

ರೈತ ಸಾಧನೆ ಮೂಲಕ ಬೆಳೆಯಬೇಕು ಎಂದು ಪ್ರತಿಪಾದಿಸಿರುವ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ರೈತನಾಗಿ ಬೆಳೆದುಬಂದ ಭೀಮಣ್ಣ ನಾಯ್ಕ ಇಂಥ ಸುಸಜ್ಜಿತ ಹೋಟೆಲ್, ಉದ್ಯಮದ ಗೆಲುವಿನೊಂದಿಗೆ ಮಾಡಿದ ಸಾಧನೆ ಹೆಚ್ಚು ಜನರಿಗೆ ತಿಳಿಯಬೇಕು ಆಗ ರೈತನಿಗೆ ಆತ್ಮವಿಶ್ವಾಸ ಮೂಡುತ್ತದೆ ಎಂದರು. ಶಿರಸಿಯಲ್ಲಿ ಇಂದು ಲೋಕಾರ್ಪಣೆಗೊಂಡ ಸುಪ್ರಿಯಾ ಇಂಟರ್ ನ್ಯಾಶನಲ್ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ನಾವು ನಮ್ಮ ಸಾಧನೆಯಿಂದಲೇ ಪರಿಚಯವಾಗುವುದು ಹೆಚ್ಚು ಶ್ರೇಯಸ್ಕರ ಎಂದು ಮಾರ್ಮಿಕವಾಗಿ ನುಡಿದರು.

ಭೀಮಣ್ಣ ನಾಯ್ಕ ಮಿತಭಾಷಿ ರಾಜಕೀಯ ಅವರಿಗೆ ಕೈ ಹಿಡಿಯದಿದ್ದರೂ ಉದ್ಯಮ ಕ್ಷೇತ್ರದಲ್ಲಿ ಅವರು ಯಶಸ್ಸು ಸಾಧಿಸಿದ್ದಾರೆ. ಅವರ ಪ್ರೀತಿ-ವಿಶ್ವಾಸಗಳ ಕಾರಣಕ್ಕೆ ತಾನು ಮೈಸೂರಿನಿಂದ ಹೆಲಿಕಾಪ್ಟರ್ ನಲ್ಲಿ ಬಂದು ಈ ಸಮಾರಂಭದಲ್ಲಿ ಪಾಲ್ಗೊಂಡೆ ಎಂದರು.
ಭೀಮಣ್ಣ ಮೌನ ಸಾಧಕ ಎಂದು ಅಭಿನಂದಿಸಿದ ಡಾ. ಶಿವರಾಜ್ ಕುಮಾರ ಭೀಮಣ್ಣ ಏನನ್ನೂ ಹೇಳಿಕೊಳ್ಳದೆ ಅಂದುಕೊಂಡದ್ದನ್ನು ಸಾಧಿಸುತ್ತಾರೆ ಅವರ ಒಡನಾಟ, ಸೌಜನ್ಯ ನಮಗೆ ಹೆಮ್ಮೆಯ ಭಾವನೆ ಮೂಡಿಸುತ್ತದೆ ಎಂದು ಶ್ಲಾಘಿಸಿದರು.

ಭೀಮಣ್ಣರನ್ನು ಅಭಿನಂದಿಸಿದ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಮತ್ತು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೀಮಣ್ಣ ಎಂಥ ಸಾಧಕ ಎನ್ನುವುದು ಈಗ ಸಾಬೀತಾಗಿದೆ. ಅವರ ಕುಟುಂಬ ಇದರ ಹಿಂದಿರುವ ಶಕ್ತಿ ಎಂದರು. ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡ ಮಧು ಬಂಗಾರಪ್ಪ ಮಾತನಾಡಿ ʼನಮ್ಮ ತಂದೆ-ತಾಯಿ ನಂತರ ಇಲ್ಲಿರುವ ಹಿರಿಯರೆಲ್ಲಾ ಅವರ ಹಿತೈಶಿ,ಪ್ರತಿನಿಧಿಗಳಾಗಿ ನಮ್ಮನ್ನು ಹರಿಸುತ್ತಿರುವುದಕ್ಕೆ ನಮಗೆಲ್ಲಾ ಖುಷಿ-ಸಂಬ್ರಮ ಎಂದು ನೆನೆದರು.

