ಪುದುಚೆರಿ ಬಾಕ್ಸಿಂಗ್ ಟೂರ್ನಿಯಲ್ಲಿ ಪದಕ ಗೆದ್ದ ಕರ್ನಾಟಕದ ಸಿದ್ದಿ ಜನಾಂಗದ 7 ಮಂದಿ ಬಾಕ್ಸರ್ ಗಳು
ಟೂರ್ನಿಯಲ್ಲಿ ಪಾಲ್ಗೊಂಡ ಎಲ್ಲಾ ಸಿದ್ದಿ ಬಾಕ್ಸರ್ ಗಳು ಬೆಂಗಳೂರಿನ ವಿಜಯನಗರ ಸರ್ಕಾರಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದವರಾಗಿದ್ದಾರೆ.

ಬೆಂಗಳೂರು: ಕರ್ನಾಟಕದ ಸಿದ್ದಿ ಸಮುದಾಯಕ್ಕೆ ಸೇರಿದ 7 ಮಂದಿ ಬಾಕ್ಸಿಂಗ್ ಪಟುಗಳಿಗೆ ಪುದುಚೆರಿ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಪದಕ ಲಭಿಸಿವೆ. ಒಟ್ಟು 8 ಮಂದಿ ಸಿದ್ದಿ ಬಾಕ್ಸರ್ ಗಳು ಪುದುಚೆರಿಯಲ್ಲಿ ನಡೆದ ಜಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡಿದ್ದರು.
ಟೂರ್ನಿಯಲ್ಲಿ ಪಾಲ್ಗೊಂಡ ಎಲ್ಲಾ ಸಿದ್ದಿ ಬಾಕ್ಸರ್ ಗಳು ಬೆಂಗಳೂರಿನ ವಿಜಯನಗರ ಸರ್ಕಾರಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದವರಾಗಿದ್ದಾರೆ.
ಜೋಸೆಫ್ ಬಸ್ತೊವನ, ಸ್ಟೀವನ್ ಸಂಜನ್ ಸಲಗಟ್ಟಿ, ದರ್ಶನ್ ಮಹಾಬಲೇಶ್ವರ ಸಿದ್ದಿ, ದಿನೇಶ್ ಶಂಕರ್ ಸಿದ್ದಿ, ನಿಖಿಲ್ ಮರಿಯನ್ ಸಿದ್ದಿ, ಕಿರಣ್ ಸಂಜನ್ ಸಿದ್ದಿ ಹಜರತ್ ಅಲಿ, ಇವರೇ ಹೊರರಾಜ್ಯದಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ ಪದಕ ವಿಜೇತ ಸಿದ್ದಿಗಳು. (kpc)