

ಗ್ರಾಮೀಣ ಕ್ರೀಡೆ ಕೆರೆಭೇಟೆಯನ್ನು ಹಿಂಸೆ,ಲೂಟಿ,ದರೋಡೆಗೆ ಬಳಸಿಕೊಂಡ ಆರೋಪದ ಮೇಲೆ ಇಂದು ೮ ಜನರನ್ನು ಬಂಧಿಸಲಾಗಿದೆ. ಈವರೆಗೆ ಬಂಧಿತರಾದವರ ಸಂಖ್ಯೆ ೨೧ಕ್ಕೆ ಏರಿದ್ದು ಇವರಲ್ಲಿ ಈವರೆಗೆ ಯಾರಿಗೂ ಜಾಮೀನು ದೊರೆತಿಲ್ಲ ಇಂದು ಬಂಧಿತರಾದವರನ್ನು ರಾಧಾಕೃಷ್ಣ ಚಂದ್ರಪ್ಪ ಕೊರ್ತಿಕೊಪ್ಪ ಸಾಗರ, ಅಣ್ಣಪ್ಪ ಮೈಲಾ ನಾಯ್ಕ ಶಿರಳಗಿ ಮಣಿಕಂಠ ಅಣ್ಣಪ್ಪ ಕೊರ್ತಿಕೊಪ್ಪ, ಉದಯ ನಿಂಗಪ್ಪ ಬರೂರು ಸಾಗರ,ಉದಯಕುಮಾರ ಚಂದ್ರಪ್ಪ, ಕಂಠೀರವ ಹುಚ್ಚಪ್ಪ, ಶಿವಕುಮಾರ ರುದ್ರಪ್ಪಾ ಮುಟಗುಪ್ಪೆ ಸೊರಬಾ, ಮಂಜುನಾಥ ನಾಯ್ಕ ಹರಕನಹಳ್ಳಿ ಎಂದು ಗುರುತಿಸಲಾಗಿದೆ.
