ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಕೊಡಗಿನಲ್ಲಿ ಬಿಜೆಪಿಗೆ, ಹಾಸನಲ್ಲಿ ಸೂರಜ್ ರೇವಣ್ಣಗೆ, ಬೀದರ್ ನಲ್ಲಿ ಕಾಂಗ್ರೆಸ್ ಗೆ ಗೆಲುವು
ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಕೊಡಗು ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ 105 ಮತಗಳ ಮುನ್ನೆಡೆಯಿಂದ ಗೆಲುವು ಸಾಧಿಸಿದ್ದಾರೆ.
ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನಪರಿಷತ್ ಗೆ ನಡೆದ ಚುನಾವಣೆಯಲ್ಲಿ ಬಿ.ಜೆ.ಪಿ. ಯ ಗಣಪತಿ ಉಳ್ವೇಕರ್ ಜಯ ಗಳಿಸಿದ್ದಾರೆ. ಸಮೀಪದ ಪ್ರತಿಸ್ಫರ್ಧಿ ಕಾಂಗ್ರೆಸ್ ನ ಭೀಮಣ್ಣ ನಾಯ್ಕರಿಗಿಂತ 180 ಹೆಚ್ಚು ಮತಗಳನ್ನು ಪಡೆದಿರುವ ಗಣಪತಿ ಉಳ್ವೇಕರ್ ಮೊದಲ ಬಾರಿ ವಿಧಾನಪರಿಷತ್ ಪ್ರವೇಶಿಸಿದ್ದಾರೆ.
ಬಿ.ಜೆ.ಪಿ.ಯ ಒಳಜಗಳ, ಕಾಂಗ್ರೆಸ್ ನ ನಾಯಕರ ಪ್ರತಿಷ್ಠೆಯ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಂತ್ರ ಜಯಗಳಿಸಿದೆ.
ಮಾಜಿ ಶಾಸಕ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಪ್ರಯತ್ನದ ನಡುವೆ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಬಣ ಸ್ಥಳಿಯ ಸಂಸ್ಥೆಗಳ ಸದಸ್ಯರ ಮತ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಕಾರವಾರ ನಗರಸಭೆ ಸದಸ್ಯರಾಗಿ, ಮಾಜಿ ಶಾಸಕ ದಿ. ವಸಂತ ಅಸ್ನೋಟಿಕರ್ ಬೆಂಬಲಿಗರಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದ ಗಣಪತಿ ಉಳ್ವೇಕರ್ ಅನೇಕ ಸ್ಫರ್ಧಿಗಳ ನಡುವೆ ಬಿ.ಜೆ.ಪಿ. ಟಿಕೇಟ್ ಪಡೆದು ಜಯ ಗಳಿಸಿರುವುದು ವಿಶೇಶವಾಗಿದೆ.
ಕೊಡಗು/ಹಾಸನ: ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಕೊಡಗು ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ 105 ಮತಗಳ ಮುನ್ನೆಡೆಯಿಂದ ಗೆಲುವು ಸಾಧಿಸಿದ್ದಾರೆ
ಕೊಡಗು ಕ್ಷೇತ್ರದಲ್ಲಿ 1299 ಮತಗಳು ಚಲಾವಣೆಯಾಗಿದ್ದವು. ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ವಿರುದ್ಧ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಸ್ಪರ್ಧಿಸಿದ್ದರು. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಮೊದಲ ಪ್ರಾಶಸ್ತ್ಯದಲ್ಲಿಯೇ ಗೆದ್ದಿದ್ದಾರೆ. ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿ ಜೆಡಿಎಸ್ ನಿಂದ ಸ್ಪರ್ಧಿಸಿ ಡಾ ಸೂರಜ್ ರೇವಣ್ಣ ಗೆಲುವು ಕಂಡಿದ್ದು ದೇವೇಗೌಡರ ಕುಟುಂಬದಿಂದ ಮತ್ತೊಬ್ಬರು ರಾಜಕೀಯ ಪ್ರವೇಶಿಸಿದ್ದಾರೆ. ಡಾ ಸೂರಜ್ ರೇವಣ್ಣ ಮೊದಲ ಚುನಾವಣೆಯಲ್ಲೇ ಗೆದ್ದು ಬೀಗಿದ್ದು ಈ ಮೂಲಕ ವಿಧಾನಸೌಧಕ್ಕೆ ಕಾಲಿಡುತ್ತಿದ್ದು, ದೇವೇಗೌಡರ ಕುಟುಂಬದ ಕುಡಿ ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸುತ್ತಿದ್ದಾರೆ.
ಕಲಬುರಗಿಯ ಸ್ಥಳೀಯ ಸಂಸ್ಥೆಗಳ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗಾಗಿ ಮತಪೆಟ್ಟಿಗೆಗಳನ್ನು ಎಣಿಕೆ ಸಭಾಂಗಣಕ್ಕೆ ತರುತ್ತಿರುವುದನ್ನು ನೋಡಬಹುದು. ರಾಜ್ಯದ ಬಳ್ಳಾರಿ, ಕೋಲಾರ, ಹುಬ್ಬಳ್ಳಿ-ಧಾರವಾಡ, ಚಿತ್ರದುರ್ಗ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಮುಂದುವರಿದಿದೆ.
ಬೀದರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಬಿ ಪಾಟೀಲ್ ಗೆಲುವು ಸಾಧಿಸಿದ್ದು ಈ ಮೂಲಕ ಇದುವರೆಗೆ ಮೂರೂ ಪಕ್ಷಗಳಿಗೆ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿದಂತಾಗಿದೆ. (kpc)