ಸ್ತ್ರೀಶಕ್ತಿ & ಮಹಿಳಾ ಸ್ವಸಹಾಯ ಸಂಘಗಳಿಗೆ ವಂಚಿಸಿದ ಸಂಸ್ಥೆಯ ವಿರುದ್ಧ ಕ್ರಮಕ್ಕೆ ಮನವಿ

ಮಹಿಳಾ ಸ್ವ ಸಹಾಯ ಮತ್ತು ಸ್ತ್ರೀಶಕ್ತಿಸಂಘಗಳ ಸಂಜೀವಿನಿ ಮಿಷನ್ 55 ಯೋಜನೆಗೆ ಸರ್ಕಾರದ ಹಣಕಾಸಿನ ನೆರವಿತ್ತು. ಇದರೊಂದಿಗೆ ಸಂಘಗಳು ಬ್ಯಾಂಕಿನಿಂದ ಸಾಲ ಪಡೆದು ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಿ ಅದರಿಂದ ಬಂದ ಆದಾಯ ಲಾಭದಿಂದ ಸಾಲಮರುಪಾವತಿ ಮಾಡಬೇಕಿತ್ತು. ಈ ಉದ್ದೇಶಕ್ಕೆ ಆಯ್ಕೆಯಾದ ಏಜೆನ್ಸಿ ಕರಾರಿನಂತೆ ಯಂತ್ರಗಳನ್ನು ಪೂರೈಸಿಲ್ಲ, ಕೆಲವು ಕಡೆ ಯಂತ್ರಗಳನ್ನು ಪೂರೈಸಿ ಉತ್ಫಾದನೆಗೆ ಕಚ್ಚಾ ವಸ್ತು ಒದಗಿಸಿಲ್ಲ. ಯಂತ್ರ-ಕಚ್ಚಾ ವಸ್ತು ಪೂರೈಸಿ ಸ್ತ್ರೀಶಕ್ತಿ ಸಂಘಗಳಿಗೆ ನೆರವಾಗಬೇಕಿದ್ದ ಮನು ಎಂಟರ್ಪ್ರೈಸಿಸ್ ಕರಾರಿನಂತೆ ನಡೆದುಕೊಂಡಿಲ್ಲ ಇದರಿಂದ

ಮಹಿಳಾ ಸಂಘಗಳಿಗೆ ಹಾನಿಯಾಗಿದ್ದು ಈ ಹಾನಿ ಮತ್ತು ಮೋಸ-ವಂಚನೆಯ ಕಾರಣಕ್ಕೆ ಮನು ಎಂಟರ್ ಪ್ರೈಸಿಸ್ ನ ಪ್ರಭು ಡಿ. ದೊಡ್ಮನಿಯವರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿರುವ 7 ಮಹಿಳಾ ಸ್ವ ಸಹಾಯ ಮತ್ತು ಸ್ತ್ರೀಶಕ್ತಿ ಸಂಘಗಳು ಈ ಬಗ್ಗೆ ಏಜೆನ್ಸಿ ಮೇಲೆ ಸೂಕ್ತ ಕ್ರಮ ಜರುಗಿಸಿ ನ್ಯಾಯ ಒದಗಿಸುವಂತೆ ಕೋರಿ ತಾಲೂಕಾ ಪಂಚಾಯತ್ ಗೆ ಮನವಿ ನೀಡಿವೆ.

ಸ್ರ್ತೀಶಕ್ತಿ ಸಂಘಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಕೆಲಸ ಮಾಡುತ್ತವೆ. ಇಂಥ ಸಂಘಗಳಿಂದ ರಾಜ್ಯದ ಅನೇಕ ಕಡೆ ಮಹಿಳೆಯರು ಉದ್ಯೋಗವನ್ನೂ ಕಂಡುಕೊಂಡಿದ್ದಾರೆ. ಸ್ವ ಉದ್ಯೋಗ, ಸ್ವಾವಲಂಬನೆಯ ಕಾರಣಕ್ಕೆ ರಚನೆಯಾದ ಈ ಸಂಘಗಳನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಸರ್ಕಾರದ ಉದ್ದೇಶ. ಇಂಥ ಸದುದ್ದೇಶದ ಸಂಘಗಳಿಗಾಗಿ ಸರ್ಕಾರ 2019 ರಲ್ಲಿ ಎನ್.ಆರ್.ಎಲ್.ಎಂ. ಸಂಜೀವಿನಿ ಮಿಷನ್ 55 ಯೋಜನೆಯನ್ನು ಜಾರಿ ಮಾಡಿತ್ತು.


ಈ ಯೋಜನೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳು,ಸ್ತ್ರೀಶಕ್ತಿ ಸಂಘಗಳು ಸಣ್ಣ ಕೈಗಾರಿಕೆಗಳನ್ನು ಪ್ರಾರಂಭಿಸಿ ಉದ್ಯೋಗ ಮಾಡುವ ಉದ್ದೇಶದಿಂದ ಸರ್ಕಾರ ಮಾರ್ಗದರ್ಶನ ಮಾಡಿತ್ತು. ಈ ಯೋಜನೆಯಂತೆ ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆ,ಅವುಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಬ್ಯಾಂಕಗಳಿಂದ ಸಾಲ ಮಾಡಿ ಏಜೆನ್ಸಿಯೊಂದಕ್ಕೆ ಎಪ್ಪತೈದು ಲಕ್ಷ ರೂಪಾಯಿ ಹಣವನ್ನು ಈ ಸಂಘಗಳಿಂದ ನೀಡಲಾಗಿತ್ತು.
ಈ ಯೋಜನೆಯ ಪ್ರಾರಂಭದಿಂದ ಈ ವರೆಗೆ ಮೂರುವರ್ಷಗಳ ವರೆಗೆ ಕೆಲವು ಕಡೆ ಯಂತ್ರಗಳನ್ನು ನೀಡಿದ ಮನು ಎಂಟರ್ಪ್ರೈಸಸ್ ಎನ್ನುವ ಸಂಸ್ಥೆ ಬಹುತೇಕ ಸಂಘಗಳಿಗೆ ಯಂತ್ರವನ್ನೂ ಪೂರೈಸಿಲ್ಲ,ಕಚ್ಚಾ ವಸ್ತುಗಳನ್ನೂ ನೀಡಿಲ್ಲ. ಮಹಿಳಾ ಸಂಘಗಳು ಬ್ಯಾಂಕ್ ನಿಂದ ಸಾಲಮಾಡಿ ನೀಡಿದ ಹಣಕ್ಕೆ ಪ್ರತಿಯಾಗಿ ಯಂತ್ರ-ನಿರ್ವಹಣೆ, ಕಚ್ಚಾವಸ್ತು ಒದಗಿಸದೆ ಮೂರು ವರ್ಷ ಕಳೆದಿದೆ. ಈ ಅವಧಿಯಲ್ಲಿ ಈ ಮಹಿಳಾ ಸಂಘಗಳ ಸಣ್ಣ ಕೈಗಾರಿಕೆಗಳ ಉತ್ಪನ್ನ ಸಿದ್ಧವಾಗದೆ ಸಂಘಗಳಿಗೆ ಆದಾಯ ಬಂದಿಲ್ಲ. ಮನು ಎಂಟರ್ಪ್ರೈಸಸ್ ನ ಪ್ರಭು ದೊಡ್ಮನಿ ತಮ್ಮ ವ್ಯವಹಾರಿಕ ಕರಾರಿನಂತೆ ನಡೆದುಕೊಳ್ಳದೆ ಸಂಘಗಳಿಗೆ ವಂಚಿಸಿ ಹಾನಿ ಮಾಡಿದ್ದಾರೆ. ಈ ಬಗ್ಗೆ ಕೆಲವು ಬಾರಿ ವಿಚಾರಿಸಿದ ಮಹಿಳಾ ಸ್ವ ಸಹಾಯ ಸಂಘಗಳು ಇಂದು ರೈತ ಸಂಘದ ನೆರವಿನೊಂದಿಗೆ ಮನು ಎಂಟರ್ಪ್ರೈಸಿಸ್ ಪ್ರಭು ದೊಡ್ಮನಿಯವರ ವಿರುದ್ಧ ತಾಲೂಕಾ ಪಂಚಾಯತ್ ಗೆ ಮನವಿ ನೀಡಿ ತಮಗೆ ಸಹಕಾರ ನೀಡಲು ಕೋರಿ ಸ್ಥಳಿಯ ಸಿದ್ಧಾಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿ ಮಾಡಲಾಗದೆ ಬಡ್ಡಿ ಭರಿಸುವ ಅನಿವಾರ್ಯತೆಗೆ ಸಂಘಗಳನ್ನು ದೂಡಿರುವ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಪ್ರಕ್ರೀಯೆಗಳಿಗೆ ಸ್ಫಂದಿಸಿದ ಮನು ಎಂಟರ್ಪ್ರೈಸಿಸ್ ಎಜೆನ್ಸಿ ಒಂದು ತಿಂಗಳ ಕಾಲಾವಕಾಶ ಕೇಳಿ ತಪ್ಪು ಸರಿಪಡಿಸುವ ಭರವಸೆಯೊಂದಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ. ಮಹಿಳಾ ಸಂಘಗಳ ಈ ಕೊಟ್ಯಂತರ ವ್ಯವಹಾರದ ವಿಷಯ ಈಗ ಚರ್ಚೆಯ ವಿಷಯವಾಗಿದ್ದು ಸರ್ಕಾರದ ಯೋಜನೆಯ ಲಾಭ ಪಡೆದು ಮಹಿಳಾ ಸಂಘಗಳಿಗೆ ವಂಚಿಸುವ  ಇಂಥ ಏಜೆನ್ಸಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *