
ವಿನಾಯಕ ಕೋಡ್ಸರ ನಿರ್ದೇಶನದ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿದೆ.

ಬಿ.ಜಿ. ಮಂಜುನಾಥ್ ಅವರು ನಿರ್ಮಿಸಿರುವ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿದೆ. ಇದರ ಮಧ್ಯೆ ಚಿತ್ರತಂಡ ವಿನೂತನ ಪ್ರಚಾರತಂತ್ರ ಕೈಗೊಂಡಿದೆ.
ಬಿಡುಗಡೆಗೂ ಪೂರ್ವದಲ್ಲಿ ಚಿತ್ರತಂಡ ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಟಿ.ಎಸ್.ಎಸ್ ಅಡಿಕೆ ವ್ಯಾಪಾರಿ ಅಂಗಳ ಅಂದರೆ ಬಹು ಖ್ಯಾತಿ. ಇದರ ಸಹಯೋಗದೊಂದಿಗೆ ಫೆ.20ರಂದು ತಾರೀಖು ಮಧ್ಯಾಹ್ನ ಮೂರರಿಂದ ಸಂಜೆ ಐದು ಮೂವತ್ತರವರೆಗೂ ಅಡಿಕೆ ಸುಲಿಯುವ ಸ್ಪರ್ಧೆ ಏರ್ಪಡಿಸಲಾಗಿದೆ. ಶಿರಸಿಯ ಟಿ.ಎಸ್.ಎಸ್ ಪ್ರಾಂಗಣದಲ್ಲಿ ಈ ಸ್ಪರ್ಧೆ ನಡೆಯಲಿದೆ.
ಚಿತ್ರದಲ್ಲಿ ದಿಗಂತ್ ಅಡಿಕೆ ಬೆಳೆಗಾರನಾಗಿದ್ದು, ಅಡಿಕೆ ಜೊತೆ ಪಾತ್ರದ ನಂಟಿದೆ. ಹೀಗಾಗಿ ಮಲೆನಾಡಿನ ಜೀವನಾಡಿಯಾದ ಅಡಿಕೆ ಸುಲಿಯುವ ಸ್ಪರ್ಧೆ ಆಯೋಜಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ವಿನಾಯಕ ಕೋಡ್ಸರ.
ವಿನಾಯಕ ಕೋಡ್ಸರ ನಿರ್ದೇಶಿಸಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ದಿಗಂತ್, ಐಂದ್ರಿತಾ ರೇ, ರಜನಿ ರಾಘವನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರವೀಂದ್ರ ಜೋಶಿ ಚಿತ್ರಕ್ಕೆ ಹಣ ಹೂಡಿದ್ದಾರೆ. (kpc)
