

ಉತ್ತರ ಕನ್ನಡ ಪರಿಷತ್ ಫಲಿತಾಂಶ : ಬಿಜೆಪಿಯ ಗಣಪತಿ ಉಳ್ವೇಕರ್ಗೆ ಗೆಲುವು

ಒಟ್ಟು 2915 ಮತಗಳ ಪೈಕಿ 2907 ಮತ ಚಲಾವಣೆಗೊಂಡಿದ್ದವು. ಈ ಪೈಕಿ 54 ಮತಗಳು ತಿರಸ್ಕೃತಗೊಂಡಿವೆ. ಆದರೆ, ಕೊನೆವರೆಗೂ ಕಾಂಗ್ರೆಸ್-ಬಿಜೆಪಿ ನಡುವೆ ಏರ್ಪಟ್ಟಿದ್ದ ನೇರಾನೇರ ಹಣಾಹಣಿಯಲ್ಲಿ ಬಿಜೆಪಿಯ ಗಣಪತಿ ಉಳ್ವೇಕರ್ ಗೆಲುವಿನ ನಗೆ ಬೀರಿದ್ದಾರೆ..
ಗಣಪತಿ ಉಳ್ವೇಕರ್ 1514 ಮತಗಳನ್ನು ಪಡೆದಿದ್ದರೇ ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ಅವರಿಗೆ 1331 ಮತಗಳು ಬಂದಿದೆ. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳಾದ ಈಶ್ವರಗೌಡ 4, ದತ್ತಾತ್ರೇಯ ನಾಯ್ಕ 3 ಹಾಗೂ ಸೋಮಶೇಖರ್ ವಿಎಸ್ 1 ಮತ ಪಡೆದಿದ್ದಾರೆ.
uttara kannada council election results : ಒಟ್ಟು 2915 ಮತಗಳ ಪೈಕಿ 2907 ಮತ ಚಲಾವಣೆಗೊಂಡಿದ್ದವು. ಈ ಪೈಕಿ 54 ಮತಗಳು ತಿರಸ್ಕೃತಗೊಂಡಿವೆ. ಆದರೆ, ಕೊನೆವರೆಗೂ ಕಾಂಗ್ರೆಸ್-ಬಿಜೆಪಿ ನಡುವೆ ಏರ್ಪಟ್ಟಿದ್ದ ನೇರಾನೇರ ಹಣಾಹಣಿಯಲ್ಲಿ ಬಿಜೆಪಿಯ ಗಣಪತಿ ಉಳ್ವೇಕರ್ ಗೆಲುವಿನ ನಗೆ ಬೀರಿದ್ದಾರೆ.
ಕಳೆದ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲು ಕಂಡಿದ್ದ ಉಳ್ವೇಕರ್ ಈ ಬಾರಿ ಗೆಲುವು ಕಂಡಿದ್ದಾರೆ. ಇದರೊಂದಿಗೆ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬಿಜೆಪಿ ಎಂಎಲ್ಸಿ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದೆ. ಆದರೆ, ಮೂರು ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮತ್ತೊಂದು ಸೋಲುಂಡಿದ್ದಾರೆ.
ಮೇಲ್ಮನೆ ಚುನಾವಣಾ ಫಲಿತಾಂಶ ಸಮಾಧಾನ ತಂದಿದೆ- ಡಿಕೆ ಶಿವಕುಮಾರ್
ಮೇಲ್ಮನೆ ಚುನಾವಣಾ ಫಲಿತಾಂಶ ಸಮಾಧಾನ ತಂದಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ಮೇಲ್ಮನೆ ಚುನಾವಣಾ ಫಲಿತಾಂಶ ಸಮಾಧಾನ ತಂದಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಹಲವು ಕಡೆ ಕೊನೆ ಕ್ಷಣಕ್ಕೆ ಅಭ್ಯರ್ಥಿ ಹಾಕಿ ಅಲ್ಪ ಮತದಿಂದ ಸೋತಿದ್ದೇವೆ. ನಮ್ಮ ಅಭ್ಯರ್ಥಿಗಳು ಪೈಪೋಟಿ ನೀಡಿದ್ದಾರೆ ಎಂದರು.
ಆಡಳಿತಾರೂಢ ಪಕ್ಷಕ್ಕೆ ಒಂದು ಲಾಭ ಇದ್ದೇಯಿದೆ. ಅದನ್ನು ಅವರು ಸಂಪೂರ್ಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಸೋತ ಕಡೆಈ ಬಾರಿ ನಾವು ಗೆದ್ದಿದ್ದೇವೆ. ಕೆಲವು ಕಡೆ ಸೀಟು ಕಳೆದುಕೊಂಡಿರುವುದಾಗಿ ತಿಳಿಸಿದರು.
ಪರಿಷತ್ ನಲ್ಲಿ ಬಹುಮತಕ್ಕಾಗಿ ನಾವು ಹೋರಾಟ ಮಾಡಿಲ್ಲ. ಅದನೆಲ್ಲಾ ನಾವು ಲೆಕ್ಕ ಹಾಕಿಲ್ಲ. ಉತ್ತಮ ಫಲಿತಾಂಶ ನಿರೀಕ್ಷೆ ಮಾಡಿದ್ದೇವೆ. ಒಟ್ಟಾರೇ ಫಲಿತಾಂಶ ಸಮಾಧಾನ ತಂದಿದೆ ಎಂದರು.
