Samajamukhi.net- ಕಲೆ,ಸಂಸ್ಕೃತಿ,ಕ್ರೀಡೆ, ಸ್ಥಳಿಯ ವಿಶೇಶ

ಸಿದ್ದಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ದ ನೇತೃತ್ವದಲ್ಲಿ ಸರಕಾರಿ ನೌಕರರ ವಿವಿಧ ಇಲಾಖೆಗಳೊಂದಿಗೆ ಕ್ರಿಕೆಟ್ ಪಂದ್ಯಾವಳಿ ಮಾರ್ಚ್ 6ರಂದು ಸಿದ್ದಾಪುರ ನೆಹರು ಮೈದಾನದಲ್ಲಿ ನಡೆಯಲಿದೆ.
ಬೆಳಿಗ್ಗೆ 9ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಸಿದ್ದಾಪುರ ಜೆಎಂಎಫ್ಸಿ ನ್ಯಾಯಾಧೀಶರಾದ ಸಿದ್ದರಾಮ ಎಸ್ ಉದ್ಘಾಟಿಸಲಿದ್ದಾರೆ. ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ತಸೀಲ್ದಾರ್ ಸಂತೋಷ್ ಭಂಡಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಸಿಪಿಐ ಕುಮಾರ್ ಕೆ , ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕುಮಾರ್ ನಾಯ್ಕ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಾಜೇಶ್ ನಾಯ್ಕ ಉಪಸ್ಥಿತರಿರುವರು.

ಸಿದ್ದಾಪುರ
ಕಳೆದ ಎರಡು ದಶಕಗಳಿಂದ ರಂಗಭೂಮಿಯಲ್ಲಿ ಸಕ್ರೀಯವಾಗಿದ್ದು ಈವರೆಗೆ ಹಲವು ನಾಟಕಗಳನ್ನು ಪ್ರಸ್ತುತಪಡಿಸಿರುವ ಒಡ್ಡೋಲಗ ರಂಗ ತಂಡವು ರಂಗಪರ್ಯಟನಕ್ಕೆ ಸಿದ್ಧಪಡಿಸಿದ ಪ್ರಸಿದ್ಧ ಕಥೆಗಾರ ಜಯಂತ ಕಾಯ್ಕಿಣಿಯವರ ಕಥೆಯನ್ನಾಧರಿಸಿದ ಕೋಮಲ ಗಾಂಧಾರ ನಾಟಕವು ಮೈಸೂರಿನ ರಂಗಾಯಣ ಆಯೋಜಿಸಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿಮಾ.೧೨ರಂದು ಮೈಸೂರಿನ ಸಂಪತ್ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಅವಕಾಶ ನೀಡಿದ್ದಕ್ಕಾಗಿ ರಂಗಾಯಣ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಒಡ್ಡೋಲಗ ರಂಗತಂಡದ ಮುಖ್ಯಸ್ಥ, ರಂಗಕರ್ಮಿ ಗಣಪತಿ ಬಿ.ಹಿತ್ಲಕೈ ತಿಳಿಸಿದ್ದಾರೆ.
ಅವರು ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿದ್ದು ಜಯಂತ ಕಾಯ್ಕಿಣಿಯವರ ಕಥೆಯನ್ನಾಧಾರಿಸಿದ ಕೋಮಲ ಗಾಂಧಾರ ನಾಟಕ ಈಗಾಗಲೇ ಹಲವೆಡೆಗಳಲ್ಲಿ ಪ್ರದರ್ಶನಗೊಂಡಿದೆ. ಕೊರೊನಾ ಸಂಕಷ್ಠಕಾಲದಲ್ಲಿ ಸ್ಥಗಿತಗೊಂಡ ರಂಗ ಚಟುವಟಿಕೆ ನಂತರದಲ್ಲಿ ಆರಂಭಗೊಂಡಿದ್ದು ನಂತರದಲ್ಲಿ ಶಿರಸಿ ಮುಂತಾದೆಡೆಗಳಲ್ಲಿ ಅಲ್ಲದೇ ಹಲವು ಕಾಲೇಜುಗಳಲ್ಲಿ ಈ ನಾಟಕ ಪ್ರದರ್ಶನಗೊಂಡಿದೆ. ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಗಣಪತಿ ಬಿ.ಹಿತ್ಲಕೈ ಅವರದ್ದು. ಸಂಗೀತ ಸಂಯೋಜನೆ ಪ್ರಸನ್ನ ವೈದ್ಯ ಹೆಗ್ಗಾರು, ಪ್ರೇರಣೆ ವಿಜಯ ಹೆಗಡೆ ದೊಡ್ಮನೆ, ಸಾಹಿತ್ಯ ಸಲಹೆ ಗಂಗಾಧರ ಕೊಳಗಿ ಅವರದ್ದಾಗಿದೆ. ಪ್ರಸ್ತುತ ಜಗತ್ತಿನ ಅನಾವರಣದ ಜೊತೆಗೆ ಕಾರ್ಪೋರೇಟ್ ಜಗತ್ತಿನ ಮೂಲ ಗುಣವಾದ ಸ್ವಾರ್ಥ, ಆಸೆ,ಆಮಿಷಗಳನ್ನು ತೆರೆದಿಡುವ ಈ ಕಥೆ ನಿಜವಾದ ಜಗತ್ತು ಯಾವುದು? ಎನ್ನುವದರ ಹುಡುಕಾಟ ನಡೆಸುತ್ತದೆ.
ಈ ರಾಷ್ಟ್ರೀಯ ರಂಗೋತ್ಸವದಲ್ಲಿ ಕೋಮಲ ಗಾಂಧಾರ ನಾಟಕ ಪ್ರದರ್ಶನ ನೀಡಲು ಅವಕಾಶ ದೊರಕಿದ ಸಂತೋಷದ ಜೊತೆಗೆ ಒಡ್ಡೋಲಗದ ಎಲ್ಲ ರಂಗ ಚಟುವಟಿಕೆಗಳಿಗೆ ಸಹಕಾರ,ಬೆಂಬಲ ನೀಡುತ್ತ, ನಾಟಕಗಳನ್ನು ನೋಡಿ, ಅಭಿಪ್ರಾಯ ವ್ಯಕ್ತಪಡಿಸಿ ತಂಡದ ಬೆಳವಣಿಗೆಗೆ ಕಾರಣಿಕರ್ತರಾದ ಪ್ರೇಕ್ಷಕ ಸಮುದಾಯವನ್ನು, ಮಾಧ್ಯಮದವರನ್ನು ರಂಗತಂಡದ ಪರವಾಗಿ ಅಭಿನಂದಿಸುತ್ತೇನೆ ಎಂದು ಗಣಪತಿ ಬಿ.ಹಿತ್ಲಕೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿದ್ದಾಪುರದಲ್ಲಿ ಆರಂಭಗೊಂಡ ನಮ್ಮ ಕಾರ್ಗೋ’ ಸೇವಾ ಕೇಂದ್ರ.
ಸಿದ್ದಾಪುರ: ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನಿಗಮನದ ಪಾರ್ಸಲ್ ಸೇವೆಗಾಗಿ ನಿಗಮ ಆರಮಭಿಸಿದ ‘ನಮ್ಮ ಕಾರ್ಗೋ’ ಘಟಕದ ಉದ್ಘಾಟನೆ ಇತ್ತೀಚೆಗೆ ಇಲ್ಲಿ ನಡೆಯಿತು.
ನಮ್ಮ ಕಾರ್ಗೋ ಪಾರ್ಸಲ್ ಸರ್ವಿಸ್ ಘಟಕವನ್ನು ಉದ್ಘಾಟಿಸಿದ ಬಸ್ ನಿಲ್ದಾಣ ನಿಯಂತ್ರಣಾಧಿಕಾರಿ ಆರ್.ಟಿ.ನಾಯ್ಕ ತ್ವರಿತವಾಗಿ ಮತ್ತು ಅತ್ಯಂತ ಕಾಳಜಿಯಿಂದ ಗ್ರಾಹರಿಗೆ ಪಾರ್ಸಲ್ ಸೇವೆ ಒದಗಿಸಲು ನಿಗಮ ‘ನಮ್ಮ ಕಾರ್ಗೋ’ ಸೇವೆಯನ್ನು ಆರಂಭಿಸಿರುವುದರಿಂದ ಬದಲಾವಣೆಗೆ ಹೊಸತನದ ಸ್ಪರ್ಷ ನೀಡಿದಂತಾಗಿದೆ. ಈ ಜನಸ್ನೇಹಿ ಯೋಜನೆ ಗ್ರಾಹಕರಲ್ಲಿ ಭರವಸೆ ತುಂಬಲಿ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ‘ನಮ್ಮ ಕಾರ್ಗೋ’ ಸಿದ್ದಾಪುರ ಘಟಕದ ಉಸ್ತುವಾರಿಗಾಗಿ ನೇಮಕವಾದ ಮೋಹನ ಎಸ್.ನಾಯ್ಕ, ಸ್ಥಳೀಯರಾದ ರವಿ ನಾಯ್ಕ, ಸುರೇಶ ನಾಯ್ಕ, ಸಿಬ್ಬಂದಿಗಳಾದ ರಮೇಶ ನಾಯ್ಕ, ಮಂಜುನಾಥ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ತಾಲೂಕಿನ ಗ್ರಾಹಕರು ‘ನಮ್ಮ ಕಾರ್ಗೋ’ ಸೇವೆಗಾಗಿ ಈ ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು : ೬೩೬೪೯೨೩೯೮೫

ಸಂಪಖಂಡದಲ್ಲಿ ಸಡಗರ ಸಂಭ್ರಮದೊಂದಿಗೆ
ವಿಜೃಂಭಣೆಯಿಂದ ಜರುಗಿದ ವಾರ್ಷಿಕೋತ್ಸವಕಾರ್ಯಕ್ರಮ

ತಾಲೂಕಿನ ಸಂಪಖಂಡದಲ್ಲಿನ ಶ್ರೀ ನಾಗಚೌಡೇಶ್ವರಿ ಹಾಗೂ ದೇವಮ್ಮ ದೇವಾಲಯದಲ್ಲಿ ಪ್ರತೀ ವರ್ಷ ದಂತೆ ಈ ವರ್ಷವೂ ಸಹ ವಾರ್ಷಿಕೋತ್ಸವ ಕಾರ್ಯಕ್ರಮ ಶುಕ್ರವಾರ
ಸಡಗರ ಸಂಭ್ರಮದೊಂದಿಗೆ
ವಿಜೃಂಭಣೆಯಿಂದ ಜರುಗಿತು. ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆದವು ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು ವಾರ್ಷಿಕೋತ್ಸವದ ಕಾರ್ಯಕ್ರಮಗಳು ಯಶಶ್ವಿಯಾಗಿ ನಡೆದವು.

ಕಲೆ ಬದುಕಿನ ಜೀವಾಳ- ಯಕ್ಷಗಾನ ಕಲಾವಿದ ಗೋಪಾಲಾಚಾರ್ ತೀರ್ಥಹಳ್ಳಿ
ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲೂ ಕಲೆ ಒಂದಿಲ್ಲೊಂದು ರೀತಿಯಲ್ಲಿ ಹಾಸುಹೊಕ್ಕಾಗಿ ಇರುತ್ತದೆ. ಇದು ನಮ್ಮ ಬದುಕಿಗೆ ಬೆಳಕನ್ನೂ ಸೌಂದರ್ಯವನ್ನು ಹಾಗೂ ಸಂಸ್ಕಾರವನ್ನು ಕಲ್ಪಿಸುತ್ತದೆ. ಕಲೆಯ ಜೊತೆಗಿನ ಜೀವನಯಾನ ಸಂತೃಪ್ತಿಯನ್ನು ನೀಡುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲಾಚಾರ್ ಹೇಳಿದರು.

ತಾಲೂಕಿನ ಹೊನ್ನೆಘಟಗಿ ನಾಗಚೌಡೇಶ್ವರಿ ದೇವಾಲಯದ ವಾರ್ಷಿಕೋತ್ಸವದ ನಿಮಿತ್ತ ಹಮ್ಮಿಕೊಂಡ ಯಕ್ಷಗಾನ ಪ್ರದರ್ಶನದ ಮಧ್ಯೆ ದೇವಾಲಯ ಸಮಿತಿಯವರು ನೀಡಿದ ಸಂಮಾನಕ್ಕೆ ಉತ್ತರಿಸುತ್ತ ದೇಶವಿದೇಶಗಳಲ್ಲಿ ಸಂಚರಿಸಿ ಪ್ರದರ್ಶನಗಳನ್ನು ನೀಡಿ ಬದುಕಿಗೊಂದು ಆಸರೆಯಾಗಿ ನಿಂತಿರುವುದು ನಮ್ಮ ಯಕ್ಷಗಾನ. ನನ್ನ ಬದುಕಿನ ಉಸಿರೇ ಆಗಿದೆ. ನಿಮ್ಮೆಲ್ಲರ ಪ್ರೀತಿಯನ್ನು ಜನ್ಮ ಜನ್ಮಾಂತರಕ್ಕಾಗುವಷ್ಟು ಕಂಡುಂಡವನು. ನಮ್ಮೆಲ್ಲರ ಅಭಿಮಾನ ನನ್ನನ್ನು ಇಷ್ಟು ಎತ್ತರಕ್ಕೆ ಏರಿಸಿದೆ. ಅದಕ್ಕಾಗಿ ನಾನು ಸದಾ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದರು. ಕಲಾಭಾಸ್ಕರ (ರಿ.) ಇಟಗಿಯವರು ಹೆಮ್ಮನಬೈಲು ಲಕ್ಷ್ಮೀನಾರಾಯಣ ಯಕ್ಷಗಾನ ಮಂಡಳಿಯ ಸಹಯೋಗದೊಂದಿಗೆ ಮಾಲೇಕೊಡಲು ಶಂಭು ಭಟ್ಟ ವಿರಚಿತ “ಚಂದ್ರಹಾಸ ಚರಿತ್ರೆ” ಹಾಗೂ ಗುಂಡೂ ಸೀತಾರಮಯ್ಯ ವಿರಚಿಸಿದ “ಕಂಸ ದಿಗ್ವಿಜಯ- ಕಂಸವಧೆ” ಎಂಬ ಪೌರಾಣಿಕ ಆಖ್ಯಾನಗಳ ಯಕ್ಷಗಾನ ಪ್ರದರ್ಶನ ನಡೆಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಹೆರಂಜಾಲು ಗೋಪಾಲ ಗಾಣಿಗ, ಸೃಜನ ಹೆಗಡೆ ಗುಬ್ಬಿಗ, ಭಾರ್ಗವ ಮುಂಡಿಗೆಸರ ಭಾಗವಹಿಸಿದರು. ಮದ್ದಳೆವಾದಕರಾಗಿ ಶಂಕರ ಭಾಗವತ ಯಲ್ಲಾಪುರ, ಮಂಜುನಾಥ ರಾವ್ ಗುಡ್ಡೆದಿಂಬ ಸಹಕರಿಸಿದರು. ಚಂಡೆವಾದನವನ್ನು ಪ್ರಸನ್ನ ಭಟ್ಟ ಹೆಗ್ಗಾರ್ ನಡೆಸಿದರು. ಪಾತ್ರವರ್ಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲಾಚಾರ್ ಚಂದ್ರಹಾಸನಾಗಿ ಸುಂದರವಾಗಿ ಅಭಿನಯಿಸಿದರು. ದುಷ್ಟಬುದ್ದಿಯಾಗಿ ಬೆಳೆಯೂರು ಸಂಜಯನವರು ವಿಜೃಂಬಿಸಿದರು. ಹಾಸ್ಯ ಪಾತ್ರಗಳಲ್ಲಿ ಚಪ್ಪರಮನೆ ಶ್ರೀಧರ ಹೆಗಡೆ ನಗೆಗಡಲಲ್ಲಿ ತೇಲಿಸಿದರು. ವಿಷಯೆಯಾಗಿ ಇಟಗಿ ಮಹಾಬಲೇಶ್ವರ ಲಾಲಿತ್ಯದಿಂದ ನಟಿಸಿದರು. ಮದನನಾಗಿ ಅಶೋಕಭಟ್ಟರು ಅತ್ಯದ್ಭುತವಾಗಿ ರಂಗವಾಳಿದರು. ಶ್ರೀದೇವಿಯಾಗಿ ಹಾಗೂ ಮೇದಾವಿನಿಯಾಗಿ ನಾಗಪತಿ ಹೆಗಡೆ ಕೊಪ್ಪ, ಕುಳಿಂದನಾಗಿ ಪ್ರಣವ ಭಟ್ಟ , ಸುಬುದ್ದಿಯಾಗಿ ಕಟುಕನಾಗಿ ಗಣಪತಿ ಹೆಗಡೆ ಹೊನ್ನೆಕೈ, ಬಾಲ ಚಂದ್ರಹಾಸನಾಗಿ ವಿಧಾತ ಭಟ್ಟ ಮುಂತಾದವರು ಭಾಗವಹಿಸಿದರು. ಮೆಣಸಿ ಜಯಕುಮಾರ (ಕಂಸ) , ಬೊಗರಿಮಕ್ಕಿ ವೆಂಕಟೇಶ (ಮಾಗಧ), ಕನ್ನಪ್ಪ ಮಾಸ್ತರ (ಅಸ್ತಿ) ಶಿವು ಶಿರಳಗಿ (ಪ್ರಾಸ್ತಿ) ನಂದನ ಅರಷಿಣಗೋಡು (ಬಲರಾಮ) ಪ್ರಣವ ಶಿರಳಗಿ (ಶ್ರೀ ಕೃಷ್ಣ), ಮಾರುತಿ ಗೋಳಿಕೈ (ಅಕ್ರೂರ) ಮುಂತಾದವರ ಕಲಾ ಪ್ರೌಢಿಮೆಯು ಅನಾವರಣವಾಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *