ಬರ ಪರಿಹಾರವಾಗಿ ರೂ.324 ಕೋಟಿ ಬಿಡುಗಡೆ ಮಾಡಿದ ಸರ್ಕಾರ: ಯಾವ ಜಿಲ್ಲೆಗೆ ಎಷ್ಟು?

ರಾಜ್ಯದ 31 ಜಿಲ್ಲೆಗಳ ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್) 324 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

File photo

ಬೆಂಗಳೂರು: ರಾಜ್ಯದ 31 ಜಿಲ್ಲೆಗಳ ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್) 324 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಈ ಬಾರಿ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಎಂದು ಈ ಹಿಂದೆ ರಾಜ್ಯ ಸರ್ಕಾರ (ಘೋಷಣೆ ಮಾಡಿತ್ತು. ಅಲ್ಲದೆ, ಕೇಂದ್ರ ಸರ್ಕಾರದ ಬಳಿ ಬರ ಪರಿಹಾರಕ್ಕೆ 17 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆಯೂ ಮನವಿ ಮಾಡಿದೆ. ಆದರೆ, ಕೇಂದ್ರ ಸರ್ಕಾರ ಈವರೆಗೂ ಒಂದೂ ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಬರ ಪರಿಹಾರವಾಗಿ 324 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು ನಗರ-7.50 ಕೋಟಿ ರೂ., ಬೆಂಗಳೂರು ಗ್ರಾಮಾಂತರ-6 ಕೋಟಿ ರೂ., ರಾಮನಗರ-7.50 ಕೋಟಿ ರೂ., ಕೋಲಾರ-9 ಕೋಟಿ ರೂ., ಚಿಕ್ಕಬಳ್ಳಾಪುರ-9 ಕೋಟಿ ರೂ., ತುಮಕೂರು-15 ಕೋಟಿ ರೂ., ಚಿತ್ರದುರ್ಗ-9 ಕೋಟಿ ರೂ., ದಾವಣಗೆರೆ-9 ಕೋಟಿ ರೂ., ಚಾಮರಾಜನಗರ-7.50 ಕೋಟಿ ರೂ., ಮೈಸೂರು-13.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಮಂಡ್ಯ-10.5 ಕೋಟಿ ರೂ., ಬಳ್ಳಾರಿ-7.50 ಕೋಟಿ ರೂ., ಕೊಪ್ಪಳ-10.50 ಕೋಟಿ ರೂ., ರಾಯಚೂರು-9 ಕೋಟಿ ರೂ., ಕಲಬುರಗಿ-16.50 ಕೋಟಿ ರೂ., ಬೀದರ್-4.50 ಕೋಟಿ ರೂ., ಬೆಳಗಾವಿ-22.50 ಕೋಟಿ ರೂ., ಬಾಗಲಕೋಟೆ-13.50 ಕೋಟಿ ರೂ., ವಿಜಯಪುರ-18 ಕೋಟಿ ರೂ., ಗದಗ-10.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಹಾವೇರಿ-12 ಕೋಟಿ ರೂ., ಧಾರವಾಡ-12 ಕೋಟಿ ರೂ., ಶಿವಮೊಗ್ಗ-10.50 ಕೋಟಿ ರೂ., ಹಾಸನ-12 ಕೋಟಿ ರೂ., ಚಿಕ್ಕಮಗಳೂರು-12 ಕೋಟಿ ರೂ., ಕೊಡಗು-7.50 ಕೋಟಿ ರೂ., ದಕ್ಷಿಣ ಕನ್ನಡ-3 ಕೋಟಿ ರೂ., ಉಡುಪಿ-4.50 ಕೋಟಿ ರೂ., ಉತ್ತರ ಕನ್ನಡ-16.50 ಕೋಟಿ ರೂ., ಯಾದಗಿರಿ-9 ಕೋಟಿ ರೂ. ಹಾಗೂ ವಿಜಯನಗರ ಜಿಲ್ಲೆಗೆ 9 ಕೋಟಿ ರೂ. ಸೇರಿದಂತೆ ಒಟ್ಟು 324 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಈ ಅನುದಾನವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಪೇಯಿಸ್ ರಸೀದಿ ಮೂಲಕ ಡ್ರಾ ಮಾಡಿ, ತಮ್ಮ ಡಿಡಿಆರ್‍ಎಫ್ ಪಿಡಿ ಖಾತೆಗೆ ಜಮಾ ಮಾಡಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಜೂನ್‌ನಲ್ಲಿ ರಾಜ್ಯದಲ್ಲಿ ಶೇ.56ರಷ್ಟು ಮಳೆ ಕೊರತೆಯಾಗಿದ್ದು, ಜುಲೈನಲ್ಲಿ ಶೇ.29 ಹಾಗೂ ಆಗಸ್ಟ್‌ನಲ್ಲಿ ಶೇ.73ರಷ್ಟು ಕೊರತೆಯಾಗಿದೆ. ಕರ್ನಾಟಕದಲ್ಲಿ ಕಳೆದ 125 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಕಪ್ರಡಾ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಪ್ರತಿಭೋತ್ಸವ: ಕಲಾವಿದರಿಗೆ ಸನ್ಮಾನ

ಸಿದ್ದಾಪುರ: ಪಟ್ಟಣದ ನಿವೇದಿತಾ ಮಹಿಳಾ ಮಂಡಳಿಯಲ್ಲಿ ನಡೆಯುತ್ತಿರುವ ಶ್ರೀ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾ ವಿದ್ಯಾಲಯ ದ ಸಿದ್ದಾಪುರ ಶಾಖೆಯ ಪ್ರತಿಭೋತ್ಸವ ಕಾರ್ಯಕ್ರಮ ಅಕ್ಟೋಬರ್...

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ...

ಕಾಳಗದಲ್ಲಿ “ಅಧ್ಯಕ್ಷ ಗಾದಿ”,.. ಲಾಭಿಯೇ ಮುಂದಿನ ಹಾದಿ..!??

Sirsi block congress issue….( ಓದುಗರ ವಿಶ್ಲೇಷಣೆ) ಶಿರಸಿ ಬ್ಲಾಕ್ ಕಾಂಗ್ರೆಸ್ ರಾಜಕೀಯ ಕಣದಲ್ಲಿ ಈಗ ಸಖತ್ ಟೆನ್ಷನ್! ಪರೇಡ್ ಮುಗಿಸಿದ ಬೆನ್ನಲ್ಲೇ, ಈಗ...

ಒಂದು ಪತ್ರ.. ಒಡೆದಾಳುವವರ ದಾಳವಾಗಬೇಡಿ ನಾಮಧಾರಿಗಳೆ…

ಮಾನ್ಯರೆ… ನಮಸ್ಕಾರಗಳು… ಕೆಲವು ದಿವಸಗಳಿಂದ ನಿಮಗೊಂದು ಪತ್ರ ಬರೆಯಬೇಕೆಂದುಕೊಂಡು ಯೋಚಿಸುತ್ತಾ ಈ ಬರಹ ಬರೆಯುತ್ತಿದ್ದೇನೆ. Samaajamukhi youtube channel, samajamukhi.net News ಮೂಲಕ ನೀವು...

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ...

Latest Posts

ಪ್ರತಿಭೋತ್ಸವ: ಕಲಾವಿದರಿಗೆ ಸನ್ಮಾನ

ಸಿದ್ದಾಪುರ: ಪಟ್ಟಣದ ನಿವೇದಿತಾ ಮಹಿಳಾ ಮಂಡಳಿಯಲ್ಲಿ ನಡೆಯುತ್ತಿರುವ ಶ್ರೀ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾ ವಿದ್ಯಾಲಯ ದ ಸಿದ್ದಾಪುರ ಶಾಖೆಯ ಪ್ರತಿಭೋತ್ಸವ ಕಾರ್ಯಕ್ರಮ ಅಕ್ಟೋಬರ್ 25 ರಂದು ಇಲ್ಲಿಯ ಶಂಕರಮಠದಲ್ಲಿ ಜರುಗಲಿದೆ ಎಂದು ಸಂಗೀತ ಶಿಕ್ಷಕಿ ವಿದುಷಿ ವಸುದಾ ಶರ್ಮಾ ತಿಳಿಸಿದರು.ಪಟ್ಟಣದ ನಿವೇದಿತಾ ಮಹಿಳಾ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಪ್ರಸ್ತುತ 35...

Recommended For You

About the Author: Kanneshwar Naik

Leave a Reply

Your email address will not be published. Required fields are marked *