ಶಿರಸಿ ಮಾರಿ ಜಾತ್ರೆಯಲ್ಲಿ ಹಾರಿದ ಹಳದಿ ಬಾವುಟ, ಅಪ್ಪು ಸ್ಮರಣೆ!

ಗುರುವಾರದಿಂದಪ್ರಪಂಚದಾದ್ಯಂತ ಜೇಮ್ಸ್‌ ಚಿತ್ರದ ಜಾತ್ರೆ ನಡೆಯಲಿದೆ.ನಟ ಪುನೀತ್‌ ರಾಜ್‌ ಕುಮಾರರ ಕೊನೆಯ ಚಿತ್ರ ಎನ್ನುವ ಕಾರಣಕ್ಕೆ ಈ ಚಿತ್ರದ ಬಿಡುಗಡೆ ದಿನ ಕನ್ನಡ ನಾಡಿಗೆ ಜಾತ್ರೆಯಾಗಿ ಪರಿಣಮಿಸಿದೆ. ಈ ಜಾತ್ರೆಗಿಂತ ಮೊದಲು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಜಾತ್ರೆಯಲ್ಲಿ ಪುನೀತ್‌ ರಾಜ್‌ ಕುಮಾರ ಸ್ತಬ್ಧಚಿತ್ರಗಳ ಜೊತೆಗೆ ಯುವಕರ ಮರವಣಿಗೆ ಸುದ್ದಿ ಮಾಡಿದೆ.
ಮಂಗಳವಾರ ರಾತ್ರಿಯಿಂದ ಪ್ರಾರಂಭವಾದ ದಕ್ಷಿಣ ಭಾರತದ ದೊಡ್ಡ ಜಾತ್ರೆ ಶಿರಸಿ ಮಾರಿ ಜಾತ್ರೆಯ ಮೆರವಣಿಗೆಯೇ ವಿಶೇಶ. ಈ ರಥೋತ್ಸವದ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ವೈಶಿಷ್ಟ್ಯಗಳ ಮೆರವಣಿಗೆಯೇ ನಡೆಯುತ್ತದೆ. ಈ ವರ್ಷದ ಬುಧವಾರದ ಮುಂಜಾನೆಯ ಮಾರಿಕಾಂಬಾ ರಥಾಗಮನ ಸಂದರ್ಭದಲ್ಲಿ ಹಿಂದಿನಂತೆ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಆಕರ್ಷಣೆಗಳಿದ್ದವು. ಇವುಗಳೊಂದಿಗೆ ಈ ಬಾರಿ ಇಲ್ಲಿಯ ಯುವಕರು ರಥ ಮೆರವಣಿಗೆಯಲ್ಲಿ ಪುನೀತ್‌ ರಾಜ್‌ ಕುಮಾರ ವೈಶಿಷ್ಟ್ಯ ನೆನಪಿಸುವ ಮೆರವಣಿಗೆಯೊಂದಿಗೆ ಡೊಳ್ಳಿನ ಕುಣಿತ ಮಾಡಿ ಸಾರ್ವಜನಿಕರ ಗಮನ ಸೆಳೆದರು.

ಪುನೀತ್‌ ರಾಜ್‌ ಕುಮಾರ್‌ ಬ್ಯಾನರ್ಗಳು, ಪೋಸ್ಟರ್‌ ಗಳೊಂದಿಗೆ ಡೊಳ್ಳು ಹೊಡೆದು ಸಿಳ್ಳೆ ಹಾಕಿದರು. ಜಾತ್ರೆಯಲ್ಲಿ ನಟನೊಬ್ಬನ ಆರಾಧನೆ, ಪುನೀತ್‌ ಸ್ಮರಣೆಗಾಗಿ ಬಾವುಟ,ಸ್ತಬ್ಧಚಿತ್ರ ಪ್ರದರ್ಶನ ಮಾಡಿ ಅಪ್ಪು ನೆನಪು ಚಿರಸ್ಥಾಯಿಯಾಗುವಂತೆ ಮಾಡಿದ್ದು ವಿಶೇ ಶವೆನಿಸಿತು.
ಇದರೊಂದಿಗೆ ಈ ವರ್ಷ ಬ್ರಹ್ಮಶ್ರೀ ನಾರಾಯಣ ಗುರುಗಳ ನೆನಪಿಗೆ ಹಳದಿ ಬಾವುಟ ಹಾರಿಸಿದ್ದೂ ವಿಶೇಶವೆನಿಸಿತು.

ರಾಜ್ಯದಾದ್ಯಂತ ನಾರಾಯಣ ಗುರುಗಳ ನೆನಪು, ಸ್ಮರಣೆ ಚಿಂತನೆಗಳ ಪ್ರಸಾರದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳು ಹಳದಿ ಶಾಲಿನೊಂದಿಗೆ ಡೊಳ್ಳುಹೊಡೆದು ಹಳದಿ ಬಾವುಟ ಹಾರಿಸಿದ್ದು ಜನಾಕರ್ಷಣೆ ಎನಿಸಿತು. ಸಂಪ್ರದಾಯ, ಚಾರಿತ್ರಿಕ ಆಚರಣೆಗಳ ವೈಶಿಷ್ಟ್ಯದ ಜೊತೆಗೆ ಮಾರಿಜಾತ್ರೆಯ ತೇರಿನಲ್ಲಿ ಕಾಣಿಸಿಕೊಂಡ ಅಪ್ಪು ಅಭಿಮಾನಿಗಳು, ನಾರಾಯಣಗುರು ಅನುಯಾಯಿಗಳು ಈ ವರ್ಷದ ಜಾತ್ರಾ ಮೆರವಣಿಗೆ ಸೊಗಸು ಹೆಚ್ಚಿಸಿದರು. ಶಿರಸಿ ಪೇಟೆಯಿಡಿ ತುಂಬಿದ್ದ ಜನರ ಮಧ್ಯೆ ಮಾರಿಕಾಂಬಾ ರಥದ ಜೊತೆಗೆ ಡೊಳ್ಳಿನೊಂದಿಗೆ ಹೆಜ್ಜೆಹಾಕಿದ ಪುನೀತ್‌ ಅಭಿಮಾನಿಗಳು, ನಾರಾಯಣಗುರುಗಳ ಬಿ.ಎಸ್.  ಎನ್.ಡಿ.ಪಿ.‌ಹಳದಿ ವಸ್ತ್ರ ಜನಾಕರ್ಷಣೆಯ ಕೇಂದ್ರವೆನಿಸಿದವು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *