

ಗಣರಾಜ್ಯೋತ್ಸವ ಪರೇಡ್‌ನಿಂದ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕಾರ: ಕರಾವಳಿ ಜಿಲ್ಲೆಗಳಲ್ಲಿ ಆಕ್ರೋಶ
ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಿಂದ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕಾರ ವಿವಾದವು ದಕ್ಷಿಣ ಕನ್ನಡ ಮತ್ತು ಉಡುಪಿಯ ಅವಳಿ ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಮಂಗಳೂರು: ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಿಂದ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕಾರ ವಿವಾದವು ದಕ್ಷಿಣ ಕನ್ನಡ ಮತ್ತು ಉಡುಪಿಯ ಅವಳಿ ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಬಿಜೆಪಿಗೆ ಹೆಚ್ಚಿನ ಹಿಡಿತವಿಲ್ಲದ ಕೇರಳಕ್ಕಿಂತ ಹೆಚ್ಚಾಗಿ, ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿರುವ ಕರಾವಳಿ ಜಿಲ್ಲೆಗಳಲ್ಲಿ ಸ್ತಬ್ಧ ಚಿತ್ರ ತಿರಸ್ಕಾರ ವಿವಾದ ರಾಜಕೀಯ ಪತನದ ಬಗ್ಗೆ ಕೇಸರಿ ಪಕ್ಷವನ್ನು ಚಿಂತೆಗೀಡು ಮಾಡಿದೆ. ಈ ಸಂಬಂಧ ಹಲವಾರು ಬಿಲ್ಲವ ಸಂಘಗಳು ಮತ್ತು ನಾರಾಯಣ ಗುರುಗಳ ಅನುಯಾಯಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಬಿಜೆಪಿ ಸರ್ಕಾರ ಸಮಾಜ ಸುಧಾರಕನನ್ನು ‘ಅವಮಾನಿಸಿದೆ’ ಎಂದು ಆರೋಪಿಸಿವೆ. ಪ್ರತಿಪಕ್ಷಗಳು ಕೂಡಾ ಆಡಳಿತ ಪಕ್ಷವನ್ನು ಟೀಕಿಸಿವೆ.
ಕೇಂದ್ರವನ್ನು ಕಟುವಾಗಿ ಟೀಕಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಬಿಲ್ಲವರಾದ ಬಿ ಜನಾರ್ದನ ಪೂಜಾರಿ ಅವರು ಜನವರಿ 26 ರಂದು ಮಂಗಳೂರಿನಲ್ಲಿ ಗುರುಗಳ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ ಮತ್ತು ಅದಕ್ಕಾಗಿ ಅಂದು ಜನರು ಒಗ್ಗೂಡಿ ಪ್ರಾರ್ಥನೆಗಳನ್ನು ನಡೆಸಬೇಕೆಂದು ಕರೆ ನೀಡಿದ್ದಾರೆ.
ಈ ಮಧ್ಯೆ ಪರಿಸ್ಥಿತಿಯನ್ನು ಸುಧಾರಿಸಲು ಬಿಜೆಪಿ ತನ್ನ ಉನ್ನತ ಬಿಲ್ಲವ ನಾಯಕರನ್ನು ನಿಯೋಜಿಸುವ ಮೂಲಕ ರಕ್ಷಣಾತ್ಮಕವಾಗಿ ಸಾಗಿದೆ. ಸ್ತಬ್ಧಚಿತ್ರ ತಿರಸ್ಕಾರದ ಹಿಂದೆ ಕೇರಳದ ಸಿಪಿಐ(ಎಂ) ಕಾಂಗ್ರೆಸ್ ಪಿತೂರಿಯಿದೆ ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ಮತ್ತು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತಿತರ ಬಿಜೆಪಿಯ ಬಿಲ್ಲವ ನಾಯಕರು ಹೇಳುತ್ತಿದ್ದಾರೆ.
ಈ ಮುಖಂಡರು ಪತ್ರಿಕಾಗೋಷ್ಠಿ ನಡೆಸುವುದಲ್ಲದೆ, ಗುರುಗಳು ಸ್ಥಾಪಿಸಿದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಸ್ಪಷ್ಟತೆ ಮೂಡಿಸುತ್ತಿದ್ದಾರೆ. (kpc)
ಗೋಕರ್ಣದಲ್ಲಿ ಲವರ್ಸ್ ರಂಪಾಟ.. ಅಡ್ಡಾದಿಡ್ಡಿ ಬೈಕ್ ಚಾಲನೆ, ಪೊಲೀಸರೊಂದಿಗೂ ವಾಗ್ವಾದ!
ಹೈದರಾಬಾದ್ ಮೂಲದ ಯುವ ಜೋಡಿಯೊಂದು ಗೋಕರ್ಣದಲ್ಲಿ ರಂಪಾಟ ನಡೆಸಿದೆ. ಅಡ್ಡಾದಿಡ್ಡಿ ಬೈಕ್ ಚಲಾಯಿಸಿ ಜನರಲ್ಲಿ ಭಯ ಹುಟ್ಟಿಸಿದೆ. ಪೊಲೀಸರೊಂದಿಗೂ ವಾಗ್ವಾದ ನಡೆಸಿರುವುದು ಬೆಳಕಿಗೆ ಬಂದಿದೆ.
ಕಾರವಾರ (ಉತ್ತರ ಕನ್ನಡ): ಅಡ್ಡಾದಿಡ್ಡಿ ಬೈಕ್ ಚಲಾಯಿಸಿ ತೆಲಂಗಾಣ ರಾಜ್ಯದ ಪ್ರೇಮಿಗಳು ಜನರಲ್ಲಿ ಭಯ ಹುಟ್ಟಿಸಿದ ಘಟನೆ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ. ಅಷ್ಟೇ ಅಲ್ಲದೆ, ಎಚ್ಚರಿಕೆ ನೀಡಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ರಂಪಾಟ ನಡೆಸಿದ್ದಾರೆ.
ಜನನಿಬಿಡ ರಸ್ತೆಯಲ್ಲಿ ಬೈಕ್ನಲ್ಲಿ ಯುವತಿ ಮುಂದೆ ಕುಳಿತು, ಹಿಂದಿನ ಸೀಟ್ನಲ್ಲಿ ಯುವಕ ಕುಳಿತು ಬೈಕ್ ಅನ್ನು ಅತ್ತಿತ್ತ ಚಲಾಯಿಸುತ್ತಾ ಭಯ ಉಂಟುಮಾಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಬೈಕ್ ನಿಲ್ಲಿಸಿ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ. ಆದರೆ ಈ ವೇಳೆ ಪೊಲೀಸರ ಮೇಲೆ ಇಬ್ಬರು ಹರಿಹಾಯ್ದು ರಂಪಾಟ ನಡೆಸಿ ಮತ್ತೆ ಬೈಕ್ ಚಲಾಯಿಸಲು ಮುಂದಾದಾಗ ಕೆಳಕ್ಕೆ ಬಿದ್ದಿದ್ದಾರೆ. ನಂತರ ಪುನಃ ವಾದಕ್ಕೆ ಇಳಿದಿದ್ದಾರೆ.
ಗೋಕರ್ಣದಲ್ಲಿ ಯುವ ಜೋಡಿ ರಂಪಾಟ
ಬಳಿಕ ಪೊಲೀಸ್ ತುರ್ತು ಸೇವಾ ವಾಹನ 112 ಸ್ಥಳಕ್ಕಾಗಮಿಸಿ ಇಬ್ಬರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಪಿ.ಐ. ವಸಂತ ಆಚಾರ ದಂಡ ವಿಧಿಸಿ ಎಚ್ಚರಿಕೆ ಜೊತೆ ತಿಳಿಹೇಳಿ ಆ ಜೋಡಿಯನ್ನು ಕಳುಹಿಸಿದ್ದಾರೆ. ಬೈಕ್ ಬೀಳಿಸಿಕೊಂಡು ಸಣ್ಣಪುಟ್ಟ ಗಾಯ ಮಾಡಿಕೊಂಡ ಯುವತಿಯನ್ನು ಪೊಲೀಸರೇ ಆರೋಗ್ಯ ಕೇಂದ್ರಕ್ಕೆ ಕೆರದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಯುವ ಜೋಡಿ ರೆಸಾರ್ಟ್ವೊಂದರಲ್ಲಿ ತಂಗಿದ್ದರು ಎನ್ನಲಾಗಿದ್ದು, ಇಬ್ಬರು ಮದ್ಯ ಅಥವಾ ಇನ್ನಾವುದೋ ಅಮಲು ಪದಾರ್ಥ ಸೇವಿಸಿರುವ ಸಂದೇಹ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಪೊಲೀಸರು ಹೇಳಿದರೆ, ಈ ಪ್ರೇಮಿಗಳು ಮಾತ್ರ ಬೇಡವೇ ಬೇಡ ಎಂದು ಹಠ ಹಿಡಿದಿದ್ದರು. ರಾತ್ರಿ 8 ಗಂಟೆಗೆ ಬೆಂಗಳೂರಿಗೆ ತೆರಳುವ ಬಸ್ ಬುಕ್ ಮಾಡಿದ್ದು, ದಯವಿಟ್ಟು ಬಿಟ್ಟು ಬಿಡಿ ಎಂದು ಕ್ಷಮೆಯಾಚಿಸಿ ದಂಡ ಕಟ್ಟಿ ತರಾತುರಿಯಲ್ಲಿ ಪೊಲೀಸ್ ಠಾಣೆಯಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ. (etbk)

