

ವಿನಾಯಕ ಕೋಡ್ಸರ ನಿರ್ದೇಶನದ ಬಹುನಿರೀಕ್ಷಿತ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಉತ್ತರಕನ್ನಡ ಗ್ರಾಮ್ಯ ಪರಿಸರವನ್ನು ಪರಿಚಯಿಸಿರುವ ಸಿನಿಮಾ ಅದೇ ಕಾರಣಕ್ಕೆ ಮೆಚ್ಚುಗೆ ಗಳಿಸುತ್ತಿದೆ.

ದಿಗಂತ್ – ಐಂದ್ರತಾ ರೇ ನಾಯಕ- ನಾಯಕಿಯಾಗಿ ನಟಿಸಿರುವ, ವಿನಾಯಕ ಕೋಡ್ಸರ ನಿರ್ದೇಶನದ ಬಹುನಿರೀಕ್ಷಿತ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಉತ್ತರಕನ್ನಡ ಗ್ರಾಮ್ಯ ಪರಿಸರವನ್ನು ಪರಿಚಯಿಸಿರುವ ಸಿನಿಮಾ ಅದೇ ಕಾರಣಕ್ಕೆ ಮೆಚ್ಚುಗೆ ಗಳಿಸುತ್ತಿದೆ.


https://imasdk.googleapis.com/js/core/bridge3.504.0_en.html#goog_1032316139VideoCopy video urlPlay / PauseMute / UnmuteReport a problemLanguageMox Playeradvertisement
ಉತ್ತರಕನ್ನಡ ಪರಿಸರದಲ್ಲಿ ನಡೆಯುವ ಕಥೆಯನ್ನು ಸಿನಿಮಾ ಹೊಂದಿದ್ದು. ಉತ್ತರಕನ್ನಡ ಪ್ರಾಂತ್ಯದ ಕುವರನ ಪಾತ್ರಾದಲ್ಲಿ ದಿಗಂತ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ.
ಚಿತ್ರವನ್ನು ಸಿಲ್ಕ್ ಮಂಜು ಅವರು ನಿರ್ಮಿಸಿದ್ದಾರೆ. ರವೀಂದ್ರ ಜೋಶಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಜ್ವಲ್ ಪೈ ಸಂಗೀತ ನಿರ್ದೇಶನ ಹಾಗೂ ನಂದಕಿಶೋರ್ ಛಾಯಾಗ್ರಹಣವಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ದಿಗಂತ್, ಐಂದ್ರಿತ ರೆ, ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ನಟಿಸಿದ್ದಾರೆ.
