
ಶಿರಸಿ-ಸಿದ್ಧಾಪುರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದಿದ್ದು ಸಿದ್ದಾಪುರದಲ್ಲಿ ಗುತ್ತಿಗೆದಾರರ ಅಸಾಮರ್ಥ್ಯದಿಂದ ಅನೇಕ ಕಾಮಗಾರಿಗಳು ಅಪೂರ್ಣವಾಗಿವೆ ಈ ತೊಂದರೆಯಿಂದಾಗಿ ಸರ್ಕಾರದ ಅನುದಾನ ಮರಳುವ ಸಾಧ್ಯತೆಇದ್ದು ಅಧಿಕಾರಿಗಳು ಗುತ್ತಿಗೆದಾರರಿಂದ ಹೆಚ್ಚಿನ ಕೆಲಸ ಮಾಡಿಸುವ ಮೂಲಕ ಕ್ಷೇತ್ರಕ್ಕೆ ತಂದ ಅನುದಾನ ಮರಳಿ ಹೋಗದಂತೆ ಕೆಲಸ ಮಾಡಬೇಕು ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದರು.
ಸಿದ್ಧಾಪುರ ಪರಿವೀಕ್ಷಣಾ ಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾನಗೋಡಿನ ಬಾಂದಾರಿನ ರಸ್ತೆ ಕೆಲಸ, ಹೊಸೂರು ಸ್ಮಶಾನದ ರಗಳೆ,ರವೀಂದ್ರನಗರದ ತೊಂದರೆ ಸೇರಿದಂತೆ ಕೆಲವು ಅಗತ್ಯ ಕೆಲಸಗಳನ್ನು ಶೀಘ್ರವಾಗಿ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ ಕಾಗೇರಿ ಶಿರಸಿ-ಸಿದ್ಧಾಪುರಕ್ಕೆ ಅನುದಾನದ ಕೊರತೆ ಇಲ್ಲ, ಮೋಜಣಿ ಇಲಾಖೆಯ ಸಿಬ್ಬಂದಿ ಕೊರತೆ ಸೇರಿದಂತೆ ಕ್ಷೇತ್ರದ ಸರ್ಕಾರಿ ಕೆಲಸಗಳು, ಅಭಿವೃದ್ಧಿ ಯೋಜನೆ ಸೇರಿದಂತೆ ಜನರ ಅಗತ್ಯಗಳಿಗೆ ಸ್ಫಂದಿಸುವ ಹಿನ್ನೆಲೆಯಲ್ಲಿ ಆಯಾ ಕಾಲದ ಅಗತ್ಯಗಳಿಗೆ ತಕ್ಕಂತೆ ಸರ್ಕಾರದಿಂದ ಕೆಲಸ ನಡೆಯುತ್ತಿದೆ. ಸಾರ್ವಜನಿಕರು ಅಧಿಕಾರಿಗಳು,ಗುತ್ತಿಗೆದಾರರು ಸಂಬಂಧಿಸಿದ ವ್ಯಕ್ತಿಗಳಿಂದ ಸೂಕ್ತ ಕೆಲಸ ಮಾಡಿಸಿಕೊಂಡು ಸಹಕರಿಸದಿದ್ದರೆ ನಮ್ಮ ಉದ್ದೇಶ, ಪ್ರಯತ್ನ ಸಫಲವಾಗುವುದಿಲ್ಲ.
ಗುತ್ತಿಗೆದಾರರು ಸೋಮಾರಿತನ, ರಾಜಕಾರಣ,ಕ್ಷುಲ್ಲಕ ವಿಷಯಗಳ ಸಣ್ಣತನಗಳಿಂದ ಹೊರಬಂದು ಉದ್ದೇಶಿತ ಅಭಿವೃದ್ಧಿಗೆ ಸಹಕರಿಸದಿದ್ದರೆ ಅದರ ಪರಿಣಾಮ ಕ್ಷೇತ್ರದ ಅಭಿವೃದ್ಧಿ ಮೇಲಾಗುತ್ತದೆ. ಅಂಥ ಅವ್ಯವಸ್ಥೆಯನ್ನು ಬದಲಿಸುವ ಶಕ್ತಿ ವ್ಯವ ಸ್ಥೆಗೆ,ಸರ್ಕಾರಕ್ಕಿದೆ ಸರ್ಕಾರದ ಕಾಮಗಾರಿ, ಅಭಿವೃಧ್ಧಿ ಕೆಲಸದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಎಚ್ಚರಿಸಿದ ಅವರು ಕ್ಷೇತ್ರದ ಸರ್ಕಾರಿ ವ್ಯವಸ್ಥೆ, ಸಾರ್ವಜನಿಕ ಸಹಕಾರ ಅಭಿವೃದ್ಧಿ ಪರವಾಗಿದ್ದರೆ ನಮ್ಮ ಗುರಿ ಸಾಕಾರವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
