

ಸಿದ್ದಾಪುರ: ಭಾರಿ ಗಾಳಿಯಿಂದಾಗಿ ಮನೆ ಮೇಲೆ ತೆಂಗಿನ ಮರ ಬಿದ್ದು ನಾಲ್ವರು ಗಾಯಗೊಂಡ ಘಟನೆ ತಾಲೂಕಿನ ಕಡಕೇರಿಯಲ್ಲಿ ನಡೆದಿದೆ.
ಮನೆಯ ಪಕ್ಕದಲ್ಲಿ ಅಡಿಕೆ ಸಸಿ ಬೆಳೆಸಲು ಕವರ್ ಗೆ ಮಣ್ಣು ತುಂಬುತ್ತಿರುವ ಸಮಯದಲ್ಲಿ ಜೋರಾಗಿ ಗಾಳಿ ಬೀಸಿದ್ದರಿಂದ ತೆಂಗಿನಮರವು ಬಿದ್ದಿದೆ.
ಮರ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿ, ಹೊನ್ನಪ್ಪ ಕೃಷ್ಣ ನಾಯ್ಕ (40), ದಯಾನಂದ ಕೃಷ್ಣ ನಾಯ್ಕ (35), ಮಕ್ಕಳಾದ ಧವನ್ ದಯಾನಂದ ನಾಯ್ಕ (9), ಹಾಗೂ ಹೇಮಶ್ರೀ ಹೊನ್ನಪ್ಪ ನಾಯ್ಕ ( 7) ಗಾಯಗೊಂಡಿದ್ದು, ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.


