ಜನವರಿ 1 ರಿಂದ ಎಟಿಎಂನಿಂದ ವಿತ್ ಡ್ರಾ ಮಾಡಲು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ನವದೆಹಲಿ: ಜನವರಿ 1 ರಿಂದ ಎಟಿಎಂನಿಂದ ವಿತ್ ಡ್ರಾ ಮಾಡಲು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆರ್ ಬಿಐ ನಿರ್ದೇಶನದ ಪ್ರಕಾರ, ಜನವರಿ 1 ರಿಂದ ಅನುಮತಿಸಲಾಗಿರುವ ಮಿತಿಗಿಂತ ಹೆಚ್ಚು ಬಾರಿ ವಿತ್ ಡ್ರಾ (ಹಣಕಾಸು ವ್ಯವಹಾರ ಮತ್ತು ಹಣಕಾಸುಯೇತರ ವ್ಯವಹಾರ ಸೇರಿದಂತೆ) ಮಾಡಿದರೆ ರೂ. 21 ರೂಪಾಯಿ ಪಾವತಿಸಬೇಕಾಗುತ್ತದೆ. ಪ್ರಸ್ತುತ ಎಟಿಎಂಗಳಲ್ಲಿ ಇಂತಹ ವ್ಯವಹಾರಗಳಿಗೆ 20 ರೂ. ಶುಲ್ಕ ವಿಧಿಸಲಾಗುತ್ತಿದೆ.
ಆದಾಗ್ಯೂ, ಪ್ರತಿ ತಿಂಗಳು ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್ ಗಳಿಂದ ಐದು ಬಾರಿ ಉಚಿತ ವ್ಯವಹಾರ ಮಾಡುವ ಅರ್ಹತೆಯನ್ನು ಮುಂದುವರೆಸಲಾಗಿದೆ. ಮೆಟ್ರೋ ಕೇಂದ್ರಗಳು ಹಾಗೂ ಐದು ಮೆಟ್ರೋಯೇತರ ಕೇಂದ್ರಗಳಲ್ಲಿ ಇತರ ಬ್ಯಾಂಕ್ ಗಳ ಎಟಿಎಂಗಳಿಂದ ಮೂರು ಬಾರಿ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ವಿತ್ ಡ್ರಾ ಮಾಡಬಹುದಾಗಿದೆ.
ಆರ್ ಬಿಐ ಈ ಹಿಂದೆ ಆಗಸ್ಟ್ 1, 2021 ರಿಂದ ಹಣಕಾಸು ವ್ಯವಹಾರಕ್ಕೆ ರೂ. 15 ರಿಂದ 17 ಮತ್ತು ಹಣಕಾಸುಯೇತರ ವ್ಯವಹಾರಕ್ಕೆ ರೂ. 5 ರಿಂದ 6 ರೂ. ವರೆಗೂ ಬ್ಯಾಂಕ್ ಗಳು ಇಂಟರ್ ಚೇಂಜ್ ಶುಲ್ಕವನ್ನು ಹೆಚ್ಚಿಸಲು ಅವಕಾಶ ನೀಡಿತ್ತು. (kpc)