ವೇಶ್ಯಾವಾಟಿಕೆ, ಮಾನವ ಕಳ್ಳ ಸಾಗಾಣಿಕೆ ಆರೋಪ ಕನ್ನಡಪರ ಹೋರಾಟಗಾರ ಆಕಾಶ್‌ ಕೊಂಡ್ಲಿ ಜೊತೆ ಮೂವರ ಬಂಧನ

ಮಾನವ ಕಳ್ಳ ಸಾಗಾಣಿಕೆ,ವೆಶ್ಯಾವಾಟಿಕೆ ಆರೋಪದ ಮೇಲೆ ಕನ್ನಡಪರ ಹೋರಾಟಗಾರ ಆಕಾಶ್‌ ಕೊಂಡ್ಲಿ ಮತ್ತು ಇತರ ಇಬ್ಬರನ್ನು ಸಿದ್ಧಾಪುರ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ಕೊಂಡ್ಲಿಯ ಸಂಗೀತಾ ಮಡಿವಾಳ ಎನ್ನುವ ಯುವತಿ ತನ್ನನ್ನು ವೆಶ್ಯಾವಾಟಿಕೆಗೆ ಒತ್ತಾಯಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಣ್ಣಪ್ಪ ಯಾನೆ ಆಕಾಶ್‌ ಕೊಂಡ್ಲಿ ಕಡಕೇರಿ. ಮಹೇಶ್‌ ನಾರಾಯಣ ಮಡಿವಾಳ ಹಾಗೂ ಪಾರ್ವತಿ ಎನ್ನುವ ಮೂವರು ಪುಸಲಾಯಿಸಿದ್ದಲ್ಲದೆ ಹಣಕ್ಕಾಗಿ ವೆಶ್ಯಾವಾಟಿಕೆ ದಂಧೆಗೆ ಇಳಿಯದಿದ್ದರೆ ಪ್ರಾಣ ತೆಗೆಯುವುದಾಗಿ ಬೆದರಿಸಿದ್ದಾರೆ ಎಂದು ದೂರಿದ್ದಾರೆ.

ಪ್ರಕರಣದ ವಿವರ- ಕನ್ನಡ ಪರ ಹೋರಾಟಗಾರ ಎಂದುಕೊಳ್ಳುವ ಕನ್ನಡದ ಶಾಲು ಹೊದ್ದುಕೊಂಡು ವೇದಿಕೆಮೇಲೆ ಮಿಂಚುವ ಆಕಾಶ್‌ ಕೊಂಡ್ಲಿ ಯಾನೆ ಅಣ್ಣಪ್ಪ ಮಡಿವಾಳ ಗುರುವಾರ ಮಧ್ಯಾಹ್ನದ ವೇಳೆಗೆ ತನ್ನ ಪರಿಚಯದ ಪಾರ್ವತಿ ಯಾನೆ ಪಾರ್ವತಮ್ಮ ಎನ್ನುವ ಹೆಂಗಸಿನ ಜೊತೆ ಸೇರಿ ಮಹೇಶ್‌ ಮಡಿವಾಳ ಎನ್ನುವವನ ಸಹಕಾರದಿಂದ ಸಂಗೀತಾ ಮಡಿವಾಳರನ್ನು ಸಿದ್ಧಾಪುರ ಪ್ರವಾಸಿ ಬಂಗಲೆಗೆ ಕರೆಸಿದ್ದಾರೆ.

ಸುಂದರಿಯಾದ ಯುವತಿಗೆ ನೀನು ನಾವು ಹೇಳಿದಂತೆ ಕೇಳಿದರೆ ಕೈತುಂಬಾ ಹಣ ಕೊಡುವುದಾಗಿ ಪುಸಲಾಯಿಸಿದ್ದಾರೆ. ಯಾವುದೋ ಕಾರಣಕ್ಕೆ ಈ ಧನದಾಹಿಗಳ ಹಿಡಿಕೆಗೆ ಸಿಕ್ಕಿದ್ದ ಸಂಗೀತಾ ಗಾಬರಿಯಾಗಿದ್ದಾಳೆ. ಕೆಲವು ದಿವಸಗಳಿಂದ ತಮ್ಮದೇ ಊರಿನ ಸ್ವಜಾತಿಯ ಯುವಕರು ತನ್ನನ್ನು ಹಿಂಬಾಲಿಸುತಿದ್ದುದು ಈ ಕಾರಣಕ್ಕೆ ಎಂದು ಸಿಟ್ಟಾದ ಸಂಗೀತಾ ತನ್ನ ಪರಿಚಯಸ್ಥರಿಗೆ ಕರೆಸಿ ವಿಚಾರಿಸಿದ್ದಾಳೆ. ಈ ವೇಳೆಗೆ ಆಕಾಶ್‌ ಕೊಂಡ್ಲಿ ಮತ್ತು ಮಹೇಶ್‌ ಮೇಲೆ ಏರಿಹೋದ ಜನರು ಐ.ಬಿ.ಯಿಂದ ಪೋಲಿಸ್‌ ಠಾಣೆಗೆ ಪೊಲೀಸ್‌ ಠಾಣೆಯಿಂದ ಐಬಿ.ಗೆ ಎರಡ್ಮೂರು ಬಾರಿ ಏಳೆದಾಡಿ ಹಿಡಿದಿದ್ದಾರೆ. ಸ್ವಲ್ಪದರಲ್ಲಿ ಜಾಗೃತರಾದ ಮೂವರೂ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಠಾಣೆ ಎದುರು ಸೇರಿದ ಜನರು ಈ ಮೂವರನ್ನೂ ಪೊಲೀಸರಿಗೆ ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *