


ಕುಮಟಾ ಶಿರ ಶಿಗಳಲ್ಲಿ ಸಹಾಯಕ ಸಂಚಾರಿ ನಿಯಂತ್ರಕರಾಗಿ ಸೇವೆ ಸಲ್ಲಿಸಿದ್ದ ಸಿದ್ದಾಪುರ ಮೂಲದ ಅವರಗುಪ್ಪಾ ಗಾಳಿ ನಾರಾಯಣ ರಾಮಾ ನಾಯ್ಕ ಇಂದು ನಿಧನರಾದರು. ಶಿಸ್ತು, ಸಮಯಪಾಲನೆಗೆ ಹೆಸರಾಗಿದ್ದ ಎನ್. ಆರ್. ನಾಯ್ಕ ಅನಾರೋಗ್ಯ ತಪಾಸಣೆಗೆ ತೆರಳಿದ್ದಾಗ ಸಿದ್ದಾಪುರ ಆಸ್ಪತ್ರೆಯಿಂದ ಶಿವಮೊಗ್ಗ ಕ್ಕೆ ರೆಫರ್ ಮಾಡಲಾಗಿತ್ತು. ಶಿವಮೊಗ್ಗ ಆಸ್ಪತ್ರೆ ಗೆ ಸಾಗಿಸುತ್ತಿದ್ದಾಗ ಸಾಗರ ಬಳಿ ನಾಯ್ಕ ಹೃದಯಾ ಘಾತದಿಂದ ನಿಧನರಾದ ಬಗ್ಗೆ ಅವರ ಆಪ್ತರು ತಿಳಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳು ಎರಡು ಜನ ಸಹೋದರರು ಮತ್ತು ನಾಲ್ವರು ಸಹೋದರಿಯರನ್ನು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಸಂಸ್ಕಾರ ಗುರುವಾರ ಮುಂಜಾನೆ ನಡೆಯಲಿದೆ . ಇತ್ತೀಚಿಗೆ ನಿವೃತ್ತರಾದ ನಾಯ್ಕ ರನ್ನು ksrtc ನಾಮಧಾರಿ ನೌಕರರ ಸಂಘದಿಂದ ಕಳೆದ ರವಿವಾರ ಸಿದ್ದಾಪುರದಲ್ಲಿ ಸನ್ಮಾನಿಸಿ, ಗೌರವಿಸಲಾಗಿತ್ತು. ನಾಯ್ಕರ ಅಕಾಲಿಕ ನಿಧನಕ್ಕೆ ಸಿದ್ಧಾಪುರ ನಾಮಧಾರಿ ಅಭಿವೃದ್ಧಿ ಸಂಘ ಮತ್ತು ಕೆ.ಎಸ್.ಆರ್. .ಟಿ.ಸಿ. ನಾಮಧಾರಿ ನೌಕರರ ಸಂಘಗಳ ಪದಾಧಿಕಾರಿಗಳು ತೀವೃ ಸಂತಾಪ ವ್ಯಕ್ತಪಡಿಸಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.



