ತಪ್ಪು ತಿದ್ದಿಕೊಳ್ಳದ ಸರ್ಕಾರದ ನಡೆ ಸರಿಯೆ? ನೀವೇ ಪ್ರತಿಕ್ರೀಯಿಸಿ….

BJP tweet against writers and congress

ಸಾಹಿತಿಗಳ ಪಠ್ಯ ವಾಪಸ್ ಸಮರ: ಬಿಜೆಪಿಯಿಂದ ‘ಟೂಲ್ ಕಿಟ್ ರಾಜೀನಾಮೆ ಸ್ವೀಕರಿಸಿ’ ಅಭಿಯಾನ

ಪಠ್ಯ ವಾಪಸ್ ಸಮರದ ವಿರುದ್ಧ ಬಿಜೆಪಿ ಮುಖಂಡರು ಕಿಡಿಕಾರಿದ್ದು, ಇದು ಕಾಂಗ್ರೆಸ್ ಕೃಪಾಪೋಷಿತ ಟೂಲ್ ಕಿಟ್ ರಾಜೀನಾಮೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಒಬ್ಬರ ಹಿಂದೆ ಒಬ್ಬರಂತೆ ಪಠ್ಯಕ್ಕೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯುತ್ತಿದ್ದಾರೆ. ಈ ಪಠ್ಯ ವಾಪಸ್ ಸಮರದ ವಿರುದ್ಧ ಬಿಜೆಪಿಯ ಮುಖಂಡರು ಕಿಡಿಕಾರಿದ್ದು, ಇದು ಕಾಂಗ್ರೆಸ್ ಕೃಪಾಪೋಷಿತ ಟೂಲ್ ಕಿಟ್ ರಾಜೀನಾಮೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಹಾಗೂ ಬಲಪಂಥೀಯರಿಂದ ಟೂಲ್ ಕಿಟ್ ರಾಜೀನಾಮೆ ಎಂದು ವ್ಯಾಖ್ಯಾನ ಮಾಡಿದ್ದು, ಇಂತಹ ಸಾಹಿತಿಗಳ ರಾಜೀನಾಮೆಯಿಂದ ರಾಜ್ಯ ಸರ್ಕಾರಕ್ಕೆ ಮರುಕವಿಲ್ಲ ಅಂತ ಟ್ವೀಟ್ ಮೂಲಕ ಸಚಿವ ಅಶ್ವತ್ಥ್ ನಾರಾಯಣ್ ಕಿಡಿಕಾರಿದ್ದಾರೆ. ಸುಳ್ಳಿನ ಕಥೆ ಹೆಣೆಯುವಲ್ಲಿ ಪಳಗಿರುವ ಕಾಂಗ್ರೆಸ್‌ ಕೃಪಾಪೋಷಿತ ಸಾಹಿತಿಗಳ ಬಳಗವಿಂದು ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೇ ಕಂಪಿಸುತ್ತಿದೆ. #ToolkitResignation ತಂತ್ರ ಬಳಸಿ ಸಿಂಪತಿ ಗಿಟ್ಟಿಸಿಕೊಳ್ಳಬಯಸುವ ಇಂಥವರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಯಾವುದೇ ಮರುಕವಿಲ್ಲ. ಇವರಿಗೆ ನೂತನ ಪಠ್ಯಕ್ರಮ ಪಥ್ಯವಾಗದ ಮಾತ್ರಕ್ಕೆ ಬದಲಾಯಿಸಲಾಗದು ಎಂದು ಕಿಡಿಕಾರಿದ್ದಾರೆ.

  • ಸುಳ್ಳಿನ ಕಥೆ ಹಣೆಯುವಲ್ಲಿ ಪಳಗಿರುವ ಕಾಂಗ್ರೆಸ್‌ ಕೃಪಾಪೋಷಿತ ಸಾಹಿತಿಗಳ ಬಳಗವಿಂದು ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೇ ಕಂಪಿಸುತ್ತಿದೆ.#ToolkitResignation ತಂತ್ರ ಬಳಸಿ ಸಿಂಪತಿ ಗಿಟ್ಟಿಸಿಕೊಳ್ಳಬಯಸುವ ಇಂಥವರ ಬಗ್ಗೆ @BJP4Karnataka ಸರ್ಕಾರಕ್ಕೆ ಯಾವುದೇ ಮರುಕವಿಲ್ಲ. ಇವರಿಗೆ ನೂತನ ಪಠ್ಯಕ್ರಮ ಪಥ್ಯವಾಗದ ಮಾತ್ರಕ್ಕೆ ಬದಲಾಯಿಸಲಾಗದು.— Dr. Ashwathnarayan C. N. (@drashwathcn) May 31, 2022

ಸಚಿವ ನಿರಾಣಿ ಕೂಡ ಸಾಹಿತಿಗಳು, ಕಾಂಗ್ರೆಸ್ ನಾಯಕರ ವಿರುದ್ಧ ಗರಂ ಆಗಿದ್ದು, ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಕಾಮಾಲೆ ಕಣ್ಣಿನವರಿಗೆ ಜಗತ್ತೆಲ್ಲ ಹಳದಿ. ತುಷ್ಟೀಕರಣ, ತುಚ್ಛೀಕರಣಗಳಲ್ಲೇ ಮುಳುಗಿರುವವರ ಯೋಗ್ಯತೆಯೂ ಇಷ್ಟೇ. ಕರ್ನಾಟಕ ಬಿಜೆಪಿಗೆ ಇಂತಹ ಮುಲಾಜುಗಳಿಲ್ಲ. ಸತ್ಯವನ್ನು ಎತ್ತಿ ಹಿಡಿಯುವುದು ಮತ್ತು ಅದನ್ನು ಮಕ್ಕಳಿಗೆ ಕಲಿಸುವುದು ನಮ್ಮ ಸಂಕಲ್ಪ. #ToolkitResignation ಕೆಲಸವನ್ನು ಕಾಂಗ್ರೆಸ್ ಮುಂದುವರಿಸಲಿ‌ ಎಂದಿದ್ದಾರೆ.

  • ಕಾಮಾಲೆ ಕಣ್ಣಿನವರಿಗೆ ಜಗತ್ತೆಲ್ಲ ಹಳದಿ. ತುಷ್ಟೀಕರಣ, ತುಚ್ಛೀಕರಣಗಳಲ್ಲೇ ಮುಳುಗಿರುವವರ ಯೋಗ್ಯತೆಯೂ ಇಷ್ಟೇ. @BJP4Karnataka ಕ್ಕೆ ಇಂತಹ ಮುಲಾಜುಗಳಿಲ್ಲ. ಸತ್ಯವನ್ನು ಎತ್ತಿ ಹಿಡಿಯುವುದು ಮತ್ತು ಅದನ್ನು ಮಕ್ಕಳಿಗೆ ಕಲಿಸುವುದು ನಮ್ಮ ಸಂಕಲ್ಪ. #ToolkitResignation ಕೆಲಸವನ್ನು ಕಾಂಗ್ರೆಸ್ ಮುಂದುವರೆಸಲಿ.— Dr. Murugesh R Nirani (@NiraniMurugesh) May 31, 2022

ಪಠ್ಯವಿರೋಧಿ ತಂತ್ರದ ಎಲ್ಲಾ ಸಾಧನಗಳೂ ಮುಗಿದು ದಿಕ್ಕೆಟ್ಟಿರುವ ಕಾಂಗ್ರೆಸ್ ಕೊನೆಯ ದಾಳವಾಗಿ ತಾನು ಪೋಷಿಸಿಕೊಂಡು ಬಂದಿರುವ ಸಾಹಿತಿಗಳನ್ನು ಈಗ ಛೂ ಬಿಟ್ಟಿದೆ. ಒಬ್ಬರ ಹಿಂದೆ ಒಬ್ಬರಂತೆ ಸಾಹಿತಿಗಳು ಕಾಂಗ್ರೆಸ್ ನೀಡಿದ್ದ ಪದವಿ ಭಿಕ್ಷೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಸರ್ಕಾರ ಇದನ್ನು ಅಂಗೀಕರಿಸಬೇಕು! #AcceptToolkitResignation ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.

AcceptToolkitResignation ಅಭಿಯಾನ ಶುರು: ಬಿಜೆಪಿ ಹಾಗೂ ಬಲಪಂಥೀಯರಿಂದ ಟೂಲ್ ಕಿಟ್ ರಾಜೀನಾಮೆ ಎಂದು ವ್ಯಾಖ್ಯಾನ ಬೆನ್ನಲ್ಲೇ, ರಾಜೀನಾಮೆಯನ್ನು ಅಂಗೀಕರಿಸಿ ಎಂದು ಅಭಿಯಾನ ಶುರುವಾಗಿದೆ. #AcceptToolkitResignation ಎಂದು ಅಭಿಯಾನ ಶುರುವಾಗಿದ್ದು, ಇದು ಟೂಲ್ ಕಿಟ್ ರಾಜೀನಾಮೆ ಎಂದು ಬಿಜೆಪಿ ಮುಖಂಡರು ಟೀಕಿಸಿದ್ದಾರೆ. ಸಿಎಂ ಹಾಗೂ ಶಿಕ್ಷಣ ಸಚಿವರ ಬೆನ್ನಿಗೆ ನಿಂತಿರುವ ಸಚಿವ ಸುಧಾಕರ್, ಸಚಿವ ಮುರುಗೇಶ್ ನಿರಾಣಿ, ಸಚಿವ ಅಶ್ವತ್ಥ್ ನಾರಾಯಣ್ ಪಠ್ಯ ಪರಿಷ್ಕರಣೆ ಸಂಬಂಧ ಸಮರ್ಥನೆ ಮಾಡಿಕೊಂಡಿದ್ದಾರೆ.https://25cdf39085263bd48737e0333a88ce60.safeframe.googlesyndication.com/safeframe/1-0-38/html/container.html

ಬೊಮ್ಮಾಯಿ ಸರ್ ನನ್ನದೊಂದು ಮನವಿ, ಕುವೆಂಪು ಪ್ರತಿಷ್ಠಾನಕ್ಕೆ ಯಾರೇ ರಾಜೀನಾಮೆ ನೀಡಿದರೂ ಅದನ್ನು ಅಂಗೀಕರಿಸಿ. ಆ ಸ್ಥಾನಕ್ಕೆ ಸೂಕ್ತ ಮತ್ತು ರಾಷ್ಟ್ರೀಯ ವಿಚಾರವುಳ್ಳ ವ್ಯಕ್ತಿಗಳನ್ನು ಆಯ್ಕೆ ಮಾಡಿ. ರಾಜೀನಾಮೆ ನಾಟಕಕ್ಕೆ ಬಗ್ಗದೇ ರೋಹಿತ್ ಹಾಗೂ ಸಚಿವ ಬಿ.ಸಿ ನಾಗೇಶ್ ಅವರ ಬೆನ್ನಿಗೆ ನಿಲ್ಲಿ. ಯಾವುದೇ ಕಾರಣಕ್ಕೂ ಎಡವಟ್ಟು ಪಂಥೀಯರಿಗೆ ಮಣಿಯಬೇಡಿ. ಏನೂ ಕೆಲಸ ಮಾಡದೇ, ಸಮಾಜಕ್ಕೆ ಯಾವುದೇ ಕೊಡುಗೆ ಕೊಡದೇ, ಕೇವಲ ಜಾತಿಯ ಆಧಾರದಲ್ಲಿ ಮತ್ತು ಕಾಂಗ್ರೆಸ್​ನ ಕೆಲವು ಮನೆತನಗಳ ಜೀತ ಮಾಡಿದ ಕಾರಣಕ್ಕೆ ಕೆಲವು ಪ್ರಾಧಿಕಾರ, ಪ್ರತಿಷ್ಠಾನಗಳ ಅಧ್ಯಕ್ಷ, ಸದಸ್ಯಗಿರಿಯ ಲಾಭ ಅಥವಾ ಭಿಕ್ಷೆ ಪಡೆದ ಸಾಹಿತ್ಯ ರಾಜಕಾರಣಿಗಳ ರಾಜೀನಾಮೆ ಇದು. ಮೀನಾಮೇಷ ಎಣಿಸಬೇಡಿ, ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ, ಸತ್ಯ ಅರಿಯಲಿ. ನಮ್ಮ ಜನರೇಷನ್ ತರ ಸುಳ್ಳಿನ ಕಂತೆ ಓದೋದು ತಪ್ಪಲಿ ಎಂದು ಹಲವರು ಟ್ವೀಟ್ ಮಾಡಿ ಆಕ್ರೋಶ ‌ಹೊರಹಾಕುತ್ತಿದ್ದಾರೆ.‌ (etbk)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *