ವಾರ್ಷಿಕವಾಗಿ ಹಬ್ಬದಂತೆ ಆಚರಿಸುವ ಮೀನು ಹಿಡಿಯುವ ಕೆರೆಭೇಟೆ ಮಲೆನಾಡಿನ ಸಾಂಪ್ರದಾಯಿಕ ಆಚರಣೆ. ಈ ಸಾರ್ವಜನಿಕ ಮೋಜಿನ ಕ್ರೀಡೆಯಲ್ಲಿ ಮೀನು ಹಿಡಿಯುವ ಸಾಹಸಿಗಳೊಂದಿಗೆ ಇತರರೂ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಹಿಂದೆಲ್ಲಾ ವ್ಯವಹಾರ ವಾಗದೆ ವಾರ್ಷಿಕ ಮೋಜಿನ ದಿನವಾಗಿ ಆಚರಿಸುತ್ತಿದ್ದ ಕೆರೆಭೇಟೆ ಈಗ ವಾಣಿಜ್ಜೀ ಕ್ರತವಾಗಿದೆ. ಇಂಥ ಮೋಜಿನ ಕೆರೆಭೇಟೆಯಿಂದ ಗ್ರಾಮದ ದೇವಸ್ಥಾನ ಕ್ಕಾಗಿ ಹಣ ಸಂಗ್ರಹಿಸುವ ಯೋಜನೆ ತಯಾರಿಸಿದ್ದೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಕಾನ ಗೋಡಿನಲ್ಲಿ ಸಂಘರ್ಷ ಕ್ಕೆ ಕಾರಣವಾಗಿ ಬಹುಚರ್ಚೆಯ ವಿಷಯವಾಗಿದೆ.
ಕಾನ ಗೋಡಿನ ಕೆರೆಯ ವಾರ್ಷಿಕ ಕೆರೆಭೇಟೆ ಯಲ್ಲಿ ಪಾಲ್ಗೊಳ್ಳುವವರಿಗೆ ತಲಾ 600 ರೂಪಾಯಿ ಫೀ ಸಂಗ್ರಹಿಸಿ ಅವಕಾಶ ನೀಡಲಾಗಿತ್ತು. ಸಹಸ್ರ ಸಂಖ್ಯೆಯಲ್ಲಿ ಸೇರಿ ಕೆರೆಭೇಟೆಗೆ ಇಳಿದ ಮೀನುಪ್ರೀಯರ ಕೂಣಿ ಗಳಿಗೆ ಮೀನು ಸಿಗದೆ ನಿರಾಶರಾದವರು ಸಂಘಟಕ ರೊಂದಿಗೆ ಜಗಳ ತೆಗೆದರು, ಗಲಾಟೆ ಮಾಡಿ ಪೆಂಡಾಲ್ ಕಿತ್ತು ನೀರಿನ ವಾಹನ ಕ್ಕೆ ಹಾನಿ ಮಾಡಿದರು. ಕೆರೆಭೇಟೆ ಗೆ ಸೇರಿದ್ದ ಸಾವಿರಾರು ಜನರೆದುರು ಸಣ್ಣ ಸಂಖ್ಯೆಯ ಪೊಲೀಸರು ಅಸಹಾಯಕರಾದರು. ಹಿಂದೆಲ್ಲಾ ಸಣ್ಣ ಪುಟ್ಟ ಗಲಾಟೆ ಜಗಳಗಳಿಂದ ಸುದ್ದಿಯಾಗುತಿದ್ದ ಕೆರೆಭೇಟೆ ಈ ವರ್ಷ ಸಂಘರ್ಷ ದಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಂತಾಗಿದೆ https://m.facebook.com/story.php?story_fbid=1103312220249008&id=348696862377218