ಧರ್ಮವನ್ನು ಮನೆಯೊಳಗೆ ಇಟ್ಟು ಬರಬೇಕು: ಯುವ ಕಾಂಗ್ರೆಸ್ ವಕ್ತಾರೆ ಸುರೈಯ್ಯ ಅಂಜುಮ್
ಧರ್ಮಕ್ಕಿಂತ ದೇಶ ಮುಖ್ಯ. ಹಿಜಾಬ್ ಮುಸ್ಲಿಂ ಧರ್ಮದ ಪ್ರತೀಕ ಅದರ ಬಗ್ಗೆ ನಮ್ಮಗೆ ಹೆಮ್ಮೆ ಇದೆ. ಆದರೆ ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾಗಬೇಕು ಎಂದು ಯುವ ಕಾಂಗ್ರೆಸ್ ವಕ್ತಾರೆ ಸುರೈಯ್ಯ ಅಂಜುಮ್ ಹೇಳಿದ್ದಾರೆ.
ಸಾರ್ವಜನಿಕ ಸಹಭಾಗಿತ್ವ ಅಪೇಕ್ಷಿತ- ಕಾಗೇರಿ..
ಸಾರ್ವಜನಿಕರ ಸಹ ಭಾಗಿತ್ವ, ಆಸಕ್ತಿಗಳಿಲ್ಲದೆ ಸಾರ್ವಜನಿಕ ಕೆಲಸಗಳ ಪ್ರಾಮಾಣಿಕ ಅನುಷ್ಠಾನ ಕಷ್ಟಸಾಧ್ಯ ಎಂದಿರುವ ರಾಜ್ಯ ವಿಧಾನ ಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಥಳೀಯರು ಆಸಕ್ತಿಯಿಂದ ತಮ್ಮ ಕೆಲಸಗಳನ್ನು ಮಾಡಿಸಿಕೊಂಡರೆ ಸರ್ಕಾರದ ಉದ್ಧೇಶ ಈಡೇರಬಹುದು ಎಂದು ಆಶಿಸಿದರು.
ಬಿದ್ರಕಾನ್ ಗ್ರಾಮ ಪಂಚಾಯತ್ ಹಳದೋಟದಲ್ಲಿ 25 ಲಕ್ಷಗಳ ಕಾಂಕ್ರೀಟ್ ರಸ್ತೆ ಕಾಮಗಾರಿ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಅಭಿವೃದ್ಧಿ ಗೆ ಅನುದಾನ ನೀಡುವುದು ನಮ್ಮ ಕೆಲಸ ಅದರ ಪ್ರಾಮಾಣಿಕ ಅನುಷ್ಠಾ ನ ದ ಜವಾಬ್ಧಾರಿ ಸ್ಥಳೀಯರದ್ದು ಎಂದರು. ಹಳದೋಟದ ನಾಗರಿಕರ ಪರವಾಗಿ ವಿಧಾನಸಭಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿ. ಟಿ. ಹೆಗಡೆ ಸ್ವಾಗತಿಸಿ ನಿರ್ವಹಿಸಿದರು. ಪತ್ರಕರ್ತರ ಕನ್ನೇಶ್ ಕೋಲಶಿರಸಿ ವಂದಿಸಿದರು. ಗ್ರಾ. ಪಂ. ಅಧ್ಯಕ್ಷ ಎಂ. ಬಿ. ಗೌಡ, ಸದಸ್ಯ ಜಯಂತ್ ಹೆಗಡೆ, ಲಕ್ಷ್ಮಿ ನಾರಾಯಣ ಹೆಗಡೆ, ಶಶಿಗೌಡರ್, ಎಂ.ಜಿ.ಹೆಗಡೆ ಗೆಜ್ಜೆ ವೇದಿಕೆಯಲ್ಲಿದ್ದರು.
ಬೆಂಗಳೂರು: ಧರ್ಮಕ್ಕಿಂತ ದೇಶ ಮುಖ್ಯ. ಹಿಜಾಬ್ ಮುಸ್ಲಿಂ ಧರ್ಮದ ಪ್ರತೀಕ ಅದರ ಬಗ್ಗೆ ನಮ್ಮಗೆ ಹೆಮ್ಮೆ ಇದೆ. ಆದರೆ ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾಗಬೇಕು ಎಂದು ಯುವ ಕಾಂಗ್ರೆಸ್ ವಕ್ತಾರೆ ಸುರೈಯ್ಯ ಅಂಜುಮ್ ಹೇಳಿದ್ದಾರೆ.
ದೇಶದ ಸಂವಿಧಾನ ಹಿಜಾಬ್ ಧರಿಸುವುದಕ್ಕೆ ಅವಕಾಶ ಕೊಟ್ಟಿದೆ. ನಮ್ಮ ಧರ್ಮದ ಆಚರಣೆ ಮುಕ್ತ ಅವಕಾಶ ಕೊಟ್ಟಿದೆ. ಸಂವಿಧಾನ ಕೊಟ್ಟ ಅವಕಾಶವನ್ನು ದುರುಪಯೋಗಪಡಿಸಿವುದು ಸರಿಯಲ್ಲ. ಧರ್ಮವನ್ನು ಮನೆಯೊಳಗೆ ಇಟ್ಟು ಬರಬೇಕು. ಮನೆಯಿಂದ ಹೊರಗೆ ಬಂದಾಗ ನಾವು ಮೊದಲು ಭಾರತೀಯರು. ದೇಶವನ್ನು ಪ್ರೀತಿ, ಧರ್ಮದ ಆಚರಣೆ ಮಾಡಬೇಕು ಎಂದು ಅಂಜುಮ್ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಲೈವ್ ಗೆ ಬಂದು ಮಾತನಾಡಿರುವ ಅಂಜುಮ್ ಶಿಕ್ಷಣಕ್ಕಿಂತ ಬೇರೆ ದೊಡ್ಡ ಧರ್ಮ ಇಲ್ಲ. ಧರ್ಮಕ್ಕಿಂತಲೂ ಮುಖ್ಯ ನನ್ನ ದೇಶ ಎಂದು ಹೇಳಿದ್ದು ವಿಡಿಯೋ ಇದೀಗ ವೈರಲ್ ಆಗಿದೆ. (ಕಪ್ರಡಾ)