಿ ಅಭಿವೃದ್ಧಿ ಹಾಗೂ ರಾಷ್ಟ್ರೀಯತೆ ಎರಡೂ ಅಗತ್ಯವಾಗಿದೆ. ಹಾಗಾಗಿ ಇಲ್ಲಿನ ಬಹುಭಾಷೆಗಳು ದೇಶದ ಏಕತೆಗೆ ಕಾರಣವಾಗಿದೆ ಎಂದ ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ.

ಶಾರದಾ ಬುಕ್ ಅಂಗಡಿ ಆವರಣದಲ್ಲಿ ನಡೆದ ವಿನುತಾ ವಿಶ್ವನಾಥ್ ಅವರ ‘ಹುಣ್ಸ್ ಮಕ್ಕಿ ಹುಳ’ ಪುಸ್ತಕ ಕುರಿತ ಸಂವಾದದಲ್ಲಿ ಅವರು ಮಾತನಾಡಿದ್ದರು. 

https://imasdk.googleapis.com/js/core/bridge3.483.2_en.html#goog_1562218566

https://imasdk.googleapis.com/js/core/bridge3.483.2_en.html#goog_1562218568

https://imasdk.googleapis.com/js/core/bridge3.483.2_en.html#goog_1562218570

ಕನ್ನಡವೇ ನಮ್ಮ ಹಕ್ಕಿನ ಭಾಷೆ, ಖಾತೆ ಇದ್ದಂತೆ!
ಕೇಂದ್ರದ ಸರ್ಕಾರಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಏಕಾಭಾಷೆಯನ್ನು ನಮ್ಮ ಮೇಲೆ ಹೇರುತ್ತವೆ ಎಂದ ಹಂಸಲೇಖ ಕನ್ನಡ ನಮಗೆ ಎಂದಿಗೂ ಹಕ್ಕಿನ ಭಾಷೆ, ಕನ್ನಡದಿಂದಲೇ ನಮ್ಮ ಈ ರಾಜ್ಯ ಉಳಿಯುವುದು. ಕನ್ನಡ ನಮ್ಮ ಪಾಲಿಗೆ ಖಾತೆ ಇದ್ದಂತೆ ಎಂದಿದ್ದಾರೆ. ನಾವು ಬಹಳ ಅಪಾಯದ ಸ್ಥಿತಿಯಲ್ಲಿದ್ದೇವೆ. ನಮ್ಮಲ್ಲಿ ಸ್ಪಷ್ಟ ತೆ ಇಲ್ಲದಿರುವುದು ಇದಕ್ಕೆ ಕಾರಣ. ತಮಿಳುನಾಡಿನಲ್ಲಿ ಧೈರ್ಯವಾಗಿ ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳುತ್ತಾರೆ. ಆದರೆ ನಾವು ಆ ಧೈರ್ಯ ತೋರಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ನಾವೀಗ ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ ಅದೇನೆಂದರೆ ನಮಗೆ ಹಿಂದಿ ಬೇಕೆ? ಇಂಗ್ಲೀಷ್ ಬೇಕೆ? ಇದರ ಬಗ್ಗೆ ಸ್ಪಷ್ಟ ನಿರ್ಧಾರ ಇಲ್ಲದಿದ್ದರೆ ಗೊಂದಲ ಮುಂದುವರಿಯಲಿದೆ.

ಇಂಗ್ಲೀಷ್ ನಮ್ಮ ಕನ್ನಡ ತಾಯಂದಿರ ಆಜ್ಞೆಯಾಗಿದೆ. ಪ್ರತಿ ಹೆಣ್ಣುಮಕ್ಕಳೂ ತಮ್ಮ ಮಕ್ಕಳಿಗೆ ಇಂಗ್ಲೀಷ್ ಕಲಿಸಲೇಬೇಕು ಎಂದು ಆಜ್ಞೆ ಮಾಡಿದ್ದಾರೆ. ಅದನ್ನು ಅವರ ಪತಿ ಅನುಸರಿಸುತ್ತಾರೆ. ಹಾಗಾಗಿ ಇಂಗ್ಲೀಷ್ ಅಥವಾ ಇನ್ನಾವುದೇ ಭಾಷೆ ಕಲಿಯುವ ಭಾಷೆಯಾಗಿರಲಿ ಆದರೆ ಕನ್ನಡ ಎಂದಿಗೂ ನಮ್ಮ ಉಸಿರಾಗಿರಬೇಕು. ಕನ್ನಡ ಸಾವಿರಾರು ವರ್ಷ ಇತಿಹಾಸವಿರುವ ಭಾಷೆ. ಆದರೆ ಇದನ್ನು ದಕ್ಷಿಣ ಭಾರತದ ಅಧಿಕೃತ ಭಾಷೆ ಎನ್ನಲಾಗುವುದಿಲ್ಲ. ತಮಿಳು ಇಲ್ಲಿ ಬಗೆಯ ಸಂವಹನ ಭಾಷೆಯಾಗಿದೆ. ಆದರೆ ಹಿಂದಿ ರಾಷ್ಟ್ರಭಾಷೆ ಎಂದು ಹೇಳುತ್ತಿರುವುದು ನನಗೆ ತಮಾಷೆಯಾಗಿ ಕಾಣುತ್ತಿದೆ ಎಂದ ಹಂಸಲೇಖ ಒಂದೊಮ್ಮೆ ದೇವನಾಗರಿ ಭಾಷೆಯನ್ನು ರಾಷ್ಟ್ರಭಾಷೆ ಅಥವಾ ಆಡಳಿತ ಭಾಷೆಯನ್ನಾಗಿಸಿದರೆ ಯಾರೂ ಸಂಸ್ಕೃತ ಅಥವಾ ದೇವನಾಗರಿಯಲ್ಲಿ ವ್ಯವಹರಿಸುವುದಿಲ್ಲ. ಬದಲಿಗೆ ಇಂಗ್ಲೀಷ್ ನಲ್ಲಿ ವ್ಯ್ವವಹರಿಸುತ್ತಾರೆ ಮುಕ್ಕಾಲು ಪಾಲು ಜನ ಇಂಗ್ಲೀಷ್ ಇನ್ನೂ ಕಾಲು ಭಾಗ ಜನರು ಹಿಂದಿಯಲ್ಲಿ ವ್ಯವಹರಿಸಬಹುದು ಎಂದರು.

ಹಿಂದಿ ಭಾಷೆ ಪರ್ಷಿಯಾ, ಉರ್ದು ಹಾಗೂ ಅರಬ್ ಭಾಷೆಯ ಬಲಮಗು, ಐನೂರು ಅಥವಾ ನಾಲ್ಕು ನೂರು ವರ್ಷಗಳ ಇತಿಹಾಸದ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಬೇಕು. ಬೇರೆ ಯಾವ ಭಾಷೆಯನ್ನೂ ಕಲಿಯುವ ಅವಕಾಶವಿದ್ದರೂ ಒಳಿತು ಎಂದರು. ಕನ್ನಡ ಹೋರಾಟಗಾರರು, ಯುವಕರು ಈ ಬಗ್ಗೆ ಇದೀಗ ಗೊಂದಲದಲ್ಲಿದ್ದಾರೆ ಎಂದು ಹಂಸಲೇಖ ಹೇಳಿದರು. 

ಇಂದು ವೈದಿಕ ಪ್ರಜ್ನೆಗೆ ರಾಷ್ಟ್ರೀಯತೆಯ ಕನಸು ಹಾಗೂ ಅಮಲಿದೆ:
ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಪ್ರಾರಂಭವಾದಾಗ ಬೋಧನಾ ರಂಗ ಪ್ರವೇಶಿಸಿದ ಮೊದಲ ವರ್ಗ ಅದು ವೈದಿಕ ವರ್ಗವಾಗಿತ್ತು. ದೇಶದಲ್ಲಿ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಪ್ರಾರಂಭವಾದಾಗ ಬೋಧನಾ ವರ್ಗವನ್ನು ಮೊದಲು ಪ್ರವೇಶಿಸಿದ್ದು ಈ ವೈದಿಕ ಪ್ರಜ್ಞೆ. ವೈದಿಕ ಪ್ರಜ್ಞೆ ಹಿನ್ನೆಲೆ ದೊರತದ್ದು ನಮ್ಮ ಪುಣ್ಯ. ಇಂದು ಅದೇ ವೈದಿಕ ಪ್ರಜ್ಞೆಗೆ ರಾಷ್ಟ್ರೀಯತೆಯ ಕನಸು ಹಾಗೂ ಅಮಲಿದೆ. ರಾಷ್ಟ್ರೀಯ ಪ್ರಜ್ಞೆ ನಮಗೂ ಅಗತ್ಯವಿದೆ. ಆದರೆ ಆ ರಾಷ್ಟ್ರೀಯತೆಯ ಜತೆಗೆ ನಮ್ಮ ಪ್ರಾದೇಶಿಕತೆಯ ಸ್ವಾಯತ್ತತೆಯನ್ನು ಕಳೆದುಕೊಳ್ಲಲು ನಾವು ಸಿದ್ದವಾಗಿಲ್ಲ ಎಂದು ಹಂಸಲೇಖ ಹೇಳಿದ್ದಾರೆ. ಅದೊಮ್ಮೆ ಕಳೆದುಹೋದಲ್ಲಿ ಭಾರತದಲ್ಲಿ ಬಹುದೊಡ್ಡ ವ್ಯತ್ಯಾಸಗಳು ಪ್ರಾರಂಭವಾಗಲಿದೆ. ಪುರಿ ಉಂಡೆಯಾಗಿರುವುದನ್ನು ಒಂದೊಂದೇ ಎಳೆ ಬಿಚ್ಚಿದರೆ ಮತ್ತೆ ಈ ಹಿಂದಿದ್ದ ೫೮ ಸಂಸ್ಥಾನಗಳ ರೀತಿಯಲ್ಲಿ ಚಿತ್ರ ವಿಚಿತ್ರವಾಗಿ ಹಂಚಿಕೆಯಾಗಲಿದೆ ಹಾಗಾಗಿ ಸಂವಿಧಾನದ ಹಿನ್ನೆಲೆ ಒಂದಾಗಿರುವ ಭಾರತವನ್ನು ಹಾಗೇ ಉಳಿಸಿಕೊಳ್ಳ ಬೇಕು ಎಂದರು

ಭಾರತದ ಏಕತ್ವದ ಸಂಕೇತ ಕುಂಕುಮ
ಭಾರತದ ಏಕತ್ವದ ಸಂಕೇತ ಕುಂಕುಮ ಎಂದಿರುವ ಹಂಸಲೇಖ ಇಲ್ಲಿ ಸಿಖ್ಖರು, ಮುಸ್ಲಿಮರು, ಕ್ರೈಸ್ತರು ಸಹ ಕುಂಕುಮ ಇಡಬಲ್ಲರು. ತಾಳಿ ಎಲ್ಲಾ ಧರ್ಮೀಯರಲ್ಲಿ ಸ್ವೀಕಾರವಾಗಿದೆ. ಗೋವು, ದೇವಾಲಯಗಳು ನಮ್ಮ ಏಕತ್ವದ ಸಂಕೇತಗಳಾಗಿದೆ ಎಂದರು. ಇದೆಲ್ಲಾ ರಾಷ್ಟ್ರೀಯತೆಯಾಗಿದ್ದು ಇದರ ಮೂಲಕ ಬಹುತ್ವವನ್ನೂ ಕಾಪಾಡಿಕೊಳ್ಳುತ್ತಾ, ಏಕತ್ವದ ಸಂಕೇತವನ್ನು ಗೌರವಿಸುತ್ತಾ ಕನ್ನಡವನ್ನು ಸಹ ಉಳಿಸಿಕೊಳ್ಳಬೇಕಿದೆ ಎಂದಿದ್ದಾರೆ.

ಹಂಸಲೇಕ ಅವರು ತಮ್ಮ ಶಾರದಾ ಬುಕ್ ಅಂಗಡಿ ಬಗ್ಗೆ ಪರಿಚಯ ಮಾಡಿಕೊಟ್ಟ ನಂತರದಲ್ಲಿ ವಿನುತಾ ವಿಶ್ವನಾಥ್  ಅವರ “ಹುಣ್ಸ್ ಮಕ್ಕಿ ಹುಳ” ಪುಸ್ತಕದ ಕುರಿತ ಸಂವಾದ ನಡೆಯಿತು. ವಿನುತಾ ಅವರ ಆತ್ಮಕಥೆಯಾಗಿರುವ ಹುಣ್ಸ್ ಮಕ್ಕಿ ಹುಳ ದಲ್ಲಿ ವಿನುತಾ ತಮ್ಮ ಜೀವನದ ಹಲವು ಅನುಭವವನ್ನು ಹಂಚಿಕೊಂಡಿದ್ದು ಓದುಗರಿಗೆ ಸ್ಪೂರ್ತಿಯ ಕಥೆಯನ್ನು ಉಣಬಡಿಸಿದ್ದಾರೆ. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *