

ಯಕ್ಷಗಾನ ತಾಳಮದ್ದಲೆಯು ಒಂದು ಅದ್ಭುತವಾದ ಕಲಾ ಮಾಧ್ಯಮ. ನೃತ್ಯ ಹಾಗೂ ವೇಷಭೂಷಣಗಳಿಲ್ಲದೇ ಪಾತ್ರಗಳಾಗುವ ಪ್ರಕ್ರಿಯೆಯೇ ಕಲಾಭಿವ್ಯಕ್ತಿಯ ಪರಾಕಾಷ್ಠೆ ಎಂದರೂ ತಪ್ಪಲ್ಲ. ದೈನಂದಿನ ವೇಷಗಳಲ್ಲೇ ಪೌರಾಣಿಕ ಪಾತ್ರಗಳನ್ನು ಕಟ್ಟುವ ಮಾತುಗಾರಿಕೆಯ ಎಲ್ಲ ಸಾಧ್ಯತೆಗಳನ್ನು ತೆರೆದಿಡುವ ಈ ಕಲಾ ಪ್ರಕಾರವು ಅನನ್ಯವಾದುದು. ಇಂತಹ ತಾಳಮದ್ದಳೆ ಪ್ರದರ್ಶನವೊಂದು ಇಟಗಿಯ ಕಲಾಭಾಸ್ಕರ ಸಂಸ್ಥೆಯಿಂದ ತಾರಗೋಡಿನ ರಾಮಕೃಷ್ಣ ಹೆಗಡೆಯವರ ಮನೆಯಲ್ಲಿ ಪಿತೃಪಕ್ಷದ ನಿಮಿತ್ತ ಇಟಗಿ ಮಹಾಬಲೇಶ್ವರ ವಿರಚಿತ “ಪ್ರೇತೋದ್ಧರಣ” ಎಂಬ ಪೌರಾಣಿಕ ಯಕ್ಷಗಾನ ತಾಳಮದ್ದಲೆಯು ನೆರವೇರಿತು.


ಕಪ್ಪೆಕೆರೆ ಫಣೀಂದ್ರ ಹೆಗಡೆ ಮತ್ತು ಆತಿಥೇಯ ರಾಮಕೃಷ್ಣ ಹೆಗಡೆ ಭಾಗವತರಾಗಿ ನಡೆಸಿದರು. ನಾಗಭೂಷಣ ರಾವ್ ಹಗ್ಗೋಡು ಮದ್ದಳೆಯಲ್ಲಿ ಸಹಕರಿಸಿದರು. ಹಿರಿಯ ಕಲಾವಿದ ಅಶೋಕ ಭಟ್ಟ ಸಿದ್ದಾಪುರ ಇವರು ದುಂದುಕಾರಿಯಾಗಿ ವಿವಿಧ ಮಜಲುಗಳಲ್ಲಿ ಪಾತ್ರವನ್ನು ತೆರೆದಿಟ್ಟರು. ಮಹಾಜ್ಞಾನಿ ಗೋಕರ್ಣನಾಗಿ ಮಹಾಬಲೇಶ್ವರ ಭಟ್ಟ ಇಟಗಿಯವರು ನಾಯಕ ಪಾತ್ರದ ನಿರೂಪಣೆಯನ್ನು ಚೆನ್ನಾಗಿಯೇ ನಿರ್ವಹಿಸಿದರು.
ಬ್ರಾಹ್ಮಣ ಆತ್ಮದೇವನಾಗಿ ಹಾಗೂ ಶ್ರೀಮನ್ನಾರಾಯಣನಾಗಿ ಕವಲಕೊಪ್ಪ ವಿನಾಯಕ ಹೆಗಡೆ ಸೊಗಸಾಗಿ ಪಾತ್ರಗಳನ್ನು ಕಡೆದಿಟ್ಟರು. ಶಿವಂಕರ ಯತಿಯಾಗಿ ನಾಗಭೂಷಣ ಕೆ.ಎಸ್. ಸೂರ್ಯ ಹಾಗೂ ವಿಷ್ಣುದೂತರಾಗಿ ಗಣಪತಿ ಹೆಗಡೆ ಹೊನ್ನೆಕೈ, ವೇಷ್ಯೆ ಚಂಪಕಮಾಲಿನಿಯಾಗಿ ನಾಗಪತಿ ಹೆಗಡೆ ಕೊಪ್ಪ ದುಂಧುಲಿಯಾಗಿ ಪ್ರಸನ್ನ ಹೆಗಡೆ ಹೊಸಗದ್ದೆ ಉತ್ತಮವಾಗಿ ಪಾತ್ರಗಳನ್ನು ನಿರ್ವಹಿಸಿದರು. ಒಟ್ಟಾರೆಯಾಗಿ ಕಾರ್ಯಕ್ರಮವು ಅತ್ಯುತ್ತಮ ಪ್ರದರ್ಶನವಾಗಿ ನಡೆಯಿತು.


ಹೇರೂರಿನಲ್ಲಿ ಸುದರ್ಶನ ವಿಜಯ-
ಸಿದ್ದಾಪುರ
ತಾಲೂಕಿನ ಯಕ್ಷಕಲಾ ಬಳಗ ಹೇರೂರು ಆಶ್ರಯದಲ್ಲಿ ಪ್ರಸಿದ್ದ ಕಲಾವಿದರಿಂದ ಸುದರ್ಶನ ವಿಜಯ ಹಾಗೂ ಚಂದ್ರಾವಳಿ ವಿಲಾಸ ಯಕ್ಷಗಾನ ಅ.೯ರಂದು ಸಂಜೆ ೬ರಿಂದ ಹೇರೂರಿನ ಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.
ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಗಣೇಶ್ ಆಚಾರ್, ದರ್ಶನ ಎಂ.ಗೌಡ, ಅಕ್ಷಯ ಆಚಾರ್,ಸುಬ್ರಹ್ಮಣ್ಯ ಭಂಡಾರಿ, ಮುಮ್ಮೇಳದಲ್ಲಿ ಕಾರ್ತಿಕ ಚಿಟ್ಟಾಣಿ, ಚಂದ್ರಹಾಸ ಗೌಡ,ರಾಜೇಶ ಭಂಡಾರಿ, ಅಣ್ಣಪ್ಪ ಗೌಡ,ನಾಗರಾಜ ಭಟ್ಟ ಕುಂಕಿಪಾಲ್,ಮAಜು ಗೌಡ,ನಾಗೇಂದ್ರ ಮೂರುರು,ಪುರಂದ ಮೂಡ್ಕಣಿ, ಮಂಜು ನಾಣಿಕಟ್ಟಾ ಪಾತ್ರ ನಿರ್ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ದೊಡ್ಮನೆಯಲ್ಲಿ ಯಕ್ಷಗಾನ- ಸಿದ್ದಾಪುರ
ಅನಂತ ಯಕ್ಷಕಲಾ ಪ್ರತಿಷ್ಠಾನ ಸಿದ್ದಾಪುರ ದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ ದೊಡ್ಮನೆ ಸಹಯೋಗದಲ್ಲಿ ಯಕ್ಷೋ ತ್ಸವ-೨೦೨೧ ಕಾರ್ಯಕ್ರಮದ ಅಂಗವಾಗಿ ಸುರತ ಆಂಜನೇಯ ಯಕ್ಷಗಾನ ದೊಡ್ಮನೆ ಎಂಜಿವಿವಿ ಪ್ರೌಢಶಾಲೆಯ ಸಭಾಂಗಣದಲ್ಲಿ ಅ.೧೦ರಂದು ಸಂಜೆ ೬ರಿಂದ ಪ್ರದರ್ಶನಗೊಳ್ಳಲಿದೆ.
ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಯಕ್ಷೋ ತ್ಸವ ಉದ್ಘಾಟಿಸುವರು. ಶಂಕರನಾರಾಯಣ ಹೆಗಡೆ ದಾನ್ಮಾಂವ ಅಧ್ಯಕ್ಷತೆವಹಿಸುವರು.ಡಾ.ಶಶಿಭೂಷಣ ಹೆಗಡೆ ದೊಡ್ಮನೆ, ಶ್ರೀಧರ ಭಟ್ಟ ಗಡಿಹಿತ್ಲ, ಎಫ್.ಎನ್.ಹರನಗಿರಿ,ವಿ.ಎಂ.ಭಟ್ಟ ಕೊಳಗಿ ಉಪಸ್ಥಿತರಿರುತ್ತಾರೆ.
ನಂತರ ಹೊಸ್ತೋಟ ಮಂಜುನಾಥ ಭಾಗವತರು ರಚಿಸಿದ ಸುರತ ಆಂಜನೇಯ ಯಕ್ಷಗಾನ ಪ್ರದರ್ಶನಗಳ್ಳಲಿದೆ.ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಮಹೇಶ ಹೆಗಡೆ ಕೊಳಗಿ, ಶಂಕರ ಭಾಗ್ವತ್ ಶಿರಸಿ, ಗಣೇಶ ಭಟ್ಟ ಕೆರೆಕೈ, ಮುಮ್ಮೇಳದಲ್ಲಿ ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ ಸಿದ್ದಾಪುರ, ವಿ.ದತ್ತಮೂರ್ತಿ ಭಟ್ಟ , ಪ್ರಭಾಕರ ಹೆಗಡೆ ಹಣಜೀಬೈಲ್, ವೆಂಕಟೇಶ ಹೆಗಡೆ ಬೊಗರಿಮಕ್ಕಿ, ಅವಿನಾಶ ಹೆಗಡೆ ಕೊಪ್ಪ, ಪ್ರಣವ್ ಭಟ್ಟ ಶಿರಳಗಿ ಪಾತ್ರನಿರ್ವಹಿಸಲಿದ್ದಾರೆ.
ನಂತರ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ ದೊಡ್ಮನೆ ಯಿಂದ ಮಾಗಧ ವಧೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಸರ್ವೇಶ್ವರ ಹೆಗಡೆ ಮೂರುರು, ಗಣಪತಿ ಹೊನ್ನೆಕೈ, ಶಿವರಾಮ ಹೆಗಡೆ,ಮುಮ್ಮೇಳದಲ್ಲಿ ನರಸಿಂಹ ಚಿಟ್ಟಾಣಿ, ಮಹಾಬಲೇಶ್ವರ ಭಟ್ಟ ಕ್ಯಾದಗಿ, ನಿರ್ಮಲಾ ಹೆಗಡೆ ಗೊ
ಗೋಳಿಕೊಪ್ಪ,ಶ್ರೀಧರ ಭಟ್ಟ, ಪ್ರವೀಣ ತಟ್ಟೀಸರ,ಶಂಕರ ಹೆಗಡೆ, ಕೇಶವ ಹೆಗಡೆ ಕಿಬ್ಳೆ ಮತ್ತಿತರರು ಪಾತ್ರನಿರ್ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






