ಕೃಷಿಕರ ಭೂಮಿಯ ಪಹಣಿ ಪತ್ರಿಕೆಯಲ್ಲಿ ಕರ್ನಾಟಕ ಸರಕಾರವೆಂದು ನಮೂದಾಗಿದ್ದರಿಂದ ರೈತರಿಗೆ ಹಲವಾರು ತೊಂದರೆ ಉಂಟಾಗುತ್ತಿದ್ದು ತಿದ್ದುಪಡಿ ಮಾಡುವಂತೆ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರಿಗೆ ಸಾರ್ವಜನಿಕ ಹಿತಾಸಕ್ತಿ
ಹೋರಾಟಗಾರರ ವೇದಿಕೆ (ರಿ) ವತಿಯಿಂದ ಮನವಿ ನೀಡಿದರು
ಕರ್ನಾಟಕ ರಾಜ್ಯದಲ್ಲಿ ಅದರಲ್ಲಿಯೂ ಉತ್ತರ ಕರ್ನಾಟಕದ, ಉತ್ತರ ಕನ್ನಡ ಜಿಲ್ಲೆಯಲ್ಲಿಯ ಹಲವಾರು ಕೃಷಿಕರ ಪಹಣಿ ಪತ್ರಿಕೆಯ ಕಾಲಂ ನಂ.9 ರಲ್ಲಿ ಕರ್ನಾಟಕ ಸರಕಾರವೆಂದು ನಮೂದಾಗಿದ್ದು ಇರುತ್ತದೆ. ರೈತರೇ ಆಗಿದ್ದ ಇವರುಗಳ ಪಹಣಿಯಲ್ಲಿ ಕರ್ನಾಟಕ ಸರಕಾರ ಎಂದು ನಮೂದಾಗಿದ್ದರಿಂದ ಸರಕಾರದಿಂದ ಯಾವ ಪ್ರಯೋಜನ ಸಿಗುತ್ತಲಿಲ್ಲ. ಭೂಮಿಯನ್ನು ಅಭಿವೃದ್ಧಿ ಪಡಿಸಲು ಸಾಲ ಸಿಗುವುದಿಲ್ಲ. ಹಾಗೂ ಹಿಸ್ಸೆ ವಾಂಟಣಿಗೆ ಮಾಡಿಕೊಳ್ಳಲು ಬರುವುದಿಲ್ಲ. ಡೀಡು ವತ್ತೆ ಮಾಡಲು ಮಾರಾಟ ಮಾಡಲು ಬರುವುದಿಲ್ಲ ಎಂದು ಸರಕಾರಿ ಅಧಿಕಾರಿಗಳು ಬಾಯಿ ಮಾತಿನಲ್ಲಿ ತಿಳಿಸುತ್ತಲಿದ್ದಾರೆ. ಅದು ಶಾಸನ ಸಭೆಯಲ್ಲಿ ಶಾಸನವಾಗಿ ಮಾರ್ಪಾಡಾಗಬೇಕೆಂದು ಕಳೆದ 15-20 ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ. ಈ ಬಗ್ಗೆ ಹಲವಾರು ರೈತರು ಸರ್ಕಾರಕ್ಕೆ ಭಿನ್ನ ವತ್ತಳೆಗಳ ಮೂಲಕ ಕೇಳಿಕೊಂಡಿದ್ದು ಯಾವುದೇ ಪ್ರಯೋಜನವಾಗಿರುವುದಿಲ್ಲ. ನಮ್ಮ ಸಂಸ್ಥೆಯು ಈ ವಿಷಯದಲ್ಲಿ ಈ ಹಿಂದೆ ಪ್ರಯತ್ನಿಸಿದರೂ ಪ್ರಯೋಜನ ಬಾರದೇ ಇರುವುದರಿಂದ ಈಗ ತಮ್ಮೆಲ್ಲರ ಸಹಕಾರದಿಂದ ಒಗ್ಗೂಡಿ
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳಲ್ಲಿ ಒತ್ತಡ ತಂದು ಹೋರಾಟ ಮಾಡುವುದೊಂದೇ ದಾರಿ ಎಂದು ಮನಗಂಡು ಈ ವಿಷಯದಲ್ಲಿ ತಜ್ಞರಾದ ಹಿರಿಯ ನ್ಯಾಯವಾದಿಗಳು, ಮಾಜಿ ಭೂ ನ್ಯಾಯಮಂಡಳಿಯ ಸದಸ್ಯರುಗಳು ನಿವೃತ್ತ ಅಧಿಕಾರಿಗಳನ್ನೊಳಗೊಂಡ ಸಂಘಟನೆಯನ್ನು ಮಾಡಿಕೊಂಡು ಹೋರಾಟಕ್ಕೆ ಇಳಿಯಬೇಕಾದ್ದು ಅನಿವಾರ್ಯವಾಗಿದೆ. ರೈತರ ಪಹಣಿಯಲ್ಲಿ ಮೂಲ ಗೇಣಿದಾರ , ಡಿಕ್ಲರೇಷನ್ ತಿರಸ್ಕೃತರಾದವರು ಡಿಕ್ಲರೇಶನ್ ಕೊಡದೇ ಇದ್ದವರು ಫಾರ ನಂ 7 ಹಾಗೂ 7ಎ , ಫಾರಂ ನಂ 7ಎ ನ್ನು ತುಂಬಿ ತೀರ್ಮಾನವಾಗಿ ಇನ್ನೂ ಖಾತೆಗೆ ಹೆಸರು ಬರೆದೇ ಇರುವವರು ರೈತರ ಯುನಿಟ್ ಮೀರಿ ತಿರಸ್ಕೃತರಾದವರ ಸಮಸ್ಯೆಗಳು ಇರುತ್ತವೆ. ರೈತರು ಈಗ 15-20 ವರ್ಷಗಳಿಂದ ಈ ತರಹದ ತೊಂದರೆಗಳನ್ನು ಅನುಭವಿಸುತ್ತಲಿದ್ದು ರೈತರ ಸ್ಥಿತಿ ಚಿಂತಾಜನಕವಾಗಿದೆ. ಅದರಲ್ಲಿ ಇವರುಗಳ ಹಿರಿಯರು ಮೃತರಾದ ಮೇಲೆ ಉಳಿದವರಿಗೆ ಸರಳ ವಾರಸಾ ಮಾಡಲು ಸಹ ಬರುವುದಿಲ್ಲ. ಕಾರಣ ತಾವು ಈ ಬಗ್ಗೆ ಮುತುವರ್ಜಿವಹಿಸಿ (ತೊಡಕಾಗಿರುವ ಕಾನೂನನ್ನು) ಶೀಘ್ರ ತಿದ್ದುಪಡಿ ಮಾಡಲು ವಿನಂತಿಸುತ್ತೇವೆ. ಈ ಸಂದರ್ಭದಲ್ಲಿ
ಅಧ್ಯಕ್ಷರು ಕರ್ನಾಟಕ ಸಾರ್ವಜನಿಕ ಹಿತಾಸಕ್ತಿ
ಹೋರಾಟಗಾರರ ವೇದಿಕೆ ಯ ಅಧ್ಯಕ್ಷ ರಾದ
ಎಸ್.ಎ ಪಾಟೀಲ ಬಂದೀಸರ ಹಾಗೂ ರೈತರು ಉಪಸ್ಥಿತರಿದ್ದರು