ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ ಕಾಗೇರಿ

ಶಿರಸಿ-ಸಿದ್ಧಾಪುರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದಿದ್ದು ಸಿದ್ದಾಪುರದಲ್ಲಿ ಗುತ್ತಿಗೆದಾರರ ಅಸಾಮರ್ಥ್ಯದಿಂದ ಅನೇಕ ಕಾಮಗಾರಿಗಳು ಅಪೂರ್ಣವಾಗಿವೆ ಈ ತೊಂದರೆಯಿಂದಾಗಿ ಸರ್ಕಾರದ ಅನುದಾನ ಮರಳುವ ಸಾಧ್ಯತೆಇದ್ದು ಅಧಿಕಾರಿಗಳು ಗುತ್ತಿಗೆದಾರರಿಂದ ಹೆಚ್ಚಿನ ಕೆಲಸ ಮಾಡಿಸುವ ಮೂಲಕ ಕ್ಷೇತ್ರಕ್ಕೆ ತಂದ ಅನುದಾನ ಮರಳಿ ಹೋಗದಂತೆ ಕೆಲಸ ಮಾಡಬೇಕು ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದರು.

ಸಿದ್ಧಾಪುರ ಪರಿವೀಕ್ಷಣಾ ಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾನಗೋಡಿನ ಬಾಂದಾರಿನ ರಸ್ತೆ ಕೆಲಸ, ಹೊಸೂರು ಸ್ಮಶಾನದ ರಗಳೆ,ರವೀಂದ್ರನಗರದ ತೊಂದರೆ ಸೇರಿದಂತೆ ಕೆಲವು ಅಗತ್ಯ ಕೆಲಸಗಳನ್ನು ಶೀಘ್ರವಾಗಿ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ ಕಾಗೇರಿ ಶಿರಸಿ-ಸಿದ್ಧಾಪುರಕ್ಕೆ ಅನುದಾನದ ಕೊರತೆ ಇಲ್ಲ, ಮೋಜಣಿ ಇಲಾಖೆಯ ಸಿಬ್ಬಂದಿ ಕೊರತೆ ಸೇರಿದಂತೆ ಕ್ಷೇತ್ರದ ಸರ್ಕಾರಿ ಕೆಲಸಗಳು, ಅಭಿವೃದ್ಧಿ ಯೋಜನೆ ಸೇರಿದಂತೆ ಜನರ ಅಗತ್ಯಗಳಿಗೆ ಸ್ಫಂದಿಸುವ ಹಿನ್ನೆಲೆಯಲ್ಲಿ ಆಯಾ ಕಾಲದ ಅಗತ್ಯಗಳಿಗೆ ತಕ್ಕಂತೆ ಸರ್ಕಾರದಿಂದ ಕೆಲಸ ನಡೆಯುತ್ತಿದೆ. ಸಾರ್ವಜನಿಕರು ಅಧಿಕಾರಿಗಳು,ಗುತ್ತಿಗೆದಾರರು ಸಂಬಂಧಿಸಿದ ವ್ಯಕ್ತಿಗಳಿಂದ ಸೂಕ್ತ ಕೆಲಸ ಮಾಡಿಸಿಕೊಂಡು ಸಹಕರಿಸದಿದ್ದರೆ ನಮ್ಮ ಉದ್ದೇಶ, ಪ್ರಯತ್ನ ಸಫಲವಾಗುವುದಿಲ್ಲ.

ಗುತ್ತಿಗೆದಾರರು ಸೋಮಾರಿತನ, ರಾಜಕಾರಣ,ಕ್ಷುಲ್ಲಕ ವಿಷಯಗಳ ಸಣ್ಣತನಗಳಿಂದ ಹೊರಬಂದು ಉದ್ದೇಶಿತ ಅಭಿವೃದ್ಧಿಗೆ ಸಹಕರಿಸದಿದ್ದರೆ ಅದರ ಪರಿಣಾಮ ಕ್ಷೇತ್ರದ ಅಭಿವೃದ್ಧಿ ಮೇಲಾಗುತ್ತದೆ. ಅಂಥ ಅವ್ಯವಸ್ಥೆಯನ್ನು ಬದಲಿಸುವ ಶಕ್ತಿ ವ್ಯವ ಸ್ಥೆಗೆ,ಸರ್ಕಾರಕ್ಕಿದೆ ಸರ್ಕಾರದ ಕಾಮಗಾರಿ, ಅಭಿವೃಧ್ಧಿ ಕೆಲಸದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಎಚ್ಚರಿಸಿದ ಅವರು ಕ್ಷೇತ್ರದ ಸರ್ಕಾರಿ ವ್ಯವಸ್ಥೆ, ಸಾರ್ವಜನಿಕ ಸಹಕಾರ ಅಭಿವೃದ್ಧಿ ಪರವಾಗಿದ್ದರೆ ನಮ್ಮ ಗುರಿ ಸಾಕಾರವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮುಂದುವರಿದ ನಾಮಧಾರಿ ಸಂಘರ್ಷ! ಸದಸ್ಯತ್ವಕ್ಕಾಗಿ ಹೋರಾಟ?!

ಸದಸ್ಯತ್ವ,ನಾಯಕತ್ವಗಳ ಬೇಡಿಕೆ, ಮೇಲಾಟದ ಸಿದ್ದಾಪುರನಾಮಧಾರಿ ಅಭಿವೃದ್ಧಿ ಸಂಘದ ಸಂಘರ್ಷ ಪರಸ್ಪರಪೊಲೀಸ್ ದೂರಿನವರೆಗೆ ಮುಂದುವರಿದಿದೆ. ಇತ್ತೀಚೆಗೆ ನಡೆದ ಸಂಘದ ಮುಂದುವರಿದ ಸಭೆಯಲ್ಲಿ ಕೂಡಾ ಆಹ್ವಾನಿತರಲ್ಲದವರು ಹೊರಗೆ...

ಸಂಘ- ಸಮಾಜದ ಹಿತಾಸಕ್ತಿಗೆ ಹೊರಗಿನಿಂದ ಅಡ್ಡಿ # ನಾಮಧಾರಿ ಅಭಿವೃದ್ಧಿ ಸಂಘದ ವಾರ್ಷಿಕ ಸಭೆ ಸಂಪನ್ನ#

ಸಿದ್ದಾಪುರ , ನ.೦೪- ಆಗಬೇಕಾದಕೆಲಸ ಬಿಟ್ಟು ಕೆಲವು ಚಿಕ್ಕ- ಪುಟ್ಟ ತೊಂದರೆ ಮಾಡುವುದರಿಂದ ಸಂಘ, ಸಮಾಜಕ್ಕೆ ಗೌರವ ತರಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು...

ಸಾಲಭಾದೆಗೆ ರೈತನ ಆತ್ಮ# ಹತ್ಯೆ#

ಸಾಲಬಾಧೆ ತಾಳಲಾರದೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದದುರ್ಘಟನೆ ಸಿದ್ದಾಪುರಕೋಲಶಿರಸಿ ಯಲ್ಲಿ ನಡೆದಿದೆ. ಮೃತ ಈಶ್ವರ ಹಾಲಾ ನಾಯ್ಕ ಕೃಷಿ- ಕೂಲಿಮಾಡಿಕೊಂಡಿದ್ದು ಪಿತ್ರಾರ್ಜಿತ ಆಸ್ತಿ ಇದ್ದರೂ ಅವರ...

ಕೆ.ಜಿ. ಬಣದ ಪ್ರತಿಪಾದನೆಗೆ ಕೋರ್ಟ್ ಅಸ್ತು.. ನಾಮಧಾರಿ ಅಭಿವೃದ್ಧಿ ಸಂಘ ನಿರಾಳ

ಸಿದ್ದಾಪುರ, ಇಲ್ಲಿಯ ನಾಮಧಾರಿ ಅಭಿವೃದ್ಧಿ ಸಂಘದ ಸದ ಸ್ಯತ್ವ ದ ವಿಚಾರದಲ್ಲಿ ವಿವಾದವಾಗಿ ನ್ಯಾಯಾಲಯ ಕೆಲವು ಸದಸ್ಯರ ವಿರುದ್ಧ ಹೊರಡಿಸಿದ್ದ ಪ್ರತಿಬಂಧಕಾಜ್ಞೆ ಸಿಂಧು ಎನ್ನುವ...

ವಿಪತ್ತು ನಿರ್ವಹಣೆಯಲ್ಲಿ ಶೌರ್ಯ ತಂಡಗಳ ಪಾತ್ರ ಮಹತ್ವದ್ದು:- ತಹಸೀಲ್ದಾರ್ ಮಂಜುಳ ನಾಯಕ್

ಸಿದ್ದಾಪುರ ಸಿದ್ದಾಪುರ, ಅ. 26: ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಿ, ಅಮೂಲ್ಯ ಜೀವಗಳನ್ನು ರಕ್ಷಿಸುವಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡಗಳ ಪಾತ್ರ ಮಹತ್ವದ್ದಾಗಿದೆ....

Latest Posts

ಮುಂದುವರಿದ ನಾಮಧಾರಿ ಸಂಘರ್ಷ! ಸದಸ್ಯತ್ವಕ್ಕಾಗಿ ಹೋರಾಟ?!

ಸದಸ್ಯತ್ವ,ನಾಯಕತ್ವಗಳ ಬೇಡಿಕೆ, ಮೇಲಾಟದ ಸಿದ್ದಾಪುರನಾಮಧಾರಿ ಅಭಿವೃದ್ಧಿ ಸಂಘದ ಸಂಘರ್ಷ ಪರಸ್ಪರಪೊಲೀಸ್ ದೂರಿನವರೆಗೆ ಮುಂದುವರಿದಿದೆ. ಇತ್ತೀಚೆಗೆ ನಡೆದ ಸಂಘದ ಮುಂದುವರಿದ ಸಭೆಯಲ್ಲಿ ಕೂಡಾ ಆಹ್ವಾನಿತರಲ್ಲದವರು ಹೊರಗೆ ಗಲಾಟೆ ಆರಂಭಿಸಿದರು. ಒಳಗೆ ಸಭೆ ನಿಯಮಾನುಸಾರ ನಡೆದರೂ ಕೆಲವು ಸದಸ್ಯರು ಪ್ರಶ್ನೆಗಳನ್ನೆತ್ತಿ ಆಡಳಿತ ಸಮಿತಿಯ ಉತ್ತರ ಬಯಸಿದರು. ಪ್ರಶ್ನಿಸಿದ ಎಂ. ಜಿ. ನಾಯ್ಕ, ಎಸ್. ಕೆ. ನಾಯ್ಕ ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *