

ದೇಶ ಕಟ್ಟುವ ಕೆಲಸದ ಜೊತೆಗೆ ಸಮಾಜಕಟ್ಟುವ ಕೆಲಸವನ್ನು ಮಾಡಲು ಸಲಹೆ ನೀಡಿರುವ ಹೊಸನಗರ ಸಾರಂಗನಜೆಡ್ಡು ಕಾರ್ತಿಕೇಯಪೀಠದ ಯೋಗೇಂದ್ರ ಸ್ವಾಮೀಜಿ ಉತ್ತರ ಕನ್ನಡದ ತರಳಿಯಲ್ಲಿ ಸಿಗಂದೂರು ವಿಚಾರ ಪ್ರಸ್ಥಾಪಿಸಿ ವೈರಲ್ ಆಗುವ ಹೇಳಿಕೆ ನೀಡಿದ್ದಾರೆ.

ಶಿವರಾತ್ರಿ ನಿಮಿತ್ತ ಸಿದ್ಧಾಪುರದ ತರಳಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಸ್ತು,ಶೃದ್ಧೆ,ಪರಿಶ್ರಮದಿಂದ ಸಮಾಜಕಟ್ಟುವ ಜೊತೆಗೇ ದೇಶಕಟ್ಟಬೇಕು. ಸಿಗಂದೂರಿನ ವಿವಾದದ ವಿಚಾರದಲ್ಲಿ ಈಡಿಗ ಸಮಾಜ ಒಂದಾಗುತ್ತದೆ ಎನ್ನುವ ನಿರೀಕ್ಷೆ ಎಲ್ಲರಿಗಿತ್ತು ಆದರೆ ಆಡಳಿತ ಪಕ್ಷದ ಸದಸ್ಯರು, ಜನಪ್ರತಿನಿಧಿಗಳು,ರಾಜಕೀಯ ನಾಯಕರು ಸಿಗಂದೂರು ವಿಚಾರದಲ್ಲಿ ಈಡಿಗರ ಬೆಂಬಲಕ್ಕೆ ಬರದೆ ಹಿಂದೇಟು ಹಾಕಿದರು.


ಚುನಾವಣೆ ಮತಕ್ಕಾಗಿ ಸಮಾಜ,ಸ್ವತ: ಸಮೂದಾಯದ ನೆರವು ಪಡೆಯುವ ರಾಜಕಾರಣಿಗಳು ಸಮಾಜದ ನೋವಿಗೆ ಸ್ಪಂದಿಸದಿದ್ದರೆ ಏನರ್ಥ ಎಂದು ಪ್ರಶ್ನಿಸಿ ರಾಜಕಾರಣಿಗಳಿಗೆ ಸಮಾಜಕಟ್ಟುವ ಜವಾಬ್ಧಾರಿ ಇಲ್ಲವೆ ಎಂದು ತರಾಟೆಗೆ ತೆಗೆದುಕೊಂಡರು.
ಇಂದು ತರಳೀಶ್ರೀ ಪ್ರಶಸ್ತಿ ಸ್ವೀಕರಿಸಿದ ಸಿಗಂದೂರು ಧರ್ಮದರ್ಶಿ ರಾಮಪ್ಪ ಮತ್ತು ಸಿಗಂದೂರು ದೇವಾಲಯದ ವಿಚಾರದಲ್ಲಿ ವ್ಯವಸ್ಥೆ ಈಡಿಗರ ವಿರೋಧಿಯಾಗಿ ವರ್ತಿಸಿತು.ಸರ್ಕಾರದಲ್ಲಿ ಸಮಾಜವನ್ನು ಪ್ರತಿನಿಧಿಸುವವರು,ಈಡಿಗರ ರಾಜಕಾರಣಿಗಳು ತಮ್ಮ ಸಮಾಜದ ದೇವಾಲಯದ ಪರವಾಗಿ ನಿಲ್ಲಲಿಲ್ಲ ರಾಜಕಾರಣಿಗಳಿಗೆ ಸಮಾಜಕಟ್ಟುವ ಜವಾಬ್ಧಾರಿ ಇಲ್ಲವೆ ಎಂದು ಪ್ರಶ್ನಿಸಿದ ಯೋಗೇಂದ್ರ ಸ್ವಾಮೀಜಿಯವರ ಪ್ರವಚನ ಸಂಚಲನಕ್ಕೆ ಕಾರಣವಾಗಿದೆ. ರಾಜ್ಯದ ಪ್ರಮುಖ ಸಮೂದಾಯವಾದ ಈಡಿಗರ ವಲಯದಲ್ಲಿ ಈ ಪ್ರಶ್ನೆಯ ವಿಚಾರ ವೈರಲ್ ಹೇಳಿಕೆಯಾಗಿ ಚರ್ಚೆಯಾಗುತ್ತಿದೆ. ಸರ್ಕಾರ ವ್ಯವಸ್ಥೆ ಒಂದು ಸಮೂದಾಯದ ವಿರುದ್ಧವಾಗಿ ವರ್ತಿಸಿದಾಗ ಅದನ್ನು ಪ್ರತಿಭಟಿಸದ ಸಮೂದಾಯದ ಜನಪ್ರತಿನಿಧಿಗಳು,ರಾಜಕಾರಣಿಗಳ ಬಗ್ಗೆ ಸ್ವಾಮೀಜಿ ಹೇಳಿಕೆಗೆ ಈಡಿಗ ಸಮೂದಾಯ ಸಹಮತ ವ್ಯಕ್ತಪಡಿಸಿದೆ.
ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣ: ಶಾಸಕಿ ರೂಪಾಲಿ ನಾಯ್ಕ ವಿವಾದಾತ್ಮಕ ಹೇಳಿಕೆ ವೈರಲ್
ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಕಿಲಾರದಲ್ಲಿ ಶಿವರಾತ್ರಿ ಆಚರಣೆ ವಿಜೃಂಣೆಯಿಂದ ಜರುಗಿತು. ಊರಿನ ಆನೆಗುಂಡಿಯ ನಿಸರ್ಗದ ಮಡಿಲಿನಲ್ಲಿರುವ ಅಘನಾಶಿನಿ ಸಂಗಮದಲ್ಲಿರುವ ಶ್ರೀ ಕೂಡಲ ಸಂಗಮೇಶ್ವರನಿಗೆ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಬಂದಂತ ಭಕ್ತರು ಹೊಳೆಯಲ್ಲಿ ಮಿಂದು ಸಂಗಮೇಶ್ವರನಿಗೆ ನೀರಿನ ಅಭಿಷೇಕ ಮಾಡಿ ಪೂಜೆ ನೆರವೇರಿಸಿದರು. ನಂತರ ಎಲ್ಲರಿಗೂ ಅನ್ನ ಸಂತರ್ಪಣೆ ಮಾಡಲಾಯಿತು.


ನಮ್ಮ ಹುಡುಗ ದಾರುಣವಾಗಿ ಕೊಲೆಗೀಡಾದ. ನಾವು ಅಧಿವೇಶನದಲ್ಲಿ ಕುಳಿತು ಅತ್ತಿದ್ದೇವೆ. ಆದ್ರೆ ನಾವೂ ಸಹ ಹಿಂದೂಗಳು ಎಂದು ಹೇಳಿಕೊಳ್ಳುವ ಕೆಲವರು ವಿಧಾನಸಭೆಯೊಳಗೆ ಇದ್ದು ಸಚಿವ ಈಶ್ವರಪ್ಪರನ್ನು ಅಮಾನತು ಮಾಡಿ ಎಂದು ಆಗ್ರಹಿಸುತ್ತಿದ್ದರು ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಶಾಸಕಿ ರೂಪಾಲಿ ನಾಯ್ಕ ಹರಿಹಾಯ್ದರು.
ಕಾರವಾರ: ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಹಿನ್ನೆಲೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಆಡಿದ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.https://c00fd143f806f5036859317be79c096f.safeframe.googlesyndication.com/safeframe/1-0-38/html/container.html
ಅಂಕೋಲಾದಲ್ಲಿ ನಡೆದ ಶಿವಾಜಿ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ನಮ್ಮ ಹುಡುಗ ದಾರುಣವಾಗಿ ಸಾವನ್ನಪ್ಪಿದ್ದಾನೆ. ನಾವು ಅಧಿವೇಶನದಲ್ಲಿ ಕುಳಿತು ಅತ್ತಿದ್ದೇವೆ. ಆದ್ರೆ ನಾವೂ ಸಹ ಹಿಂದೂಗಳು ಎಂದು ಹೇಳಿಕೊಳ್ಳುವವರು ವಿಧಾನಸಭೆಯ ಒಳಗೆ ಇದ್ದು, ಸಚಿವ ಈಶ್ವರಪ್ಪರನ್ನು ಅಮಾನತು ಮಾಡಿ ಎಂದು ಆಗ್ರಹಿಸುತ್ತಿದ್ದರು. ಇದು ನಾಚಿಕೆಗೇಡಿನ ಸಂಗತಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. (etbk)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
