

ಆರೋಗ್ಯ ಇಲಾಖೆ ನೇಮಕಾತಿ: 28 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 28
ಹುದ್ದೆಗಳು: ಮೆಡಿಕಲ್ ಆಫೀಸರ್, ಸ್ಟಾಫ್ ನರ್ಸ್ (ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ), Ayush MO RBSK, Taluk ASHA Mentor Block Community Mobilizer (ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ)
ಕರ್ತವ್ಯ ಸ್ಥಳ: ಚಿಕ್ಕಬಳ್ಳಾಪುರ
ವೇತನ: ಮಾಸಿಕ ರೂ. 11, 500 ರೂನಿಂದ 50, 000 (ಆಯಾ ಹುದ್ದೆಗಳಿಗೆ ತಕ್ಕಂತೆ ವೇತನ)
ಶೈಕ್ಷಣಿಕ ಅರ್ಹತೆ:
ಮೆಡಿಕಲ್ ಆಫೀಸರ್ ಹುದ್ದೆಗೆ ಎಂಬಿಬಿಎಸ್ ಜೊತೆಗೆ 5 ವರ್ಷ ಅನುಭವ ಹೊಂದಿರಬೇಕು.
ಸ್ಟಾಫ್ ನರ್ಸ್ ಹುದ್ದೆಗೆ GNM ಶೈಕ್ಷಣಿಕ ಅರ್ಹತೆ ಜೊತೆಗೆ 2 ವರ್ಷ ಕೆಲಸದ ಅನುಭವ ಹೊಂದಿರಬೇಕು.
Ayush MO RBSK ಹುದ್ದೆಗೆ BAMS ಉತ್ತೀರ್ಣರಾಗಿ ಇಂಟರ್ನ್ಶಿಪ್ ಅನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು. ಕೆ.ಎಂ.ಸಿ (ಕರ್ನಾಟಕ ಮೆಡಿಕಲ್ ಕೌನ್ಸಿಲ್) ನೋಂದಣಿಯನ್ನು ಹೊಂದಿರತಕ್ಕದ್ದು.
Taluk ASHA Mentor Block Community Mobilizer ~ GNM/ Bsc/Diploma in Nursing ಜೊತೆಗೆ 2 ವರ್ಷ ಅನುಭವ ಹೊಂದಿರಬೇಕು.
ಆಯ್ಕೆ ವಿಧಾನ: ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಆನ್‌ಲೈನ್ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿ) ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 18, 2022
ಅರ್ಜಿ ಶುಲ್ಕ: ಇಲ್ಲ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 20, 2022
ಹೆಚ್ಚಿನ ಮಾಹಿತಿಗಾಗಿ (ಅಧಿಸೂಚನೆ)
https://ggle.io/4YVE (kpc)
