ಕಾನಗೋಡ್ ಕೆರೆಭೇಟೆ, ಬಿಜೆಪಿ ವಿರುಧ್ಧ ಕಾಂಗ್ರೆಸ್ ವಾಕ್ ಸಮರ

ಸಿದ್ದಾಪುರ: ಕಾನಗೋಡ ಕೆರೆ ಬೇಟೆಯಲ್ಲಿ ನಡೆದ ಗಲಾಟೆಗೆ ಕ್ಷೇತ್ರದ ಶಾಸಕರೆ ನೇರ ಹೊಣೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ನೀಡಿರುವ ಹೇಳಿಕೆ ಅತ್ಯಂದ ಹಾಸ್ಯಾಸ್ಪದವಾಗಿದೆ ಎಂದು ಪಟ್ಟಣ ಪಂಚಾಯತ ಸದಸ್ಯ ಮಾರುತಿ ನಾಯ್ಕ ತಿರುಗೇಟು ನೀಡಿದರು.
ಪಟ್ಟಣದ ಗಂಗಾಬಿಕಾ ದೇವಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮೇ ತಿಂಗಳಲ್ಲಿ ಸಾಮಾನ್ಯವಾಗಿ ಕೆರೆ ಬೇಟೆ ನಡೆಯುತ್ತದೆ. ಪ್ರತಿಯೊಂದು ಗ್ರಾಮದಲ್ಲಿಯೂ ಕೆರೆ ಬೇಟೆ ನಡೆಯುತ್ತದೆ. ಇದರಲ್ಲಿ ಕೆಲವೊಬ್ಬರಿಗೆ ಮೀನು ಸಿಗದೆ ಕೆಲವು ಕಡೆಗಳಲ್ಲಿ ಗಲಾಟೆ ಮಾಡಿಕೊಂಡು ಹೋಗಿದ್ದಾರೆ. ಆದರೆ ಕಾನಗೋಡ ಕೆರೆ ಬೇಟೆಯಲ್ಲಿ ಮೀನು ಸಿಗದೆ ಇದ್ದವರು ಗಲಾಟೆ ಮಾಡಿಕೊಂಡು ಹೋಗಿದ್ದರೆ ಚಿಂತೆ ಇಲ್ಲವಾಗಿತ್ತು. ಕೆರೆಗಿಳಿಯದ ಜನ ಅಂಗಡಿಯ ಸೆಟರ್ಸ್ ಗಳನ್ನು ಒಡೆದು ನಂತರ ಮನೆಗೆ ನುಗ್ಗಿ ಎಲ್ಲಾ ದರೋಡೆ ಮಾಡಿದ್ದಾರೆ. ಕೆರೆ ಬೇಟೆಗೆ ಬಂದು ಗಲಾಟೆ ಮಾಡಿದವರ ಉದ್ದೇಶ ಏನಿತ್ತು ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಶಾಸಕರ ಬಗ್ಗೆ ನೀಡಿರುವ ಹೇಳಿಕೆ ಹಾಸ್ಯಾಸ್ಪದ ವಾಗಿರುವ ಜೊತೆಗೆ ಶಾಸಕರು ಕಾನಗೋಡ ಗ್ರಾಮಕ್ಕೆ ಭೇಟಿ ನೀಡಿದ್ದು ಸತ್ತವರ ಮನೆಗೆ ಸಾಂತ್ವನ ಹೇಳಲಿಕ್ಕೆ ಬಂದಂತಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಶಾಸಕರ ಜೊತೆಗೆ ನಾವು ಮೊನ್ನೆ ಗ್ರಾಮಕ್ಕೆ ಭೇಟಿ ನೀಡಿದಾಗ ಇಡೀ ಗ್ರಾಮದಲ್ಲಿ ಮೌನ ಆವರಿಸಿತ್ತು. ಇಂತಹ ಸಮಯದಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಅವರಿಗೆ ಸಾಂತ್ವನ ಹಾಗೂ ಧೈರ್ಯ ಹೇಳುವುದು ಜನಪ್ರತಿನಿಧಿಯಾದವರ ಕರ್ತವ್ಯವಾಗಿತ್ತು. ಅದನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿದ್ದಾರೆ. ಹಾಗಾದರೆ ಭೀಮಣ್ಣ ನಾಯ್ಕ ಮತ್ತು ವಸಂತ ನಾಯ್ಕ ಶಾಸಕರ ಭೇಟಿಗೂ ಮೊದಲನೇ ದಿನ ಈ ಗ್ರಾಮಕ್ಕೆ ಭೇಟಿ ನೀಡಿರುವುದು ಯಾವ ಉದ್ದೇಶಕ್ಕೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಹಾಗಾದರೆ ಇವರುಗಳು ಸಾಂತ್ವಾನ ಹೇಳಲಿಕ್ಕೆ ಹೋಗಿದ್ದರೊ ಅಥವಾ ಬೇರೆ ಕಾರಣಕ್ಕೆ ಹೋಗಿದ್ದರು ಎಂಬುದು ನಾವು ಕಂಡುಕೊಳ್ಳಬೇಕಾಗಿದೆ. ಇವರಿಗೆ ಕಾನಗೋಡ ಗ್ರಾಮ ಹಾಗೂ ತಾಲೂಕಿನ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದೆ ಎಂದಾದರೆ ಅಲ್ಲಿ ನಡೆದ ಅಹಿತಕರ ಘಟನೆ, ದರೋಡೆ ಕೃತ್ಯದ ಬಗ್ಗೆ ಖಂಡಿಸಬೇಕಾಗಿತ್ತು. ಆರೋಪಿತರನ್ನು ಶೀಘ್ರದಲ್ಲಿ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ಸೂಚನೆಯನ್ನು ಕೊಟ್ಟಿದ್ದರೆ ನಾವು ಸಹ ಖುಷಿ ಪಡುತ್ತಿದ್ದೆವು. ಆದರೆ ಅದನ್ನು ಬಿಟ್ಟು ಗೌರವಯುತ ಹುದ್ದೆಯಲ್ಲಿರುವ ಸ್ಪೀಕರ್ ರವರನ್ನು ಈ ವಿಷಯಕ್ಕೆ ಎಳೆದಿರುವುದು ಅಷ್ಟೊಂದು ಸಮಂಜಸವಲ್ಲ ಎಂದರು.

ಚರ್ಚೆಗೆ ಗ್ರಾಸವಾದ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್!

ಆಗಾಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಭಾನುವಾರ ಮಾಡಿರುವ ಟ್ವೀಟ್ ವೊಂದು ನೆಟ್ಟಿಗರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 

Subramanian_swamy1

ನವದೆಹಲಿ: ಆಗಾಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಭಾನುವಾರ ಮಾಡಿರುವ ಟ್ವೀಟ್ ವೊಂದು ನೆಟ್ಟಿಗರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿರ್ವಹಿಸದ ಕಾರಣಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿ ಕುರಿತಾದ ವರದಿಯೊಂದನ್ನು ಉಲ್ಲೇಖಿಸಿರುವ ಸುಬ್ರಮಣಿಯನ್ ಸ್ವಾಮಿ, ಅದು ಸಂಭವಿಸಿದ್ದಲ್ಲಿ ಒಬ್ಬರು ಕೆಳಗಿಳಿಯಲಿದ್ದಾರೆ ಮತ್ತಿಬ್ಬರು ಅದೇ ಹಾದಿ ಹಿಡಿಯಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಆ ಇಬ್ಬರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇರಬಹುದೇ ಎಂದು ನೆಟ್ಟಿಗರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. 


ಪಪಂ ಸದಸ್ಯ ಗುರುರಾಜ ಶಾನಬಾಗ್ ಮಾತನಾಡಿ, ಸಾಂತ್ವನ ಎನ್ನುವುದು ಯಾರು ಕಷ್ಟದಲ್ಲಿ ಅಥವಾ ನೋವಿನಲ್ಲಿ ಇದ್ದಾರೋ ಅವರಿಗೆ ಸಾಂತ್ವನ ಹೇಳುವುದು ಮಾನವೀಯತೆ. ಅಂತಹದರಲ್ಲಿ ಕ್ಷೇತ್ರದ ಶಾಸಕರು ಆ ಜಾಗಕ್ಕೆ ಸಾಂತ್ವನವನ್ನು ಹೇಳುವುದರ ಜೊತೆ ಜೊತೆಗೆ ಅಲ್ಲಿ ಸಂತ್ರಸ್ತರಿಗೆ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡಿದ್ದಾರೆ. ಆಕಸ್ಮಿಕವಾಗಿ ಕೆಟ್ಟ ಘಟನೆ ನಡೆದುಹೋಗಿದೆ ನಾವೆಲ್ಲರೂ ಸೇರಿ ಅದನ್ನು ಎದುರಿಸೋಣ. ಕಾನೂನು ಅಡಿಯಲ್ಲಿ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತಾರೆ. ಎರಡೂ ಕಡೆಗಳಿಂದಲೂ ಎಫ್ಐಆರ್ ಆಗಿದೆ. ಆದರೆ ನಿಮ್ಮ ನಿಮ್ಮಲ್ಲಿ ವೈಮನಸ್ಸು ಇಟ್ಟುಕೊಳ್ಳದೆ, ಗೊಂದಲ ಮಾಡಿಕೊಂಡು ಹೊಸ ವಿವಾದವನ್ನು ಸೃಷ್ಟಿ ಮಾಡಬೇಡಿ. ಹಾಗೇನಾದರೂ ಸಮಸ್ಯೆ ಇದ್ದಲ್ಲಿ ನಮಗೆ ತಿಳಿಸಿ ನಿಮ್ಮ ಜೊತೆ ನಾವಿದ್ದೇವೆ. ದೇವಸ್ಥಾನ ಕಮಿಟಿಯವರು ಈಶ್ವರ ದೇವಸ್ಥಾನದ ಕಟ್ಟಡದ ಕಾರ್ಯ ಒಳ್ಳೆಯ ರೀತಿಯಿಂದ ಆಗಲಿ ಎಂಬ ಉದ್ದೇಶದಿಂದ ಕೆರೆ ಬೇಟೆಯನ್ನು ಆಯೋಜಿಸಿದ್ದರು. ದೇವಸ್ಥಾನ ಆಡಳಿತ ಮಂಡಳಿಯವರಿಗೂ ಸಹ ಕೆರೆಯಲ್ಲಿ ಬಹಳಷ್ಟು ಮೀನುಗಳು ಇರಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಮೀನು ಸಿಗದೇ ಜನಾಕ್ರೋಶ ಸಂಘಟಕರು ಹಾಗೂ ಅಂಗಡಿ-ಮನೆಗಳ ಮೇಲೆ ತಿರುಗಿದ್ದು ಸರಿಯಲ್ಲ. ಶಾಸಕರು ಈಗಾಗಲೇ ಸರ್ಕಾರದಿಂದ ಈಶ್ವರ ದೇವಾಲಯದ ಕಟ್ಟಡಕ್ಕಾಗಿ ಸಹಾಯವನ್ನು ಮಾಡಿದ್ದಾರೆ. ಮುಂದೆ ಎಲ್ಲರೂ ಸೇರಿ ದೇವಸ್ಥಾನದ ಕಟ್ಟಡವನ್ನು ಪೂರ್ಣಗೊಳಿಸೋಣ ಎಂದು ಭರವಸೆ ನೀಡಿದ್ದಾರೆ. ಈ ಎಲ್ಲ ಸಂಗತಿಗಳನ್ನು ಮರೆಮಾಚಿ ಶಾಸಕರು ಕಾನಗೋಡ್ ಗ್ರಾಮಕ್ಕೆ ಭೇಟಿ ನೀಡಿದ್ದೇ ತಪ್ಪು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ತಾಲೂಕಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಅತಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಶಾಸಕರ ಮೇಲೆ ಯಾವುದೇ ರೀತಿಯ ಆರೋಪ ಮಾಡಲು ಸಿಗದೆ ಅಸಹನೆಯ ಕಾರಣದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕ ಹೇಳಿಕೆಯನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ. ನೊಂದಂತವರಿಗೆ ಮತ್ತೆ ಆಕ್ರೋಶವನ್ನು ಹುಟ್ಟಿಸುವಂತ ಕೆಲಸವನ್ನು ಜನಪ್ರತಿನಿಧಿಗಳಾಗಲಿ, ಸಾರ್ವಜನಿಕ ಜೀವನದಲ್ಲಿರುವವರಾಗಲಿ ಮಾಡಬಾರದು ಎಂದರು.
ಈ ವೇಳೆ ಪಟ್ಟಣ ಪಂಚಾಯತ ಸದಸ್ಯ ನಂದನ ಬೋರಕರ್, ನಾಮನಿರ್ದೇಶಿತ ಸದಸ್ಯರಾದ ಸುರೇಶ ನಾಯ್ಕ, ಮಂಜು ಭಟ್, ರಾಜೇಂದ್ರ ಕಿಂದ್ರಿ, ಪ್ರಮುಖರಾದ ತೋಟಪ್ಪ ನಾಯ್ಕ, ಬಿ. ವೆಂಕಟೇಶ ಹೊಸೂರ, ದಯಾನಂದ ಕಡಕೇರಿ, ಎ.ಜಿ.ನಾಯ್ಕ ಕಡಕೇರಿ, ರೋಹಿದಾಸ ಮಡಿವಾಳ ಉಪಸ್ಥಿತರಿದ್ದರು.

ಸಿದ್ದಾಪುರ ತಾಲೂಕಿನ ಕಾನಗೋಡು ಕೆರೆ ಬೇಟೆ ಸಂದರ್ಭದಲ್ಲಾದ ಘಟನೆಗೆ ಸಭಾಧ್ಯಕ್ಷರು ಕಾರಣರಾಗಿದ್ದಾರೆ ಅವರು ಜವಾಬ್ದಾರಿ ಯಿಂದ ಹಾನಿ ಯಾದವರಿಗೆ ಸರಕಾರ ದಿಂದ ಪರಿಹಾರ ಒದಗಿಸಬೇಕು ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ನಾಯ್ಕ ಹೇಳಿದರು
ಅವರು ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಕಾನಗೋಡು ಕೆರೆ ಬೇಟೆಯ ಬಗ್ಗೆ ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳ ಮೊದಲೇ ಪ್ರಚಾರ ನಡೆದಿತ್ತು ಇದೊಂದು ಸಾಂಸ್ಕೃತಿಕ ಕ್ರೀಡೆ ಎಲ್ಲಿ ಎಷ್ಟು ಜನ ಸೇರುತ್ತಾರೆ ಎನ್ನುವುದರ ಬಗ್ಗೆ ಶಾಸಕರು ಹಾಗೂ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಿಳಿದಿರಬೇಕಾಗಿತ್ತು, ಅದಕ್ಕೆ ಸಂಬಂಧಪಟ್ಟಂತೆ ವ್ಯವಸ್ಥೆಯನ್ನು ಅಣಿಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ಸೂಚನೆ ನೀಡಬೇಕಾಗಿತ್ತು ಇದ್ಯಾವುದರ ಬಗ್ಗೆ ಚಿಂತಿಸದ ಸಭಾಧ್ಯಕ್ಷರು ಘಟನೆ ನಡೆದು ಮೂರ್ನಾಲ್ಕು ದಿನಗಳ ನಂತರ ಸ್ಥಳಕ್ಕೆ ಭೇಟಿ ನೀಡಿ ಸತ್ತವರ ಮನೆಗೆ ಹೋಗಿ ಸಾಂತ್ವನ ಹೇಳುವ ರೀತಿಯಲ್ಲಿ ಅವರನ್ನು ಸಮಾಧಾನಿಸಿದರೇ ಹೊರತು ಅವರಿಗೆ ಸೂಕ್ತ ಪರಿಹಾರದ ವ್ಯವಸ್ಥೆ ಮಾಡಲಿಲ್ಲ ಗಲಾಟೆಯಿಂದ ಹಾನಿಗೊಳಗಾದ ಅಂಗಡಿಕಾರರಿಗೆ ಹಾಗೂ ಮನೆಯವರಿಗೆಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.


ಅಧಿಕಾರಿಗಳಿಗೆ ಜವಾಬ್ದಾರಿ ಇರಬೇಕು ಇಂತಹ ಅಹಿತಕರ ಘಟನೆ ನಡೆಸುವುದು ತಪ್ಪಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕಿತ್ತು ಇದ್ಯಾವುದನ್ನು ಮಾಡದೆ ಇರುವುದರಿಂದ ಈ ಘಟನೆ ಸಂಭವಿಸಿದೆ ಘಟನೆಯಲ್ಲಿ ಅಂಗಡಿಕಾರರಿಗೆ ಆದ ನಷ್ಟವನ್ನು ತುಂಬಿ ಕೊಡಬೇಕು ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಪ್ರತಿನಿಧಿಗಳು ಮತ್ತು ಅಧಿಕಾರಿಗಳು
ಕ್ರಮಕೈಗೊಳ್ಳ ಬೇಕು ಎಂದರು
ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಶವಾಗಾರದ ಪೋಸ್ಟ್ಮಾರ್ಟಮ್ ಮಾಡಲಿಕ್ಕೆ ಪರ ಊರವರನ್ನು ತರಬೇಕು ಇದರಿಂದ ಅವರಿಗೆ ಹಣ ನೀಡಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ ಒಬ್ಬ ಸಿಬ್ಬಂದಿಯನ್ನು ನೇಮಿಸಬೇಕು ಶವ ಸಾಗಿಸಲು ಒಂದು ಅಂಬುಲೆನ್ಸ್ ಒದಗಿಸ ಬೇಕು ಸೀಜರ್ ವ್ಯವಸ್ಥೆಯನ್ನು ಮಾಡುವಂತೆ ಅವರು ಆಗ್ರಹಿಸಿದರು
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸೀಮಾ ಹೆಗಡೆ ಮುಖಂಡರಾದ ಸಿಆರ್ ನಾಯ್ಕ್ ಮಾರುತಿ ಕಿಂದ್ರಿ , ಮನೋಹರ ಗುರ್ಕಾರ್, ಅಬ್ದುಲ್ ಸಾಬ್, ಸುರೇಂದ್ರ ಗೌಡ, ಎ ಬಿ ನಾಯ್ಕ ಕಡಕೇರಿ ಮುಂತಾದವರು , ಉಪಸ್ಥಿತರಿದ್ದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *