ನಿಮ್ಮ ಮಕ್ಕಳನ್ನು ಪ್ರೀತಿಸಿ…. ಅಷ್ಟೆ


ನಿಮ್ಮ ಮಕ್ಕಳನ್ನು ಪ್ರೀತಿಸಿ…

ಎಷ್ಟೊಂದು ಜನ ನನ್ನ ಮಗಳು ಹೀಗೆ ಮಾಡೋದೇ ಇಲ್ಲ. ಮಗ ಒರಟಾಗಿ ಮಾತಾಡ್ತಾನೆ ಅಂತ ನೇರವಾಗಿ ಮಕ್ಕಳ ಮುಂದೆಯೇ ಹೇಳುತ್ತಾರೆ. ‌.. ಎಲ್ಲೋ ಕೆಲವರು ಮಾತ್ರ ಮಕ್ಕಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ…‌

ನಿಮ್ಮ ಮಕ್ಕಳ ಸಾಧನೆ ದೊಡ್ಡದೋ ಸಣ್ಣದೋ, ಅವರನ್ನು ಗುರುತಿಸಿ, ಪ್ರೀತಿಸಿ..

ಸಣ್ಣವರಿರುವಾಗ ಮಕ್ಕಳನ್ನು ಹೊಗಳಿದರೆ ಹಾಳಾಗುತ್ತಾರೆ ಅನ್ನೋವ ಹಳೆ ನುಡಿಗಟ್ಟಿಗೆ ಜೋತುಬಿದ್ದು ಮಕ್ಕಳನ್ನು ಕೀಳಾಗಿ ಕಾಣುವುದನ್ನು ನಿಲ್ಲಿಸಿ..

ಈ ಇಡೀ ಜನರೇಶನ್ ಎದುರಿಸುತ್ತಿರುವ ಸಮಸ್ಯೆಗಳು ಹಳೆಯ ತಲೆಮಾರಿಗಿಂತ ವಿಭಿನ್ನ. ಮೊದಲೆಲ್ಲ ಗೊತ್ತಿರುವ ನಾಲ್ಕಾರು ಜನ ಮಾತಾಡಿದರೆ, ಈಗ ಸಾಮಾಜಿಕ ಮಾಧ್ಯಮಗಳ ಮೂಲಕ ಯಾರು ಬೇಕಾದರೂ ಹೊಗಳಬಹುದು, ಯಾರು ಬೇಕಾದರೂ ಬೈಯಬಹುದು. ಅವುಗಳ ಒತ್ತಡವನ್ನು ಎದುರಿಸುವ ಮೆಚುರಿಟಿ ಮಕ್ಕಳಿಗೆ ಇರೋದಿಲ್ಲ.

ಸಣ್ಣ ಕೆಲಸವಾದರೂ ಸರಿ.. ನನ್ನ ಮಗಳು ಚೆನ್ನಾಗಿ ಕಾಫಿ ಮಾಡ್ತಾಳೆ, ಅವಳ ಓದಿನ ಟೇಸ್ಟ್ ಚೆನ್ನಾಗಿದೆ, ಮಗ ಅಡುಗೆಗೆ ಸಹಾಯ ಮಾಡ್ತಾನೆ ಅನ್ನೋದನ್ನು ಸಹ ಮಕ್ಕಳ ಮುಂದೆಯೇ ಹೇಳಿ. ಅಂತಹ ಸ್ವಭಾವಗಳು ಖಂಡಿತಾ ಉತ್ತಮಗೊಳ್ಳುತ್ತವೆ.

ಮಾನಸಿಕ ಸಮಸ್ಯೆಗಳು ಅಥವಾ ಹದಿಹರೆಯದಲ್ಲಿ ತೆಗೆದುಕೊಳ್ಳುವ ದುಡುಕು ನಿರ್ಧಾರಗಳಿಗೆ ಮೂಲ ಕಾರಣ ಇದೇ.. ಅಪ್ಪ ಅಮ್ಮಂದಿರು ಆಸ್ಥೆಯಿಂದ ಮಕ್ಕಳ ಜೊತೆ ಕಾಲ ಕಳೆಯದೇ ಇದ್ದರೆ, ಆ ಬಾಂಧವ್ಯದ ಹಸಿವು ಮಕ್ಕಳಲ್ಲಿ ಹಾಗೇ ಉಳಿದುಬಿಡುತ್ತದೆ. ನಾನು ಅವನಿ/ಳಿಗೋಸ್ಕರ ಅಷ್ಟೆಲ್ಲ ಮಾಡಿದೀನಿ, ಆದರೂ ಹೀಗಾಡ್ತಾಳೆ/ನೆ ಅನ್ನೋ ಲೆಕ್ಕಾಚಾರದ ಮಾತುಗಳನ್ನು ನಿಲ್ಲಿಸಿ…

ಅಪ್ಪ ಅಮ್ಮಂದಿರ ಪ್ರೀತಿ ಸಿಗದ ಮಕ್ಕಳು ತಮ್ಮನ್ನು ಚೆನ್ನಾಗಿ ಮಾತಾಡಿಸುವ ಪ್ರತಿಯೊಬ್ಬರಲ್ಲೂ ಆ ಪ್ರೀತಿಯನ್ನು ಹುಡುಕತೊಡಗುತ್ತಾರೆ. ಆದರೆ ಯಾರೂ ಅಷ್ಟು ಪ್ರೀತಿ ಕೊಡೋದಕ್ಕೆ ಸಾದ್ಯವಿಲ್ಲ.. ಪ್ರೀತಿಯಲ್ಲಿ ಬದಲಾವಣೆಯಾಗುತ್ತಿದ್ದ ಹಾಗೆ ಅದನ್ನು ಕಳೆದುಕೊಳ್ಳುವ ಭಯದಿಂದ ಬೇರೆ ಬೇರೆ ಲೂಪ್ ನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಮತ್ತೆ ಸಂಬಂಧಗಳು ಕಡಿದುಹೋಗುತ್ತವೆ. ಮತ್ತೆ ಇದೇ ಸೈಕಲ್ ಪುನರಾವರ್ತನೆಯಾಗುತ್ತದೆ. ಅದೇ ನೋವು, ಅಸಹಾಯಕತೆಗಳು ಕೂಡ.

ತಂದೆ ತಾಯಿ ಬಹಳಷ್ಟು ಪ್ರೀತಿ, ಮಾತುಕತೆ, ಆತ್ಮವಿಶ್ವಾಸ ಇಟ್ಟ ಕಡೆ ಮಕ್ಕಳ ಜೀವನ ನರಕ ಆಗೋದು ಕಡಿಮೆ. ನಾನು ನಂಬಿಕೆ ಇಟ್ಟಿದ್ದೆ, ಮಕ್ಕಳು ಮೋಸ ಮಾಡಿದರು ಅನ್ನುವ ಅಪ್ಪ ಅಮ್ಮಂದಿರೂ ತಾವು ಮಕ್ಕಳಿಗೆ ಎಷ್ಟರ ಮಟ್ಟಿಗೆ ಬೆಂಬಲವಾಗಿದ್ದೆವು, ಅವರ ಜೊತೆ ಏನೆಲ್ಲ ಮಾತನಾಡಿದ್ದೆವು ಅನ್ನೋದನ್ನ ಅವಲೋಕಿಸಿಕೊಳ್ಳುವ ಅಗತ್ಯ ಇದೆ.

ಮಕ್ಕಳನ್ನು ದೂರ ಎಲ್ಲೋ ಬೆಳೆಸಿ ಓದಿಸುವುದು ಆಯ್ಕೆಯಾಗಬಾರದು. ಅದು ಅನಿವಾರ್ಯವಾಗಿದ್ದರೆ, ಕನಿಷ್ಟ ಸಂವಹನ ಬಹಳಷ್ಟಿಡಿ, ಪತ್ರಗಳನ್ನು ಬರೆಯಿರಿ. ಭೇಟಿಯಾದಾಗ ಇನ್ನಿಲ್ಲದಷ್ಟು ಮಾತನಾಡಿ, ಅವರ ಕನಸುಗಳೆಡಗೆ ಪ್ರೇರೇಪಿಸಿ. ಮಕ್ಕಳು ಡೈವರ್ಟ್ ಆಗಿದ್ದಾರೆ ಅನ್ನೋದು ಗಮನಕ್ಕೆ ಬಂದಾಗ ಇವರೆ ನಾನು ನಂಬಿದ ಅಪ್ಪ ಅಮ್ಮನಾ ಎನ್ನುವಷ್ಟು ಒರಟಾಗಿ ನಡೆದುಕೊಳ್ಳೋದು ಬಿಟ್ಟು ಅವರ ಗುರಿಯೆಡೆಗೆ ಇನ್ನಷ್ಟು ಹುರಿದುಂಬಿಸಿ, ಫ್ಯಾಮಿಲಿ ಟೈಂ, ಪ್ರವಾಸಗಳನ್ನು ಹೆಚ್ಚಿಸಿ..

ಮನೆಯಲ್ಲಿನ ಪ್ರೀತಿ ಕಡಿಮೆಯಾಗದ ಹೊರತು ಯಾವ ಮಗುವೂ ಹೊರಗೆ ಹೋಗೋದಿಲ್ಲ. ಅದು ಮೆಚ್ಚುಗೆ, ನಂಬಿಕೆ, ವಿಶ್ವಾಸ ಯಾವುದೇ ಇರಲಿ. ಅವನಿಗೆ ಹೇಳಿದ ಯಾವ ಕೆಲಸವೂ ಮಾಡಲ್ಲ ಅಂತ ದಿನಾ ರೇಗುವ ಅಪ್ಪನಿಗಿಂತ ಕೇಳಿದ ಕೂಡಲೇ ಮಾಹಿತಿ ಕೊಟ್ರಿ ಥ್ಯಾಂಕ್ಯೂ ಎಂದ ಹುಡುಗಿ ಇಷ್ಟ ಆಗ್ತಾಳೆ. ನಿನ್ನ ಫ್ರೆಂಡ್ಸ್ ನೋಡು ಏನೇನೆಲ್ಲ ಸಾಧನೆ ಮಾಡಿದಾರೆ, ನಿನಗೇ ಏನೂ ಸ್ಕಿಲ್ ಇಲ್ಲ ಎಂದು ಹೋಲಿಸುವ ಅಪ್ಪನಿಗಿಂತ ನಿಮ್ಮ ಒಳ್ಳೆಯತನ ಇಷ್ಟ ಆಯ್ತು ಅನ್ನೋ ಅಪರಿಚಿತ ಇಷ್ಟ ಆಗ್ತಾನೆ… ಯಾವಾಗಲೂ ಪ್ರತಿಸ್ಪರ್ಧಿಯ ಹಾಗೆ ನೋಡುವ ಅಮ್ಮನಿಗಿಂತ ಕಂದಾ ಎಂದು ಕರೆದ ಯಾರೋ ವ್ಯಕ್ತಿ ಇಷ್ಟವಾಗ್ತಾರೆ…

ಬಹಳಷ್ಟು ಕಡೆ ಹೊರಗಿನವರಲ್ಲಿ ಮಕ್ಕಳು ಹುಡುಕೋದು ತಾವು ಕಳೆದುಕೊಂಡ ತಮ್ಮ ಅಪ್ಪ ಅಮ್ಮ ಅಣ್ಣ ತಂಗಿಯರನ್ನೇ…. ಆದರೆ ಗೊತ್ತಾಗೋದಿಲ್ಲ ಅಷ್ಟೇ..
ಇದು ಬಹಳ ಸೂಕ್ಷ್ಮ ಭಾವನೆಗಳ ವಿಷಯ… ಸ್ವಲ್ಪ ಗಮನ ಕೊಟ್ಟರೆ ಸಾಕು…

ನಿಮ್ಮ ಮಕ್ಕಳನ್ನು ಪ್ರೀತಿಸಿ. ಪ್ರೀತಿಸುತ್ತೇವೆಂದು ಅವರಿಗೆ ತಿಳಿಸಿ. ಸರಿಯಾದ ರೀತಿಯಲ್ಲಿ ತಿಳಿಸಿ..

ಸಮುದೃತ್ತಾ ಕಂಜರ್ಪಣೆ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *