

ಜೇಮ್ಸ್ ಚಿತ್ರ ಬಿಡುಗಡೆ: ಫಸ್ಟ್ ಡೇ ಫಸ್ಟ್ ಶೋ ನೋಡಿ ತಮ್ಮ ಅಪ್ಪು ಬಗ್ಗೆ ರಾಘಣ್ಣ ಹೇಳಿದ್ದೇನು?
ನನಗೆ ನನ್ನ ತಂದೆ ಡಾ ರಾಜ್ ಕುಮಾರ್ ಅವರು ಅಣ್ಣನ ಬಗ್ಗೆ ತಮ್ಮ, ತಮ್ಮನ ಬಗ್ಗೆ ಅಣ್ಣ, ಅಪ್ಪನ ಬಗ್ಗೆ ಮಕ್ಕಳು, ಮಕ್ಕಳ ಬಗ್ಗೆ ಅಪ್ಪ ಹೊಗಳಬಾರದು, ಹೇಳಿಕೊಳ್ಳಬಾರದು ಎಂದು ಹೇಳುತ್ತಿದ್ದರು, ಹಾಗಾಗಿ ಇವತ್ತು ನಾನು ಜೇಮ್ಸ್ ಚಿತ್ರ ನೋಡಿ ಅಪ್ಪುವನ್ನು ಹೊಗಳುವುದಿಲ್ಲ, ನನ್ನ ತಮ್ಮ ಏನೇ ಮಾಡಿದರೂ ನನಗೆ ಮೆಚ್ಚುಗೆಯಾಗುತ್ತದೆ, ಅವನನ್ನು ನೋಡಿ, ಅವನ ಚಿತ್ರ ನೋಡಿ ಪ್ರೇಕ್ಷಕರ

ಬೆಂಗಳೂರು: ನನಗೆ ನನ್ನ ತಂದೆ ಡಾ ರಾಜ್ ಕುಮಾರ್ ಅವರು ಅಣ್ಣನ ಬಗ್ಗೆ ತಮ್ಮ, ತಮ್ಮನ ಬಗ್ಗೆ ಅಣ್ಣ, ಅಪ್ಪನ ಬಗ್ಗೆ ಮಕ್ಕಳು, ಮಕ್ಕಳ ಬಗ್ಗೆ ಅಪ್ಪ ಹೊಗಳಬಾರದು, ಹೇಳಿಕೊಳ್ಳಬಾರದು ಎಂದು ಹೇಳುತ್ತಿದ್ದರು, ಹಾಗಾಗಿ ಇವತ್ತು ನಾನು ಜೇಮ್ಸ್ ಚಿತ್ರ ನೋಡಿ ಅಪ್ಪುವನ್ನು ಹೊಗಳುವುದಿಲ್ಲ, ನನ್ನ ತಮ್ಮ ಏನೇ ಮಾಡಿದರೂ ನನಗೆ ಮೆಚ್ಚುಗೆಯಾಗುತ್ತದೆ, ಅವನನ್ನು ನೋಡಿ, ಅವನ ಚಿತ್ರ ನೋಡಿ ಪ್ರೇಕ್ಷಕರು, ಅಭಿಮಾನಿಗಳು ಹೇಳಬೇಕು ಇದು ಜೇಮ್ಸ್ ಚಿತ್ರ ಬಿಡುಗಡೆಯಾದ ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮಜಯಂತಿಯಂದು ಫಸ್ಟ್ ಡೇ ಫಸ್ಟ್ ಶೋ ನೋಡಿದ ನಂತರ ರಾಘವೇಂದ್ರ ರಾಜ್ ಕುಮಾರ್ ಹೇಳಿದ ಮಾತು.
ಇಂದು ಜನರ ಪ್ರತಿಕ್ರಿಯೆ ಮುಖ್ಯವಾಗುತ್ತದೆ, ಥಿಯೇಟರ್ ನ ಒಳಗೆ ಬರುತ್ತಿದ್ದಂತೆ ನನ್ನ ಹೃದಯ ನನ್ನ ತಮ್ಮ, ನನ್ನ ತಮ್ಮ ಎಂದು ಹೊಡೆದುಕೊಳ್ಳುತ್ತಿರುತ್ತದೆ, ಭಾವನೆಯನ್ನು ತಡೆದುಕೊಳ್ಳಲು ಆಗುವುದಿಲ್ಲ, ಜನರನ್ನು ಕೇಳಿ, ನನಗೆ ಇವತ್ತು ಇದು ಸಿನಿಮಾ ಅಲ್ಲ, ಭಾವನೆ ಎಂದರು.
ಪ್ರತಿಯೊಬ್ಬರಿಗೂ ಜೀವನದಲ್ಲಿ ಆರಂಭ-ಕೊನೆ ಎಂಬುದು ಇರುತ್ತದೆ. ನಮಗೆ ಅಪ್ಪುವನ್ನು ಕಳೆದುಕೊಂಡ ನೋವು ಇರುತ್ತದೆ, ಹಲವು ಮನೆಗಳಲ್ಲಿ 20 ವರ್ಷದಲ್ಲಿ, 25 ವರ್ಷದಲ್ಲಿ, 30 ವರ್ಷದಲ್ಲಿ ಹೋಗಿಬಿಡುತ್ತಾರೆ, ಅಂಥವರ ಕಷ್ಟ, ನೋವು ನೋಡಿ, ನಮಗೆ ನಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡಾಗ ನೋವು ಗೊತ್ತಾಗುವುದು, ಎಲ್ಲರಿಗೂ ನೋವಾಗಿದೆ, ನಮಗೂ ಕಷ್ಟವಾಗುತ್ತಿದೆ, ನೋವನ್ನು ನುಂಗಿಕೊಂಡು ಜೀವನ ನಡೆಸಿಕೊಂಡು ಹೋಗಬೇಕಷ್ಟೆ, ನನ್ನ ತಮ್ಮನ ಸಿನಿಮಾ, ಮಾಡಿರುವ ಕೆಲಸಗಳು ಜೀವಂತವಾಗಿರುತ್ತದೆ, ಮುಂದಿನ ಪೀಳಿಗೆ ಬಂದು ನೋಡಿ ಹೊಗಳುತ್ತದೆ ಎಂದರು.
ಅಪ್ಪು ಜೀವನದ ಕೊನೆಯ ವರ್ಷಗಳಲ್ಲಿ ಆಯ್ಕೆಮಾಡಿಕೊಂಡ ರಾಜಕುಮಾರ, ಯುವರತ್ನ, ಇನ್ನು ಬಿಡುಗಡೆಯಾಗಬೇಕಿರುವ ಗಂಧದ ಗುಡಿಯಂತಹ ಚಿತ್ರಗಳು ಅದ್ಭುತವಾಗಿತ್ತು ಎಂದು ರಾಘಣ್ಣ ಹೊಗಳಿದರು. (kpc)
