ಸಾಮಾಜಿಕ ಕ್ರಾಂತಿ ಮಾಡಿದ ನಾರಾಯಣ ಗುರುಗಳಿಗೆ ನ್ಯಾಯ ದೊರೆಯಲಿಲ್ಲ ಎಂದು ವಿಷಾದಿಸಿದ ಬೈಲೂರು ನಿಜಗುಣಾನಂದ ಸ್ವಾಮೀಜಿ ಎಲ್ಲರ ಒಳಿತಿಗೆ ದುಡಿದ ನಾರಾಯಣ ಗುರುಗಳನ್ನು ಅವರ ಸಮೂದಾಯ ಕೂಡಾ ಉಪೇಕ್ಷಿಸಿದ ಬಗ್ಗೆ ಸಾತ್ವಿಕ ಬೇಸರವಿದೆ ಎಂದಿದ್ದಾರೆ. ಶಿರಸಿಯಲ್ಲಿ ನಡೆದ ಸೌಹಾರ್ದ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಮನುಷ್ಯತ್ವ, ಮಾನವೀಯತೆ ಇಲ್ಲದ ಧರ್ಮ ಧರ್ಮವೇ ಅಲ್ಲ, ಎಲ್ಲಾ ಧರ್ಮಗಳೂ ಮಾನವೀಯತೆ,ಹೃದಯವಂತಿಕೆ ಬೋಧಿಸುತ್ತವೆ ಎಂದು ಪ್ರತಿಪಾದಿಸಿದರು.
ಧನ್ಯವಾದಗಳು
ವಕೀಲ ಮಂಜುನಾಥ ನಾಯ್ಕ ಸ್ವಾಗತಿಸಿದ ಸಮಾವೇಶದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಬೋಧಿವರ್ಧನ ಪುರಸ್ಕೃತ ಚಿಂತಕ ಮಹೇಂದ್ರ ಕುಮಾರ ಮಾತನಾಡಿ ನಿಸರ್ಗ ನಿಯಮ ಅರಿತರೆ ಮಾನವೀಯತೆ ಅರ್ಥವಾಗುತ್ತದೆ. ಮನುಷ್ಯ ಪರಿಸರ,ನೆರೆಹೊರೆಯನ್ನು ಅರಿತು ಪ್ರೀತಿಸಿದರೆ ಶಾಂತಿ ಉದಭವಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಕೋಲಶಿರ್ಸಿ ಕನ್ನೇಶ್ ಮಾತನಾಡಿ ದೇಶದ ವರ್ತಮಾನ ಅರಿತುಕೊಳ್ಳಲು ಸ್ಥಳೀಯ ವರ್ತಮಾನಗಳನ್ನು ಅವಲೋಕಿಸಿದರೆ ಸಾಕು. ಮೂತ್ರ ಸಿಂಪಡಿಸುವ, ಉಪಾಯದಿಂದ ಧರ್ಮದ ಹೆಸರಿನಲ್ಲಿ ಜಾತಿ,ಶ್ರೀಮಂತಿಕೆಯ ಶ್ರೇಷ್ಠತೆ ಪ್ರತಿಪಾದಿಸುವ ಜನರು ದೇಶದ ಅಸಮಾನತೆ,ಅಶಾಂತಿಗೆ ಕಾರಣವಾಗಿದ್ದಾರೆ. ಈ ವಾಸ್ತವಗಳನ್ನು ತಿಳಿಸಲು ಇಂಥ ಸಮಾವೇಶಗಳ ಅಗತ್ಯವಿದೆ ಎಂದರು.
ಸಂಘಟಕರಾದ ಪ್ರಸನ್ನನಾಯ್ಕ ಮತ್ತು ಮಂಜುನಾಥ ನಾಯ್ಕರನ್ನು ಪ್ರಶಂಸಿಸಲಾಯಿತು. ಮುಸ್ಲಿಂ ಸಮೂದಾಯ, ಮುಕ್ರಿ ಸಮೂದಾಯಗಳು ಸೇರಿದಂತೆ ಕೆಲವರು ನಿಜಗುಣಾನಂದ ಶ್ರೀ ಗಳನ್ನು ಸನ್ಮಾನಿಸಿ ಗೌರವಿಸಿದರು. ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಸದಸ್ಯ ಸುಭಾಶ್ ಕಾನಡೆ ಅಧ್ಯಕ್ಷತೆ ವಹಿಸಿದ್ದರು. ಟ್ರೇಡ್ ಯೂನಿಯನ್ ಮುಖಂಡ ನಾಗಪ್ಪ ನಾಯ್ಕ ವಂದಿಸಿದರು.