ಕಾನಗೋಡು ಕೆರೆಭೇಟೆ- ಒಂದು ಅಳತೆ (ತೂಕದ) ಯಂತ್ರ, ಒಂದು ಝೆರಾಕ್ಸ್ ಯಂತ್ರದೊಂದಿಗೆ ಮೂರು ಜನರ ಬಂಧನ ೨೪ ಕ್ಕೇರಿದ ಬಂಧಿತರ ಸಂಖ್ಯೆ
ರಾಜ್ಯವ್ಯಾಪಿ ಸುದ್ದಿಯಾದ ಕಾನಗೋಡು ಕೆರೆಭೇಟೆ ಪ್ರಕರಣದ ದೊಂಬಿ,ದರೋಡೆ ಆರೋಪಿಗಳನ್ನಾಗಿ ಈವರೆಗೆ ೨೪ ಜನರನ್ನು ಬಂಧಿಸಿದ ಪೊಲೀಸರು ಆರೋಪಿಗಳ ಹುಡುಕಾಟಕ್ಕಾಗಿ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಕೆರೆಭೇಟೆಯ ರವಿವಾರ ದುಷ್ಕರ್ಮಿಗಳು ಅಪಹರಿಸಿದ ಕೆಲವು ವಸ್ತುಗಳು ಮರಳಿವೆ. ಘಟನೆಯ ಮಾರನೇ ದಿವಸ ಕಾನಗೋಡಿಗೆ ಭೇಟಿ ನೀಡಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದರು. ಇಂದು ಸ್ಥಳಿಯ ಶಾಸಕ, ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಾನಗೋಡಿಗೆ ಭೇಟಿ ನೀಡಿದ್ದರು. ಈ ವರ್ತಮಾನಗಳ ನಡುವೆ ಸೊರಬಾದಲ್ಲಿ ಪ್ರತಿಭಟನೆ ನಡೆಸಿದ ಮೀನು ಭೇಟೆಗಾರರು ಕಾನಗೋಡಿನಲ್ಲಿ ಗ್ರಾಮಸ್ಥರು, ಸಂಘಟಕರ ತಪ್ಪಿನಿಂದಾಗಿ ರಾದ್ಧಾಂತವಾಗಿದೆ. ಆ ಘಟನೆಯಲ್ಲಿ ಪೊಲೀಸರ ತಪ್ಪಿಲ್ಲ, ಕೆರೆಭೇ ಟಿಗೆ ಬಂದವರು, ಬಂಧಿತರಿಗೆ ಕಿರುಕುಳ ಕೊಡಬೇಡಿ ಎಂದು ಮನವಿ ನೀಡಿ ತಹಸಿಲ್ಧಾರರ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.
ಈ ವಿದ್ಯಮಾನಗಳು ಒಂದೆಡೆಯಾದರೆ ಕೆರೆಭೇಟೆಯಲ್ಲಿ ರಗಳೆ ಮಾಡಿ ರಾದ್ಧಾಂತ ಮಾಡಿದವರು ಬೇರೆ ಕೆಲವು ಅಮಾಯಕರು ಪೊಲೀಸರ ಕೈಗೆ ಸಿಕ್ಕು ತೊಂದರೆಗೆ ಒಳಗಾದ ಘಟನೆಗಳೂ ವರದಿಯಾಗಿವೆ. ಕೆಲವರನ್ನು ಕೂಲಂಕುಶವಾಗಿ ತನಿಖೆ ನಡೆಸಿ ನಿರಪರಾಧಿಗಳೆಂದು ಬಿಡುಗಡೆ ಮಾಡಿರುವ ಮಾಹಿತಿಯೂ ಚರ್ಚೆಯಾಗುತ್ತಿದೆ.
ಇದರ ಮಧ್ಯೆ ಕಾನಗೋಡು ತವರುಮನೆಯಾಗಿರುವ ಮಹಿಳೆಯ ಕುಟುಂಬ ತಮ್ಮ ಮಕ್ಕಳನ್ನು ಕಾನಗೋಡಿನ ಶಾಲೆಗೆ ಬಿಡಲು ಶಿಕಾರಿಪುರದಿಂದ ಬಂದವರು ಗಂಡ ನಾಪತ್ತೆಯಾಗಿರುವುದನ್ನು ತಿಳಿದು ಸಿದ್ದಾಪುರ ಪೊಲೀಸ್ ಠಾಣೆಗೆ ಬಂದರೆ ಅಲ್ಲಿ ಕೆರೆಭೇಟೆ ರಾದ್ಧಾಂತದ ಕಾರಣಕ್ಕೆ ಬಂಧಿತರಾವರ ಜೊತೆ ಶಿಕಾರಿಪುರದ ಚಂದ್ರು ಸೇರಿದ್ದರು.
ಈ ಬಗ್ಗೆ ಆತಂಕಗೊಂಡ ಚಂದ್ರು ಪತ್ನಿ ತನ್ನ ಇಬ್ಬರು ಚಿಕ್ಕ ಮಕ್ಕಳು,ವಯೋವೃದ್ಧ ತಾಯಿಯೊಂದಿಗೆ ಪೊಲೀಸ್ ಠಾಣೆ ಎದುರು ನಿಂತು ಅಳತೊಡಗಿದ್ದರು. ಈ ಸಂದರ್ಭದಲ್ಲಿ ಬಂದ ಪತ್ರಕರ್ತರು ಗಾಯಗೊಂಡಿದ್ದ ಪಿಎಸ್.ಆಯ್. ಹನುಮಂತಪ್ಪ ಕುಂಬಾರ ಬಳಿ ವಾಸ್ತವ ತಿಳಿಸಿದಾಗ ಅವರು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ವಿಚಾರಣೆ ನಂತರ ಚಂದ್ರು ರನ್ನು ಬಿಡುಗಡೆ ಮಾಡಿದರು. ಹೀಗೆ ಗಲಾಟೆ ನಂತರ ನೋವಿನ ಸಂದರ್ಭದಲ್ಲೂ ಪೊಲೀಸರು ನಿರಪರಾಧಿಗಳನ್ನು ಬಂಧಿಸದೆ ಮಾನವೀಯತೆ ಮೆರೆದ ವಿಷಯ ಸುದ್ದಿಯಾಗಲಿಲ್ಲ.