ರಾಜ್ಯ ಸರ್ಕಾರ ತನ್ನ ವಿಫಲತೆ ಮುಚ್ಚಿಕೊಳ್ಳಲು ಕೋವಿಡ್ ಕಾರಣ ಕೊಡುತ್ತಿದೆ ಎಂದು ಆರೋಪಿಸಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅಭಿವೃದ್ಧಿ ಮಾಡದೆ ನೆಪ ಹೇಳಿದರೆ ಜನಾದೇಶಕ್ಕೆ ಅಗೌರವ ತೋರಿದಂತೆ ಎಂದು ಪ್ರತಿಪಾದಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ಪ್ರವಾಸ ಮಾಡಿದ ಅವರು ಸಿದ್ಧಾಪುರದಲ್ಲಿ ಮಾತನಾಡಿದರು.
ಕಾಂಗ್ರೆಸ್ ಅವಧಿಯಲ್ಲಿ ಉಧ್ಯಮ ಕ್ಷೇತ್ರ ಪ್ರಗತಿಕಂಡಿದ್ದನ್ನು ವಿವರಿಸಿದ ದೇಶಪಾಂಡೆ ತಮ್ಮ ಸರ್ಕಾರದಲ್ಲಿ ಆಯ್.ಟಿ.ಬಿ.ಟಿ. ಪ್ರವಾಸೋದ್ಯಮದ ಮೇಲೆ ಹೂಡಿಕೆ ಮಾಡಿ ಅಭಿವೃದ್ಧಿ ದಾಖಲಿಸಿದ್ದೆವು. ಈಗ ಸರ್ಕಾರ ಅಭಿವೃದ್ಧಿ ಚಟುವಟಿಕೆಗೆ ಗಮನ ಕೊಡದೆ ಕರೋನಾ ಕಾರಣ ಕೊಡುತ್ತಿದೆ ಇದರಿಂದ ರಾಜ್ಯಕ್ಕಾಗುವ ಹಾನಿ ಅಪಾರ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರಿಗೆ ಕಾಂಗ್ರೆಸ್ ಇತಿಹಾಸ,ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ನೇತೃತ್ವ, ಭೂಸುಧಾರಣೆ ಸೇರಿದಂತೆ ಜನಪರ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಜನಸಾಮಾನ್ಯರಿಗೆ ನೆರವಾಗುತ್ತಾ ದೇಶ ಕಟ್ಟಿದ್ದನ್ನು ನೆನಪಿಸಬೇಕು ಎಂದು ಕರೆ ನೀಡಿದ ಅವರು. ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸಂಘಟನೆ ಚುರುಕಾಗಿ ನಡೆಯುತಿದ್ದು ಸದಸ್ಯತ್ವ ಅಭಿಯಾನ ಈ ತಿಂಗಳಲ್ಲಿ ಮುಕ್ತಾಯವಾಗಲಿದೆ ಎಂದರು.
ರಾಮಕೃಷ್ಣ ಹೆಗಡೆಯವರ ಕಾಲದಿಂದಲೂ ಸಿದ್ಧಾಪುರಕ್ಕೆ ಬಸ್ ನಿಲ್ಧಾಣದ ಅವಶ್ಯಕತೆ ಇತ್ತು. ಸಿದ್ಧಾಪುರ ಹೊಸ ಬಸ್ ನಿಲ್ಧಾಣದ ಕಾಮಗಾರಿ ಸೇರಿ ಸಿದ್ಧಾಪುರಕ್ಕೆ ನಾವು ತಂದ ಅಭಿವೃದ್ಧಿ ಕಾಮಗಾರಿಗಳನ್ನು ವಿಧಾನಸಭಾ ಅಧ್ಯಕ್ಷರು ಉದ್ಘಾಟಿಸುತಿದ್ದಾರೆ. ಪ್ರತಿ ಕಾಮಗಾರಿಗಳ ಶಂಕುಸ್ಥಾಪನೆ,ಕಾಮಗಾರಿ ಯೋಜನಾ ವೆಚ್ಚಗಳ ಬಗ್ಗೆ ನಾಮಫಲಕ ಹಾಕಲಾಗುತ್ತದೆ. ಆ ನಾಮಫಲಕಗಳ ಪೋಟೋ ತೆಗೆದು ಯಾವ ಕಾಮಗಾರಿ,ಯಾವ ವರ್ಷದ್ದು,ಯಾವ ಸರ್ಕಾರದ್ದು ಎನ್ನುವ ಮಾಹಿತಿ ನೀಡುವ ಪತ್ರಕರ್ತರೂ ಇಲ್ಲಿಲ್ಲವೆ? – ಆರ್.ವಿ.ದೇಶಪಾಂಡೆ, (ಮಾಜಿ ಸಚಿವ)