public intrest -ಕರ್ನಾಟಕ ಸರ್ಕಾರದ್ದೇ ದೊಡ್ಡ ಸಮಸ್ಯೆ!

ಕೃಷಿಕರ ಭೂಮಿಯ ಪಹಣಿ ಪತ್ರಿಕೆಯಲ್ಲಿ ಕರ್ನಾಟಕ ಸರಕಾರವೆಂದು ನಮೂದಾಗಿದ್ದರಿಂದ ರೈತರಿಗೆ ಹಲವಾರು ತೊಂದರೆ ಉಂಟಾಗುತ್ತಿದ್ದು ತಿದ್ದುಪಡಿ ಮಾಡುವಂತೆ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರಿಗೆ ಸಾರ್ವಜನಿಕ ಹಿತಾಸಕ್ತಿ
ಹೋರಾಟಗಾರರ ವೇದಿಕೆ (ರಿ) ವತಿಯಿಂದ ಮನವಿ ನೀಡಿದರು




ಕರ್ನಾಟಕ ರಾಜ್ಯದಲ್ಲಿ ಅದರಲ್ಲಿಯೂ ಉತ್ತರ ಕರ್ನಾಟಕದ, ಉತ್ತರ ಕನ್ನಡ ಜಿಲ್ಲೆಯಲ್ಲಿಯ ಹಲವಾರು ಕೃಷಿಕರ ಪಹಣಿ ಪತ್ರಿಕೆಯ ಕಾಲಂ ನಂ.9 ರಲ್ಲಿ ಕರ್ನಾಟಕ ಸರಕಾರವೆಂದು ನಮೂದಾಗಿದ್ದು ಇರುತ್ತದೆ. ರೈತರೇ ಆಗಿದ್ದ ಇವರುಗಳ ಪಹಣಿಯಲ್ಲಿ ಕರ್ನಾಟಕ ಸರಕಾರ ಎಂದು ನಮೂದಾಗಿದ್ದರಿಂದ ಸರಕಾರದಿಂದ ಯಾವ ಪ್ರಯೋಜನ ಸಿಗುತ್ತಲಿಲ್ಲ. ಭೂಮಿಯನ್ನು ಅಭಿವೃದ್ಧಿ ಪಡಿಸಲು ಸಾಲ ಸಿಗುವುದಿಲ್ಲ. ಹಾಗೂ ಹಿಸ್ಸೆ ವಾಂಟಣಿಗೆ ಮಾಡಿಕೊಳ್ಳಲು ಬರುವುದಿಲ್ಲ. ಡೀಡು ವತ್ತೆ ಮಾಡಲು ಮಾರಾಟ ಮಾಡಲು ಬರುವುದಿಲ್ಲ ಎಂದು ಸರಕಾರಿ ಅಧಿಕಾರಿಗಳು ಬಾಯಿ ಮಾತಿನಲ್ಲಿ ತಿಳಿಸುತ್ತಲಿದ್ದಾರೆ. ಅದು ಶಾಸನ ಸಭೆಯಲ್ಲಿ ಶಾಸನವಾಗಿ ಮಾರ್ಪಾಡಾಗಬೇಕೆಂದು ಕಳೆದ 15-20 ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ.  ಈ ಬಗ್ಗೆ ಹಲವಾರು ರೈತರು ಸರ್ಕಾರಕ್ಕೆ ಭಿನ್ನ ವತ್ತಳೆಗಳ ಮೂಲಕ ಕೇಳಿಕೊಂಡಿದ್ದು ಯಾವುದೇ ಪ್ರಯೋಜನವಾಗಿರುವುದಿಲ್ಲ.  ನಮ್ಮ ಸಂಸ್ಥೆಯು ಈ ವಿಷಯದಲ್ಲಿ ಈ ಹಿಂದೆ ಪ್ರಯತ್ನಿಸಿದರೂ ಪ್ರಯೋಜನ ಬಾರದೇ ಇರುವುದರಿಂದ ಈಗ ತಮ್ಮೆಲ್ಲರ ಸಹಕಾರದಿಂದ ಒಗ್ಗೂಡಿ 

ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳಲ್ಲಿ ಒತ್ತಡ ತಂದು ಹೋರಾಟ ಮಾಡುವುದೊಂದೇ ದಾರಿ ಎಂದು ಮನಗಂಡು ಈ ವಿಷಯದಲ್ಲಿ ತಜ್ಞರಾದ ಹಿರಿಯ ನ್ಯಾಯವಾದಿಗಳು, ಮಾಜಿ ಭೂ ನ್ಯಾಯಮಂಡಳಿಯ ಸದಸ್ಯರುಗಳು ನಿವೃತ್ತ ಅಧಿಕಾರಿಗಳನ್ನೊಳಗೊಂಡ ಸಂಘಟನೆಯನ್ನು ಮಾಡಿಕೊಂಡು ಹೋರಾಟಕ್ಕೆ ಇಳಿಯಬೇಕಾದ್ದು ಅನಿವಾರ್ಯವಾಗಿದೆ. ರೈತರ ಪಹಣಿಯಲ್ಲಿ ಮೂಲ ಗೇಣಿದಾರ , ಡಿಕ್ಲರೇಷನ್ ತಿರಸ್ಕೃತರಾದವರು ಡಿಕ್ಲರೇಶನ್ ಕೊಡದೇ ಇದ್ದವರು ಫಾರ ನಂ 7 ಹಾಗೂ 7ಎ , ಫಾರಂ ನಂ 7ಎ ನ್ನು ತುಂಬಿ ತೀರ್ಮಾನವಾಗಿ ಇನ್ನೂ ಖಾತೆಗೆ ಹೆಸರು ಬರೆದೇ ಇರುವವರು ರೈತರ ಯುನಿಟ್ ಮೀರಿ ತಿರಸ್ಕೃತರಾದವರ ಸಮಸ್ಯೆಗಳು ಇರುತ್ತವೆ. ರೈತರು ಈಗ 15-20 ವರ್ಷಗಳಿಂದ ಈ ತರಹದ ತೊಂದರೆಗಳನ್ನು ಅನುಭವಿಸುತ್ತಲಿದ್ದು ರೈತರ ಸ್ಥಿತಿ ಚಿಂತಾಜನಕವಾಗಿದೆ. ಅದರಲ್ಲಿ ಇವರುಗಳ ಹಿರಿಯರು ಮೃತರಾದ ಮೇಲೆ ಉಳಿದವರಿಗೆ ಸರಳ ವಾರಸಾ ಮಾಡಲು ಸಹ ಬರುವುದಿಲ್ಲ. ಕಾರಣ ತಾವು ಈ ಬಗ್ಗೆ ಮುತುವರ್ಜಿವಹಿಸಿ (ತೊಡಕಾಗಿರುವ ಕಾನೂನನ್ನು) ಶೀಘ್ರ ತಿದ್ದುಪಡಿ ಮಾಡಲು ವಿನಂತಿಸುತ್ತೇವೆ. ಈ ಸಂದರ್ಭದಲ್ಲಿ

ಅಧ್ಯಕ್ಷರು ಕರ್ನಾಟಕ ಸಾರ್ವಜನಿಕ ಹಿತಾಸಕ್ತಿ
ಹೋರಾಟಗಾರರ ವೇದಿಕೆ ಯ ಅಧ್ಯಕ್ಷ ರಾದ
ಎಸ್.ಎ ಪಾಟೀಲ ಬಂದೀಸರ ಹಾಗೂ ರೈತರು ಉಪಸ್ಥಿತರಿದ್ದರು

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *