mass fishing turned violent- ಕೆರೆಭೇಟೆ!ಫಜೀತಿ

ವಾರ್ಷಿಕವಾಗಿ   ಹಬ್ಬದಂತೆ  ಆಚರಿಸುವ ಮೀನು ಹಿಡಿಯುವ ಕೆರೆಭೇಟೆ  ಮಲೆನಾಡಿನ  ಸಾಂಪ್ರದಾಯಿಕ  ಆಚರಣೆ.  ಈ  ಸಾರ್ವಜನಿಕ  ಮೋಜಿನ  ಕ್ರೀಡೆಯಲ್ಲಿ  ಮೀನು  ಹಿಡಿಯುವ  ಸಾಹಸಿಗಳೊಂದಿಗೆ  ಇತರರೂ  ಆಸಕ್ತಿಯಿಂದ  ಪಾಲ್ಗೊಳ್ಳುತ್ತಾರೆ. ಹಿಂದೆಲ್ಲಾ  ವ್ಯವಹಾರ ವಾಗದೆ  ವಾರ್ಷಿಕ  ಮೋಜಿನ  ದಿನವಾಗಿ  ಆಚರಿಸುತ್ತಿದ್ದ  ಕೆರೆಭೇಟೆ  ಈಗ  ವಾಣಿಜ್ಜೀ ಕ್ರತವಾಗಿದೆ.  ಇಂಥ  ಮೋಜಿನ ಕೆರೆಭೇಟೆಯಿಂದ  ಗ್ರಾಮದ  ದೇವಸ್ಥಾನ ಕ್ಕಾಗಿ  ಹಣ  ಸಂಗ್ರಹಿಸುವ  ಯೋಜನೆ  ತಯಾರಿಸಿದ್ದೆ  ಉತ್ತರ  ಕನ್ನಡ  ಜಿಲ್ಲೆ  ಸಿದ್ದಾಪುರದ  ಕಾನ ಗೋಡಿನಲ್ಲಿ  ಸಂಘರ್ಷ ಕ್ಕೆ  ಕಾರಣವಾಗಿ  ಬಹುಚರ್ಚೆಯ  ವಿಷಯವಾಗಿದೆ. 

ಕಾನ ಗೋಡಿನ  ಕೆರೆಯ  ವಾರ್ಷಿಕ  ಕೆರೆಭೇಟೆ ಯಲ್ಲಿ  ಪಾಲ್ಗೊಳ್ಳುವವರಿಗೆ  ತಲಾ  600 ರೂಪಾಯಿ  ಫೀ  ಸಂಗ್ರಹಿಸಿ  ಅವಕಾಶ  ನೀಡಲಾಗಿತ್ತು. ಸಹಸ್ರ  ಸಂಖ್ಯೆಯಲ್ಲಿ  ಸೇರಿ  ಕೆರೆಭೇಟೆಗೆ  ಇಳಿದ  ಮೀನುಪ್ರೀಯರ  ಕೂಣಿ  ಗಳಿಗೆ  ಮೀನು  ಸಿಗದೆ  ನಿರಾಶರಾದವರು  ಸಂಘಟಕ ರೊಂದಿಗೆ  ಜಗಳ  ತೆಗೆದರು, ಗಲಾಟೆ  ಮಾಡಿ ಪೆಂಡಾಲ್  ಕಿತ್ತು   ನೀರಿನ  ವಾಹನ ಕ್ಕೆ  ಹಾನಿ ಮಾಡಿದರು. ಕೆರೆಭೇಟೆ ಗೆ  ಸೇರಿದ್ದ  ಸಾವಿರಾರು  ಜನರೆದುರು  ಸಣ್ಣ  ಸಂಖ್ಯೆಯ  ಪೊಲೀಸರು  ಅಸಹಾಯಕರಾದರು. ಹಿಂದೆಲ್ಲಾ  ಸಣ್ಣ  ಪುಟ್ಟ  ಗಲಾಟೆ ಜಗಳಗಳಿಂದ  ಸುದ್ದಿಯಾಗುತಿದ್ದ  ಕೆರೆಭೇಟೆ  ಈ  ವರ್ಷ  ಸಂಘರ್ಷ ದಿಂದ  ಸಾಮಾಜಿಕ  ಜಾಲತಾಣಗಳಲ್ಲಿ  ವೈರಲ್  ಆದಂತಾಗಿದೆ https://m.facebook.com/story.php?story_fbid=1103312220249008&id=348696862377218

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು
ಸಿದ್ದಾಪುರ: ತಾಲೂಕಿನ ಕಾನಗೋಡಿನ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಸಂಘದ ಎರಡು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸುರೇಶ ಮಾರ್ಯಾ ನಾಯ್ಕ ಹಾಗೂ ಗೀತಾ ವಸಂತ ಮೇದಾರ ಆಯ್ಕೆಯಾಗಿದ್ದಾರೆ‌. ಸ್ಥಳೀಯ ಪ್ರಮುಖರಾದ ಜಿ.ಆಯ್.ನಾಯ್ಕ ಹಾಗೂ ಎಚ್.ಕೆ‌.ಶಿವಾನಂದ ಹಾಗೂ ಇತರ ಮುಖಂಡರ ಬೆಂಬಲದೊಂದಿಗೆ ಸುರೇಶ ಹಾಗೂ ಗೀತಾ ಜಯಗಳಿಸಿದ್ದು, ಮತದಾನ ಮಾಡಿದ ಮತದಾರರು ಹಾಗೂ ಸಹಕರಿಸಿದ ಎಲ್ಲರಿಗೂ ನೂತನ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *