ಹಾಲಪ್ಪ, ಬೇಳೂರು ಧರ್ಮಸ್ಥಳ ದೇವರಾಣೆ ಪ್ರಸಂಗ!

ದಶಕದ ನಂತರ ರಾಜ್ಯದ ಮತ್ತಿಬ್ಬರು ರಾಜಕಾರಣಿಗಳು ಧರ್ಮಸ್ಥಳದಲ್ಲಿ ಆಣೆ- ಪ್ರಮಾಣ!

ಸಾಗರದ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ಮತ್ತು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಬೇಲೂರು ಗೋಪಾಲಕೃಷ್ಣ ಅವರು ಫೆಬ್ರವರಿ 12 ರಂದು ರಂದು ಧರ್ಮಸ್ಥಳ ದೇವಾಲಯದ ದೇವರ ಮುಂದೆ ಆಣೆ- ಪ್ರಮಾಣ ಮಾಡುವ ಸಾಧ್ಯತೆಯಿದೆ.

Haratalu_Halappa_and_Beluru_Gopalakrishna1

ಶಿವಮೊಗ್ಗ: ಸಾಗರದ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ಮತ್ತು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಅವರು ಫೆಬ್ರವರಿ 12 ರಂದು ರಂದು ಧರ್ಮಸ್ಥಳ ದೇವಾಲಯದ ದೇವರ ಮುಂದೆ ಆಣೆ- ಪ್ರಮಾಣ ಮಾಡುವ ಸಾಧ್ಯತೆಯಿದೆ.

ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ 2011ರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಎಚ್ ಡಿ ಕುಮಾರಸ್ವಾಮಿ ಧರ್ಮಸ್ಥಳದ ದೇವಾಲಯ ಮುಂಭಾಗ ಆಣೆ -ಪ್ರಮಾಣ ಮಾಡುವುದಾಗಿ ಹೇಳಿದ್ದರು. ಆದರೆ, ಯಡಿಯೂರಪ್ಪ ಅವರಿಗೆ ಬೇಡ ಎಂದು ಹೈಕಮಾಂಡ್ ಹೇಳಿದ್ದರಿಂದ ಅದು ನಡೆಯಲಿಲ್ಲ. ಈ ಬಾರಿ ಮಾಡಿ ಶಾಸಕರು ಆಣೆ-ಪ್ರಮಾಣದ ಮಾತುಗಳನ್ನಾಡಿದ್ದಾರೆ.

ಹೊಸನಗರದಲ್ಲಿ ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋಪಾಲಕೃಷ್ಣ, ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಮರಳು ಲಾರಿ ಮಾಲೀಕರಿಂದ ಹಾಲಪ್ಪ ಕಮೀಷನ್ ಪಡೆಯುತ್ತಿದ್ದಾರೆ . ಒಂದು ವೇಳೆ ಕಮಿಷನ್ ನೀಡದಿದ್ದರೆ ಅಕ್ರಮವಾಗಿ ಮರಳು ಹೊರತೆಗೆಯಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.

 

ಒಂದು ವೇಳೆ ಹಾಲಪ್ಪ ಪ್ರಾಮಾಣಿಕರಾಗಿದ್ದು, ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದರೆ ದೇವರ ಮುಂದೆ ಬಂದು ಪ್ರಮಾಣ ಮಾಡಲಿ. ನನ್ನ ವಿರುದ್ಧ ಹೇಳಿಕೆ ನೀಡುವಂತೆ ಲಾರಿ ಮಾಲೀಕರಿಗೆ ಹಾಲಪ್ಪ ಎತ್ತುಕಟ್ಟುತ್ತಿದ್ದಾರೆ. ಅದರ ಬದಲು ಹಾಲಪ್ಪ ಸ್ವಯಂ ಪ್ರೇರಿತರಾಗಿ ದೇವರ ಮುಂದೆ ಬರಲಿ, ಹಾಲಪ್ಪ ಕಮೀಷನ್ ಪಡೆದಿರುವುದಾಗಿ ನಾನು ಕೂಡಾ ಪ್ರಮಾಣ ಮಾಡುತ್ತೇನೆ ಎಂದು ಗೋಪಾಲಕೃಷ್ಣ ಹೇಳಿದರು.

ಗೋಪಾಲಕೃಷ್ಣ ಹೇಳಿಕೆಗೆ ಬುಧವಾರ ತಿರುಗೇಟು ನೀಡಿದ ಹಾಲಪ್ಪ, ದಿನಾಂಕ ನಿಗದಿಪಡಿಸಲಿ, ಮರಳು ಲಾರಿ ಮಾಲೀಕರಿಂದ ನಾನಗಲಿ ಅಥವಾ ನನ್ನ ಸಂಬಂಧಿಕರಾಗಲಿ ಕಮಿಷನ್ ಪಡೆದಿದ್ದರೆ ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧವಿರುವುದಾಗಿ ತಿಳಿಸಿದರು. ಪೊಲೀಸರಿಂದಲೂ ನಾನು ಯಾವುದೇ ಹಣ ಪಡೆದಿಲ್ಲ. ಫೆಬ್ರವರಿ 13 ರೊಳಗೆ ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧವಿರುವುದಾಗಿ ಹಾಲಪ್ಪ ಹೇಳಿದರು. 

ಆದಾಗ್ಯೂ, ಫೆಬ್ರವರಿ 13 ರಂದು ಕುಟುಂಬದ ಕಾರ್ಯಕ್ರಮವೊಂದು ಇರುವುದರಿಂದ ಫೆಬ್ರವರಿ 12 ರಂದು ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧವಿರುವುದಾಗಿ ಹಾಲಪ್ಪ ಶುಕ್ರವಾರ ಹೇಳಿದ್ದಾರೆ. ಫೆಬ್ರವರಿ 13 ರಂದು ದೇವರ ಮುಂದೆ ಪ್ರಮಾಣ ಮಾಡಲು ತಾವು ಕೂಡಾ ಸಿದ್ಧವಿರುವುದಾಗಿ ಗೋಪಾಲಕೃಷ್ಣ ಮಾಧ್ಯಮಗಳಿಗೆ ತಿಳಿಸಿದರು. ಶಾಸಕರು ಈಗ ದಿನಾಂಕವನ್ನು ಬದಲಾಯಿಸಿದ್ದಾರೆ ಎಂದು ನನಗೆ ತಿಳಿಸಲಾಯಿತು. ಶೀಘ್ರದಲ್ಲೇ ನನ್ನ ಹೇಳಿಕೆಯನ್ನು ನೀಡುತ್ತೇನೆ ಎಂದು ಅವರು ಹೇಳಿದರು. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *