

(ಹಿಂದಿಮೂಲ: ನಿಖಿಲ್ ಸಚನ್, ಕನ್ನಡಕ್ಕೆ: ಬೊಳುವಾರು)——————————————–
—ನನ್ನ ಗೆಳೆಯನೊಬ್ಬ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.
ಅಮೀರ್ ಖಾನ್, ಶಾರೂಕ್ ಖಾನ್, ಸಲ್ಮಾನ್ ಖಾನರೆಂದರೆ ಬಹಳ ಅಭಿಮಾನ ಗೆಳೆಯನಿಗೆ;
ಅವರಾರಿಗೂ ಹೆದರುತ್ತಿರಲಿಲ್ಲ; ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.
ಮಧುಬಾಲಾ, ನರ್ಗೀಸ್, ವಹೀದಾರನ್ನು ಗೆಳೆಯ ಆರಾಧಿಸುತ್ತಿದ್ದ.ಅವರನ್ನು ಕಪ್ಪು ಬಿಳುಪು ಬಣ್ಣಗಳಲ್ಲಿ ಕಾಣಬಯಸುತ್ತಿದ್ದ.ಮಮ್ತಾಜ್, ಶಬಾನಾ, ಫರೀದಾ, ಝೀನತ್ ಯಾರಿಗೂ ಹೆದರುತ್ತಿರಲಿಲ್ಲ.ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.
ಬೇಸರವಾದಾಗ ಮಹಮದ್ ರಫಿ ಹಾಡು ಆಲಿಸುತ್ತಿದ್ದ.ಸಾಹಿರ್ ಕವನ ಓದುತ್ತಾ ಆನಂದಭಾಷ್ಪ ಸುರಿಸುತ್ತಿದ್ದ.ಅವರಾರಿಗೂ ಗೆಳೆಯ ಹೆದರುತ್ತಿರಲಿಲ್ಲ.ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.
ಪ್ರತಿ ಜನವರಿ ಇಪ್ಪತ್ತಾರರಂದು ‘ಸಾರೇ ಜಹಾಂಸೆ’ ಹಾಡುತ್ತಿದ್ದ.ಬಿಸ್ಮಿಲ್ಲಾ ಖಾನರ ಶೆಹನಾಯಿ, ಝಾಕೀರರ ತಬಲಾ ಕೇಳುತ್ತಿದ್ದ.ಅವರಾರಿಗೂ ಗೆಳೆಯ ಹೆದರುತ್ತಿರಲಿಲ್ಲ.ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.
ಗೆಳೆಯ ಕ್ರಿಕೆಟ್ ಆಟವೆಂದರೆ ಎಲ್ಲವನ್ನೂ ಮರೆತುಬಿಡುತ್ತಿದ್ದ.ಅಜರುದ್ದೀನ್ ಬ್ಯಾಟಿಂಗೆಂದರೆ ಎದ್ದು ಕುಣಿಯುತ್ತಿದ್ದ.ಝಹೀರ್ ಖಾನ್, ಇರ್ಫಾನ್ ಅವರಾರಿಗೂ ಹೆದರುತ್ತಿರಲಿಲ್ಲ; ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.
ಗೆಳತಿಯ ಪ್ರೀತಿಯ ಅಮಲಿನಲ್ಲಿ ಗಾಲಿಬರ ಗಜಲ್ ಹಾಡುತ್ತಿದ್ದಫೈಝರ ಶಾಹರೀ ಗುಣುಗುಣಿಸುತ್ತಿದ್ದ.ಅವರಲ್ಲಿ ಯಾರಿಗೂ ಇವನು ಹೆದರುತ್ತಿರಲಿಲ್ಲ.ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.ಅವನಿಗರಿವಿಲ್ಲದೇ ಪ್ರತಿಯೊಬ್ಬ ಮುಸ್ಲಿಮನನ್ನೂ ಪ್ರೀತಿಸುತ್ತಿದ್ದ.
ಅದರೆ, ಸುದ್ದಿಗಳು ಹಡೆದ ಭೂತಕ್ಕೆ ಬಲಿಯಾಗಿದ್ದ.ಆದ್ದರಿಂದಲೇ ಮುಸಲರ ಕೇರಿಗೆ ಹೋಗಲು ಹೆದರುತ್ತಿದ್ದ.ಅವನಿಗರಿವಿಲ್ಲದೇ ಮುಸಲ್ಮಾನರೆಂದರೆ ಬಿಚ್ಚಿಬೀಳುತ್ತಿದ್ದ.

ಕಾರ್ಯಕ್ರಮ ದಲ್ಲಿ ಶಂಕರ್ ಹಿತ್ಲಕೊಪ್ಪ ಮಾತನಾಡಿ ಸಾಮರ್ಥ್ಯ, ಕೌಶಲ್ಯ ಇರುವವರು ಸೈನ್ಯ ಸೇರಿ ದೇಶದ ಸೇವೆ ಸಲ್ಲಿಸುತ್ತಾರೆ. ತಮ್ಮ ಮಕ್ಕಳ ನ್ನು ಸೇನೆಗೆ ಸೇರಿಸಲು ಅವರ ತಂದೆ ತಾಯಿ ಕುಟುಂಬದ ತ್ಯಾಗ ದೊಡ್ಡದು. ವಿನಾಯಕ ರವರ ದೇಶ ಸೇವೆ ಸಲ್ಲಿಸಿ ಊರಿಗೆ ಆಗಮಿಸಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದರು.
ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಮೂರ್ತಿ ಮಾಡಿವಾಳ ಮಾತನಾಡಿ ವಿನಾಯಕ ರವರು ಸ್ವಾರ್ಥ ವಿಲ್ಲದೆ ದೇಶ ಸೇವೆ ಗೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ತ್ಯಾಗ ದೊಡ್ಡದು. ಶೃದ್ಧೆ, ನಿಷ್ಠೆ ಯಿಂದ ಕಷ್ಟ ಗಳನ್ನು ಎದುರಿಸಿ ದೇಶದ ರಕ್ಷಣೆ ಮಾಡಿದ್ದರಿಂದ ನಾವು ನೆಮ್ಮದಿ ಯ ಜೀವನ ನಡೆಸುತ್ತಿದ್ದೇವೆ. ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಪಿ ಬಿ ಹೊಸೂರ ಮಾತನಾಡಿ ಸೇನೆಯಲ್ಲಿ ಸೇವೆ ಸಲ್ಲಿಸುವಾಗ ಪ್ರತಿದಿನ ಪುನರ್ಜನ್ಮ ವಾಗುತ್ತದೆ. ತಂದೆ ತಾಯಿಗಳು ತಮ್ಮ ಸ್ವಾರ್ಥವನ್ನು ಮರೆತು ಮಗನನ್ನು ಸೈನ್ಯ ಕ್ಕೆ ಕಳಿಸಿದ್ದಕ್ಕೆ ಧನ್ಯವಾದಗಳನ್ನ ತಿಳಿಸಿ ಶುಭ ಹಾರೈಸಿದರು.
ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಲಾನ್ಸ್ ನಾಯಕ್ ವಿನಾಯಕ್ ಶಿವ ಮಡಿವಾಳ ರವರು ಅಭಿನಂದನೆ ಸ್ವೀಕರಿಸಿ ಮಾತನಾಡಿ ಸೇವಾವಧಿಯಲ್ಲಿಯ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಪಟ್ಟಣ ಪಂಚಾಯತ್ ಸದಸ್ಯ ವಿನಯ ಹೊನ್ನೆಗುಂಡಿ ಮಾತನಾಡಿದರು. ಗ್ರಾಮ ಕಮಿಟಿಯ ಅಧ್ಯಕ್ಷ ಕೃಷ್ಣ ಮಾಡಿವಾಳ, ಗಣಪತಿ ಹೊಸಳ್ಳಿ, ಜೈರಾಮ ಹೊಸೂರ, ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕು ಮಡಿವಾಳ ಸಂಘದ ಕಾರ್ಯದರ್ಶಿ ಸುರೇಶ್ ಮಡಿವಾಳ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸದಾನಂದ ಎಸ್ ಗೌಡ ಸ್ವಾಗತಿಸಿ, ನಿರೂಪಿಸಿದರು.
