

ಸಿದ್ಧಾಪುರದ ಹಣಜಿಬೈಲಿನ ೨೬ ರ ಹರೆಯದ ಪವನ್ ಕುಮಾರ ನಾಯ್ಕ ಇಂದು ಮಧ್ಯಾಹ್ನ ರಕ್ತವಾಂತಿ ಮಾಡಿಕೊಂಡು ನಿಧನರಾಗಿದ್ದಾರೆ.
ಕಳೆದ ಕೆಲವು ದಿವಸಗಳಿಂದ ಸಹಜ ಅನಾರೋಗ್ಯದಿಂದ ಬಳಲಿದ ಹಣಜಿಬೈಲಿನ ಯುವಕ ಪವನ್ ಕುಮಾರ ನಾಯ್ಕ ಸೋಮುವಾರ ತಾಲೂಕಾ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದ ತಂದೆಯೊಂದಿಗೆ ಆಸ್ಫತ್ರೆಗೆ ಭೇಟಿಮಾಡಿದ್ದ ಪವನ್ ನಾಯ್ಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಲಾಗಿತ್ತು. ಈ ಚಿಕಿತ್ಸೆಯ ನಂತರ ಇಂದು ಬೆಳಿಗ್ಗೆ ನಸುಕಿನಲ್ಲಿ ಈ ಯುವಕನಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಮಧ್ಯಾಹ್ನದ ವೇಳೆಗೆ ರಕ್ತಕಾರಿಕೊಂಡು ನಿಧನನಾದ ಪವನ್ ಕುಮಾರ್ ಆರೋಗ್ಯವಂತ,ಸದೃಢ ಯುವಕನಾಗಿದ್ದ ತಪ್ಪು ಚಿಕಿತ್ಸೆಯಿಂದ ಈ ಅವಗಢ ಸಂಭವಿಸಿರಬಹುದಾದ ಅನುಮಾನಗಳ ಹಿನ್ನೆಲೆಯಲ್ಲಿ ಹಣಜಿಬೈಲಿನ ಜನತೆ ಇಂದು ಮುಸ್ಸಂಜೆ ಮೊದಲು ತಾಲೂಕಾ ಅಸ್ಫತ್ರೆ ಬಳಿ ಸೇರಿದ್ದು ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.
ವಾತಾವರಣದ ಸೂಕ್ಷ್ಮತೆ ಹಿನ್ನೆಲೆಯಲ್ಲಿ ಶಿರಸಿ ಡಿವೈಎಸ್ಪಿ ರವಿ ನಾಯ್ಕ ತಕ್ಷಣ ಆಸ್ಫತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಾಧಿತರ ಪರವಾಗಿ ಕೆ.ಜಿ.ನಾಯ್ಕ, ನಾಗರಾಜ್ ನಾಯ್ಕ ಹಣಜಿಬೈಲ್, ಮಾರುತಿ ನಾಯ್ಕ ಕಾನಗೋಡು,ಎಸ್.ಕೆ. ಮೇಸ್ತ ಸೇರಿದ ಅನೇಕರು ಸ್ಥಳದಲ್ಲಿದ್ದರು. ವಾಂತಿ-ಭೇದಿ ಲಕ್ಷಣಕ್ಕೆ ಚಿಕಿತ್ಸೆ ನೀಡಿದ್ದು ಸಾವಿನ ಕಾರಣ ತಿಳಿದಿಲ್ಲ ಎಂದು ತಾಲೂಕಾ ಆಸ್ಫತ್ರೆ ಮೂಲಗಳು ತಿಳಿಸಿವೆ.




₹5 ಕೋಟಿ ಮೌಲ್ಯದ ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನ, ಇಬ್ಬರ ಬಂಧನ
ತಿಮಿಂಗಿಲ ವಾಂತಿಯನ್ನು ಮಾರಾಟ ಮಾಡಲು ಯತ್ನಿಸಿದ್ದ ಬೆಳಗಾವಿಯ ಸಂತೋಷ್ ಕಾಮತ್ ಮತ್ತು ಶಿರಸಿಯ ರಾಜೇಶ್ ಪೂಜಾರಿಯನ್ನು ಶಿರಸಿ ನಗರ ಪೊಲೀಸರು ಬಂಧಿಸಿದ್ದಾರೆ.
ಶಿರಸಿ: ಅಂದಾಜು 5 ಕೋಟಿ ರೂ. ಬೆಲೆ ಬಾಳುವ ನಿಷೇಧಿತ ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ಅನ್ನು ಶಿರಸಿ ಪೊಲೀಸರು ಕಳೆದ ರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೇ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ.
ಬೆಳಗಾವಿಯಿಂದ ತಿಮಿಂಗಲ ವಾಂತಿಯನ್ನು ತಂದು ಶಿರಸಿಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಶಿರಸಿ ನಗರದಲ್ಲಿ ಸುಮಾರು 5 ಕೆ.ಜಿ ತಿಮಿಂಗಲ ವಾಂತಿ ವಶಕ್ಕೆ ಪಡೆದರು. ಬೆಳಗಾವಿಯ ಸಂತೋಷ್ ಕಾಮತ್ ಮತ್ತು ಶಿರಸಿಯ ರಾಜೇಶ್ ಪೂಜಾರಿಯನ್ನು ಬಂಧಿಸಿದ್ದಾರೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
