ಕುಮಟಾದಲ್ಲಿ ಮನೆಗೆ ನುಗ್ಗಿ ಮಗು ಹೊತ್ತೊಯ್ಯುತ್ತಿದ್ದ ಚಿರತೆ.. ಎದೆಗುಂದದೆ ಮೊಮ್ಮಗನ ರಕ್ಷಿಸಿದ ಅಜ್ಜ
ಮನೆಯೊಳಗೆ ನುಗ್ಗಿದ ಚಿರತೆಯೊಂದು ಮಗುವನ್ನು ಹೊತ್ತೊಯ್ಯಲು ಯತ್ನಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಾರವಾರ: ಮನೆಗೆ ನುಗ್ಗಿದ ಚಿರತೆಯೊಂದು ಮಗುವನ್ನು ಹೊತ್ತೊಯ್ಯಲು ಯತ್ನಿಸಿದ ಘಟನೆ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಮನೆಯೊಳಗೆ ನುಗ್ಗಿ ಮಗು ಹೊತ್ತೊಯ್ಯಲು ಯತ್ನಿಸಿದ ಚಿರತೆ
ಬರ್ಗಿ ಗ್ರಾಮದ ಕಾಡಂಚಿನಲ್ಲಿದ್ದ ನಾರಾಯಣ ನಾಯ್ಕ ಎಂಬುವರ ಮನೆಯವರು ಊಟಕ್ಕೆ ಕುಳಿತ ಸಂದರ್ಭದಲ್ಲಿ ಶನಿವಾರ ರಾತ್ರಿ 9 ಗಂಟೆ ಹೊತ್ತಿಗೆ ಚಿರತೆ ನುಗ್ಗಿತ್ತು. ಈ ವೇಳೆ ಮನೆಯೊಳಗಿದ್ದವರು ಕೂಗಿಕೊಂಡಿದ್ದು, ಗಲಿಬಿಲಿಗೊಂಡ ಚಿರತೆ ಮನೆಯ ತುಂಬಾ ಓಡಾಡಿದೆ. ಬಳಿಕ ಒಂದೂವರೆ ವರ್ಷದ ಮಗುವನ್ನು ಎಳೆದೊಯ್ಯಲು ಪ್ರಯತ್ನಿಸಿದೆ. ಈ ವೇಳೆ ಮನೆಯ ಯಜಮಾನ(ಮಗುವಿನ ಅಜ್ಜ) ನಾರಾಯಣ ನಾಯ್ಕ ಎದೆಗುಂದದೆ ಧೈರ್ಯದಿಂದ ಮೊಮ್ಮಗನನ್ನು ರಕ್ಷಿಸಿದ್ದಾರೆ.
ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ. ಆದರೆ ಈವರೆಗೆ ಯಾವೊಬ್ಬ ಅಧಿಕಾರಿ ಸಹ ಸ್ಥಳಕ್ಕೆ ಭೇಟಿ ನೀಡದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಈ ಬಗ್ಗೆ ಗಮನ ಹರಿಸಿ ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. (etbk)