

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಕೇಂದ್ರವನ್ನಾಗಿಸಿಕೊಂಡು ಚಾಮರಾಜನಗರ,ಮೈಸೂರು ಸೇರಿದಂತೆ ರಾಜ್ಯದಾದ್ಯಂತ ಬುಡಕಟ್ಟುಗಳ ಶ್ರೋಯೋಭಿವೃದ್ಧಿಗೆ ಶ್ರಮಿಸುತ್ತಿರುವ ಬೆಂಗಳೂರು ಮೂಲದ ಬಿ.ಪಿ. ಮಹೇಂದ್ರ ಕುಮಾರ್ ರಿಗೆ ಪ್ರತಿಷ್ಠಿತ ಬೋಧಿ ವರ್ಧನ
ಪುರಸ್ಕಾರ ದೊರೆತಿದೆ.
ಬೆಂಗಳೂರಿನ ಸ್ಫೂರ್ತಿಧಾಮ ನೀಡುವ ಒಂದು ಬೋಧಿವೃಕ್ಷ ರಾಷ್ಟ್ರ ಪ್ರಶಸ್ತಿ ಮತ್ತು ಬೋಧಿವರ್ಧನ ೫ ರಾಜ್ಯಪ್ರಶಸ್ತಿ ಗಳಲ್ಲಿ
ಬೋಧಿ ವರ್ಧನ ಪುರಸ್ಕೃತವಾಗಿರುವ ಮಹೇಂದ್ರಕುಮಾರ್ ಕಳೆದ ಮೂರು ದಶಕಕ್ಕೂ ಹೆಚ್ಚು ಅವಧಿಯಿಂದ ಬುಡಕಟ್ಟುಗಳ ಪರವಾಗಿ ಸೇವೆ ಸಲ್ಲಿಸುತಿದ್ದಾರೆ.
ಬುಡಕಟ್ಟುಗಳ ಬಲವರ್ಧನೆ,ಪ್ರಗತಿಪರ ಹೋರಾಟ,ಸಾಮಾಜಿಕ ಚಳುವಳಿಗಳಲ್ಲಿ ಸಕ್ರೀ ಯರಾಗಿರುವ ಡಾ. ಮಹೇಂದ್ರಕುಮಾರರ ಸಾಧನೆ,ಸೇವೆ ಅನುಲಕ್ಷಿಸಿ ದೊರೆತ ಈ ಪುರಸ್ಕಾರ ಅವರ ಪ್ರಾಮಾಣಿಕ ಹೋರಾಟ ಮತ್ತು ಬದ್ಧತೆಗೆ ಸಿಕ್ಕ ಬಹುಮಾನ. ಸಸ್ಯಶಾಸ್ತ್ರದ ಸ್ನಾತಕೋತ್ತರ ಪದವಿಧರರಾಗಿರುವ ಮಹೇಂದ್ರಕುಮಾರ್ ಪರಿಸರ ರಕ್ಷಣೆ, ವನ್ಯಜೀವಿ ಸಂರಕ್ಷಣೆ, ಬುಡಕಟ್ಟುಗಳ ಬಲವರ್ಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಬಹುಮುಖಿ. ಸ್ಫೂರ್ತಿಧಾಮದ ಪ್ರತಿಷ್ಠಿತ ಪುರಸ್ಕಾರಗಳನ್ನು ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಮೊದಲ ಸಾಧಕರಾಗಿರುವ ಮಹೇಂದ್ರಕುಮಾರ ಸಾಧನೆಗೆ ಸಿಕ್ಕ ಗೌರವ ಇದಾಗಿದೆ.

