ಕಾರವಾರ: ಎಣ್ಣೆ ಏಟಲ್ಲಿ ಅಪ್ಪನನ್ನೇ ಹತ್ಯೆ ಮಾಡಿದ ಪಾಪಿ ಪುತ್ರ
ಮದ್ಯಪಾನ ಮಾಡಿ ಮನೆಯಲ್ಲಿ ಜಗಳ ತೆಗೆಯುತ್ತಿದ್ದ ಮಗ ಈಗ ತಂದೆಯನ್ನೇ ಕೊಂದು ಪೊಲೀಸರ ಅತಿಥಿಯಾಗಿದ್ದಾನೆ. ಕುಡಿದ ಮತ್ತಲ್ಲಿ ಜಗಳ ತೆಗೆದು ತಂದೆಯನ್ನೇ ಹತ್ಯೆ ಮಾಡಿದ್ದಾನೆ.
ಕಾರವಾರ (ಉ.ಕ): ಕ್ಷುಲ್ಲಕ ಕಾರಣಕ್ಕೆ ಮದ್ಯದ ಅಮಲಿನಲ್ಲಿ ಜಗಳ ತೆಗೆದ ಮಗ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕುಮಟಾ ತಾಲೂಕಿನ ಸಂತೆಗುಳಿ ವ್ಯಾಪ್ತಿಯ ಕಲವೆ ಗ್ರಾಮದಲ್ಲಿ ನಡೆದಿದೆ.
ರಾಮಚಂದ್ರ ಕುಪ್ಪು ಗೌಡ (55) ಮೃತ ದುರ್ದೈವಿ. ನಿತ್ಯ ಕುಡಿದು ಬರುತ್ತಿದ್ದ ಮಗ ಶ್ರೀಕಾಂತ್ ಮನೆಯಲ್ಲಿ ಜಗಳವಾಡುತ್ತಿದ್ದ. ಸೋಮವಾರ ಸಂಜೆ ಕೂಡ ಮನೆಯಲ್ಲಿ ಜಗಳವಾಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ನಂತದ ಸಿಟ್ಟಿಗೆದ್ದ ಮಗ ಕತ್ತಿಯಿಂದ ತಂದೆ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ತೀವ್ರ ಗಾಯಗೊಂಡ ತಂದೆ ನರಳಿ ಪ್ರಾಣಬಿಟ್ಟಿದ್ದಾರೆ.
ಅಪ್ಪನನ್ನೇ ಹತ್ಯೆಗೈದ ಪಾಪಿ ಪುತ್ರ
ಘಟನೆ ಕುರಿತು ಮೃತರ ಪತ್ನಿ ಸಾವಿತ್ರಿ ಕುಮಟಾ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಪಿಎಸ್ಐ ಆನಂದ ಮೂರ್ತಿ, ರವಿ.ಗುಡ್ಡೆ, ಎಎಸ್ಐ ನಾಗಾರಜಾಪ್ಪ ಆರೋಪಿಯನ್ನ ಬಂಧಿಸಿದ್ದಾರೆ.
ದಾಂಡೇಲಿಯಲ್ಲಿ ಮೊಸಳೆ ಎಳೆದೊಯ್ದಿದ್ದ ಬಾಲಕನ ಮೃತದೇಹ ಪತ್ತೆ
ದಾಂಡೇಲಿ ನಗರದ ಹಳಿಯಾಳ ರಸ್ತೆಯ ವಿನಾಯಕ ನಗರದಲ್ಲಿರುವ ಕಾಳಿ ನದಿಯ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನೋರ್ವನನ್ನು ಮೊಸಳೆಯೊಂದು ಎಳೆದೊಯ್ದಿತ್ತು. ಇಂದು ಬಾಲಕನ ಶವ ಪತ್ತೆಯಾಗಿದೆ.
ಕಾರವಾರ: ಮೀನು ಹಿಡಿಯಲು ತೆರಳಿದಾಗ ಮೊಸಳೆ ಪಾಲಾಗಿದ್ದ ಬಾಲಕನ ಶವ ಎರಡು ದಿನಗಳ ಬಳಿಕ ಇಂದು ಪತ್ತೆಯಾಗಿದೆ.
ಮೊಹಿನ್ ಮೆಹಬೂಬ್ ಅಲಿ(15) ಮೃತ ಬಾಲಕ. ವಿನಾಯಕನಗರದ ಬಳಿಯ ಕಾಳಿ ನದಿ ದಂಡೆಯಲ್ಲಿ ಮೀನು ಹಿಡಿಯುತ್ತಿರುವಾಗ ದಾಳಿ ಮಾಡಿದ ಮೊಸಳೆ ಬಾಲಕನನ್ನು ಎಳೆದೊಯ್ದಿದಿತ್ತು. ಒಂದೆರಡು ಬಾರಿ ನದಿಯಲ್ಲಿ ಮೊಸಳೆಯು ಬಾಲಕನನ್ನು ಮೇಲಕ್ಕೆ ಎತ್ತಿ ಮುಳುಗಿಸಿದ್ದ ಬಳಿಕ ಬಾಲಕನ ಸುಳಿವು ಪತ್ತೆಯಾಗಿರಲಿಲ್ಲ. ಬಾಲಕನಿಗಾಗಿ ಸ್ಥಳೀಯರು ತೆಪ್ಪದ ಮೂಲಕ ಮತ್ತು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೋಟ್ಗಳ ಮೂಲಕ ಹುಡುಕಾಟ ನಡೆಸಿದ್ದರೂ ಬಾಲಕ ಪತ್ತೆಯಾಗಿರಲಿಲ್ಲ.
ದಾಂಡೇಲಿಯಲ್ಲಿ ಮೊಸಳೆ ಎಳೆದೊಯ್ದಿದ್ದ ಬಾಲಕನ ಮೃತದೇಹ ಪತ್ತೆ!
ಇಂದು ಮತ್ತೆ ಕಾರ್ಯಾಚರಣೆ ನಡೆಸಿದಾಗ ಬಾಲಕನ ಶವ ಪತ್ತೆಯಾಗಿದೆ. ಬಾಲಕನ ಒಂದು ಕೈ ಅನ್ನು ಮೊಸಳೆ ತಿಂದು ಹಾಕಿದೆ. ಈ ಬಗ್ಗೆ ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (etbk)