gts colume-ಶ್ರೇಷ್ಠತೆಯ ವ್ಯಸನ ಕಹಿ ಸತ್ಯ……

ಘಟನೆ–01

ಎಲ್ ಬಿ ಕಾಲೇಜಿನಲ್ಲಿ ಪಾಠ ಮಾಡುತ್ತಾ ಇದ್ದೆ. ಬಿ ಕಾಂ ತರಗತಿ. ಸಂವಿಧಾನ ವಿಷಯದಲ್ಲಿ ಮೂಲಭೂತ ಹಕ್ಕುಗಳಲ್ಲಿ ಸಮಾನತೆ ಮತ್ತು ಮೀಸಲಾತಿಯ ಬಗ್ಗೆ ವಿವರಣೆ ಕೊಡುತ್ತಾ ಇದ್ದಾಗ ಒಬ್ಬ ವಿದ್ಯಾರ್ಥಿ ಎದ್ದು ‘ಜಾತಿ ಎಲ್ಲಿದೆ..?’ ಅಂದ. ಆತನಿಗೆ ಇನ್ನೆರೆಡು ಜನ ಬೆಂಬಲ ಕೊಟ್ಟು. ” ನಮ್ಮ ಅಜ್ಜನ ಕಾಲದಲ್ಲಿ ಇದ್ದಿತ್ತು, ನಮ್ಮ ಮನೆಯಲ್ಲಿ ಈಗ ಇಲ್ಲ, ಮೀಸಲಾತಿ ಏಕೆ ಕೊಡಬೇಕು, ಸಮಾನತೆ ಎಲ್ಲಿದೆ..?” ಎಂದು ವಾದ ಮುಂದುವರಿಸಿದ. (ಆತನ ವಾದದ ಹಿಂದೆ ಕೆಲ ಕರ್ಮಠ ಉಪನ್ಯಾಸಕರ ಕುತಂತ್ರ ಇತ್ತು). ದೇಶ ಹಿಂದುಳಿಯಲು ಮೀಸಲಾತಿ ಕಾರಣ ಅಂದ…!

“ಅಲ್ಲಯ್ಯ.. ಮೀಸಲಾತಿ ಬಂದದ್ದು ಸ್ವಾತಂತ್ರ್ಯ ನಂತರ. ಅದಕ್ಕೂ ಮೊದಲು ಈ ದೇಶ ಸರ್ವ ಸಮಾನತೆಯ ಅಭಿವೃದ್ಧಿ ಹೊಂದಿದ ಎಲ್ಲ ಜಾತಿ ಜನಾಂಗದವರನ್ನು ಮನುಷ್ಯರನ್ನ ಮನುಷ್ಯರಂತೆ ಕಾಣುವ ವ್ಯವಸ್ಥೆ ಇತ್ತೇನಯ್ಯ..?” ಎಂದು ಮರು ಪ್ರಶ್ನೆ ಹಾಕಿದರೆ. ಪ್ರಶ್ನೆ ಕೇಳಿದವನ ಬಳಿ ಉತ್ತರವೇ ಇಲ್ಲ.

ತರಗತಿ ಮುಂದುವರಿದು ಅವರ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸಿದೆ. ಜಾತಿಯ ಎಣಿ ಶ್ರೇಣಿ, ಹಣ ಅಧಿಕಾರ, ಭೂಮಿ, ಅಕ್ಷರಗಳು ಹಂಚಿಕೊಂಡದ್ದರ ಇತಿಹಾಸವೇ ಸಾಮಾಜಿಕ ಆರ್ಥಿಕ ಅಸಮಾನತೆಗೆ ಕಾರಣ ಎನ್ನುವುದನ್ನ ವಿವರಿಸಿದೆ. ಆದರೆ ಆ ವಿಚಾರದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳು ಕನ್ವಿನ್ಸ್ ಆದಂತೆ ಕಾಣಲಿಲ್ಲ. ಆದರೆ ತರಗತಿಯ ಒಳಗೆ ಮೌನವಾಗಿ ಕುಳಿತಿದ್ದ ಕೆಲ ವಿದ್ಯಾರ್ಥಿಗಳ ಕಣ್ಣುಗಳು ಮಾತ್ರ ಹೊಳೆಯುತ್ತಾ ಇದ್ದದ್ದನ್ನ ನಾನು ಗುರುತಿಸಿದೆ.

ಘಟನೆ- 02

ನನಗೆ ಗೊತ್ತಿರುವ ಬಡ ಕುಟುಂಬದ ಹವ್ಯಕ ಯುವಕನೊಬ್ಬ ದೂರದ ನಿಟ್ಟೂರು ಬಳಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿಬಿಟ್ಟ. ಅದೆಂಥ ಜಟಿಲ ಪ್ರಕರಣ ಆಗಿತ್ತು ಎಂದರೆ ಯುವಕನನ್ನು ಬೇಕಂತಲೇ ವಯಕ್ತಿಕ ದ್ವೇಷ ಕಾರಣ ಸಿಕ್ಕಿಸಲಾಗಿತ್ತು ಎಂದು ಸುದ್ದಿ ಆಗಿತ್ತು. ಬಹಳ ಬಡ ಕುಟುಂಬ. ಕೇಸು ಕೋರ್ಟು ಹೊಸತು. ಪ್ರಕರಣದಿಂದ ಕುಟುಂಬ ಬಹಳ ನೋವು ಅವಮಾನ ಪಟ್ಟಿತ್ತು. ಅವರದೇ ಜಾತಿಯ ದೊಡ್ಡ ದೊಡ್ಡ ಹಣವಂತರು ಊರಲ್ಲಿ ಇದ್ದರೂ ಅವರ ಮನೆ ಕಡೆ ಸುಳಿಯಲಿಲ್ಲ. ಸೀಮೆ ಪರಿಷತ್ತು ಅನ್ನೋದು ಜೋರು ಚಲಾವಣೆ ಇದ್ದ ಕಾಲ ಅದು. ಸ್ನೇಹಿತರ ಜತೆ ಆ ಯುವಕ ಇದ್ದ ಸಾಗರ ಜೈಲಿಗೆ ಎರೆಡೆರೆಡು ಬಾರಿ
ಹೋಗಿ ಆತನ ಮಾತಾಡಿಸಿ, ವಿವರಣೆ ಕೇಳಿ, ಧೈರ್ಯ ತುಂಬಿ ಅವರ ಭಾವನ ಜತೆ ಕೂತು ಮಾತಾಡಿ ವಕೀಲರ ಜತೆ ಚರ್ಚಿಸಿ ಕೊನೆಗೂ ಆತ ಜೈಲಿನಿಂದ ಹೊರ ಬಂದು ಮುಂದೆ ಕೇಸು ಖುಲಾಸೆ ಆಯ್ತು. ಆ ಕುಟುಂಬ ನನಗೆ ಇಂದಿಗೂ ಆಪ್ತ. ಅವರು ತಮ್ಮ ಜಾತಿಯವರು ಕಷ್ಟ ಕಾಲದಲ್ಲಿದ್ದಾಗ ತೋರಿದ ನಡವಳಿಕೆ ಬಗ್ಗೆ ಅಸಮಾಧಾನದಲ್ಲೇ ಇದ್ದಾರೆ. ಬಡವರಾದ ಕಾರಣ ನಮ್ಮನ್ನ ಅಸಮಾನತೆಯಿಂದ ಕಾಣುತ್ತಾರೆ ಜಾತಿಯವರೆ ಎಂಬುದು ಅವರ ನೋವು.

ಘಟನೆ- 3

ಹಿಂದುಳಿದ ಜಾತಿಗೆ ಸೇರಿದ್ದ ಅವರು ಊಟಕ್ಕೆ ಕರೆದಿದ್ದರು. ಅದು ಅವರ ಕುಟುಂಬದ ಕಾರ್ಯಕ್ರಮ. ಮಧ್ಯಾಹ್ನ ಊಟಕೆ ಹೋದರೆ ಎರೆಡು ಕಡೆ ಊಟದ ವ್ಯವಸ್ಥೆ ಮಾಡಿದ್ದರು. ಎರಡು ಕಡೆ ಸಸ್ಯಾಹಾರಿ ಊಟ ಆಗಿದ್ದರೂ ಕೂಡ ಶೂದ್ರರೇತ್ರರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮತ್ತು ಅದನ್ನು ಕಾಯಲು ಕಟ್ಟಾಳುಗಳನ್ನು ನೇಮಿಸಿದ್ದರು. ಪಂಚಾಯತ್ ನ ಪ್ರಥಮ ಪ್ರಜೆ ನಾನಾಗಿದ್ದರೂ ಅಲ್ಲಿ ದ್ವಿತೀಯ ಧರ್ಜೆ ಪ್ರಜೆ ಆಗಿದ್ದೆ. ಕಾರ್ಯಕ್ರಮ ಮುಗಿದು ವಾರದ ನಂತರ ಅವರನ್ನು ಕರೆದು ಏನಯ್ಯ ಊಟಕ್ಕೆ ಕರೆದು ಅವಮಾನ ಮಾಡ್ತಿಯಾ ಕೇಳಿದರೆ. ಅವನು ಸಲಹೆ ನೀಡಿದವರ ಹೆಸರು ಹೇಳಿದ.

ನನ್ನೆ ಗ್ರಹಿಕೆಯ ಬಿಡಿ ಘಟನೆಗಳು ಇವು ನಿನ್ನೆ ತುತ್ತನೆ ನೆನಪಾಗಲು ಕಾರಣ ನಿನ್ನೆ ನನ್ನ wa up ಗೆ ಬಂದ ಎರಡು ಪ್ರತ್ಯೇಕ ಸಂದೇಶಗಳು. ಒಬ್ಬರು ಸ್ನೇಹಿತರು ಬ್ರಾಹ್ಮಣರೇನು ಅಷ್ಟು ದುಷ್ಟರೇ..? ಎಂದು ಬರಹ ಕಳಿಸಿದ್ದರು. ಈಚೆಗೆ ಸಿನಿಮಾ ನಟಿ ಚೇತನ್ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಅವರ ಬರಹ ಇತ್ತು. ರಾಮ ಕೃಷ್ಣ ವಾಲ್ಮೀಕಿಯವರು ಕ್ಷತ್ರಿಯ ಶೂದ್ರರನ್ನ ಬ್ರಾಹ್ಮಣ ಪೂಜೆ ಮಾಡಿದ ಎಂಬರ್ಥದ ಮಾತುಗಳ ಜತೆ ಮತ್ತೆ ಶ್ರೇಷ್ಠತೆಯ ಜಪ ಇತ್ತು ಆ ಬರಹದಲ್ಲಿ. ಎರಡನೇ ಬರಹ ಗೆಳೆಯ ಶಿಕಾರಿಪುರದ ಸುರೇಶ್ ರವರದು. 1808 ರಲ್ಲಿ ಸಾಗರ ತಾಲೂಕಿನ ಹುಲಿಮನೆ ಗ್ರಾಮದ ಪಟೇಲ್ ಸುಬ್ಬಯ್ಯನವರ ತಾಮ್ರ ಶಾಸನದಲ್ಲಿ ಹುಲಿಮನೆ ಕಾಳಿ ಸುಬ್ಬಯ್ಯನ ಮಗ ಶೇಷಯ್ಯಗೆ ಶೇಷಾಚಾರ್ಯನ ಮಗ ಬೀಮಾಚಾರ್ಯನು ತನ್ನ ಹೊಲೆ ಆಳು ಚೌಡಿ ಎಂಬುವಳನ್ನು 3 ಗದ್ಯಾಣಕೆ ಮಾರಾಟ ಮಾಡಿದ ಬಗ್ಗೆ ಈ ತಾಮ್ರ ಶಾಸ ನ ಹೇಳುತ್ತದೆ. ಅಂದರೆ ಮನುಷ್ಯರನ್ನ ಕುರಿ ಕುನ್ನಿಗಳ ಹಾಗೆ ಮಾರಾಟ ಮಾಡುವ ಇತಿಹಾಸ ಇದು. ಮರಳಿ ಅದು ನಾವೇನು ತಪ್ಪು ಮಾಡಿದ್ದೇವೆ ಎಂಬ ಪ್ರಶ್ನೆಗೆ ಉತ್ತರವೂ ಆಗುತ್ತದೆ.

ಘಟನೆ ಒಂದರಲ್ಲಿ ಪ್ರಶ್ನೆ ಮಾಡುವ ಯುವ ವಿದ್ಯಾರ್ಥಿಗೆ ಇತಿಹಾಸದ ಒಳಗಿನ ಈ ಅಸಮಾನತೆ ಬಗ್ಗೆ ಅರಿವಿಲ್ಲ. ಆತನ ಕೋಪ ಪ್ರಾಮಾಣಿಕ ಆಗಿದ್ದರೂ ಅದರ ಒಳಗೆ ಇತಿಹಾಸದಿಂದ ಪಡೆಯಬೇಕಾದ ವಿವೇಕ ಇಲ್ಲ. ಹಾಗೆ ಅವನು ಪ್ರಶ್ನೆ ಮಾಡುವ ಹಾಗೆ ಅವನು ಬೆಳೆದಿದ್ದಾನೆ. ಬೆಳೆಸಿದ್ದಾರೆ.

ಇನ್ನು ಘಟನೆ 2 ರಲ್ಲಿ ಬರುವ ಪಾತ್ರಗಳು ಎಲ್ಲಾ ಕಡೆ ಸಿಗುತ್ತವೆ. ಅವರಿಗೆ ವರ್ಗ ಪ್ರಜ್ಞೆಯಿದೆ. ತಮ್ಮವರೆ ತಮ್ಮ ಶೋಷಣೆ ಮಾಡುತ್ತಾರೆ ಎಂಬ ಸಿಟ್ಟು ಇದೆ. ಮನುಷ್ಯರಂತೆ ನಮ್ಮನ್ನ ನಡೆಸಿಕೊಂಡಿಲ್ಲ ಎಂಬ ದೊಡ್ಡ ಸಿಟ್ಟಿದೆ. ಅವಕಾಶ ಸಿಕ್ಕರೆ ಅವರು ಮಾರ್ಕ್ಸ್ ವರ್ಗ ಸಂಘರ್ಷದ ಬಗ್ಗೆ ಗಂಟೆ ಗಟ್ಟಲೇ ಮಾತಾಡಬಲ್ಲರು. ಮಾತಾಡುವ ಬರದಲ್ಲೇ ಹೊರ ಜಗುಲಿಯಲ್ಲಿಯೇ ಹೊಲಯರ ಕೊಲ್ಲನ ಕೂರಿಸಿ ಅವನಿಗೆ ಎಲೆ ಮೇಲೆ ಸುಣ್ಣ ಅಂಟಿಸಿ ಕವಳ ಕೊಡುವುದು, ಆತನನ್ನು ಮುಟ್ಟುವುದು ಮೈಲಿಗೆ ಆಗುವುದು, ಜಾತಿಯ ನೆಲೆಯ ತಾರತಮ್ಯ ಮಾಡುವುದು ತಪ್ಪು ಅನ್ನಿಸುವುದಿಲ್ಲ.

ಘಟನೆ ಮೂರರಲ್ಲಿ ಬರುವ ಪಾತ್ರಗಳು. ವಾಸ್ತವವಾಗಿ ಜಾತಿಯ ಶ್ರೇಷ್ಠತೆಯ ಕಾರಣಕ್ಕೆ ನಮಗೆ ಹಾಗೊಂದು ಪ್ರತ್ಯೇಕ ಪಂಕ್ತಿ ಮಾಡಿ ಯಾರಾದ್ರೂ ಊಟಕ್ಕೆ ಕರೆದರೆ ಅಲ್ಲಿ ಹೋಗಿ ಊಟ ಮಾಡಲು ನಮಗೆ ನಾಚಿಕೆ ಆಗಬೇಕು. ಹುಟ್ಟಿನ ಆಧಾರದಲ್ಲಿ ಹೆಚ್ಚುಗಾರಿಕೆಗಿಂತ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರ ಜತೆ ಒಂದಾಗುವ ಮೇರುತನದ ಮನುಷ್ಯತ್ವದ ದಾರಿಯಲ್ಲಿ ನಡೆಯುವ ಪುಟ್ಟ ಅವಕಾಶವಾದರೂ ನನ್ನದಾಗಿಸಿಕೊಳ್ಳುವ ಎಂದು ಅಂತ ಅವಕಾಶ ತಿರಸ್ಕಾರ ಮಾಡಿ ವ್ಯಕ್ತಿತ್ವದ ಘನತೆ ಮೆರೆಯಬೇಕು. ವರ್ಗ ಸಂಘರ್ಷ ಬಗ್ಗೆ ಮಾತಾಡುವ ಘಟನೆ ಎರಡರ ವ್ಯಕ್ತಿಗಳು ಮನುಷ್ಯ ಕುಲ ಒಂದೇ ಎಂದು ಸುಧಾರಣೆ ಭಾಷಣ ಮಾಡುವವರು ಪ್ರತ್ಯೇಕ ಪಂಕ್ತಿಯಲ್ಲಿ ನೋಡುವಾಗ ಕಾಲೇಜಿನಲ್ಲಿ ವಿದ್ಯಾರ್ಥಿಗೆ ಸಾಮಾಜಿಕ ಸಮಾನತೆ ಪ್ರಶ್ನೆಗೆ ನೀಡಿದ ಉತ್ತರದ ದೃಶ್ಯ ಆಗುತ್ತದೆ.

ಶ್ರೇಷ್ಠತೆಯ ಕಾಯಿಲೆ ವಿರುದ್ದ ನಿಜವಾದ ಹೋರಾಟ ಆರಂಭ ಆಗಬೇಕಿದ್ದು ಹೊರಗಲ್ಲ ಒಳಗೆ. ಅದು ಆತ್ಮವಲೋಕನದ ಆತ್ಮ ವಿಮರ್ಶೆಯ ಹಾದಿ. ಕಳೆದ ನೂರು ವರ್ಷದಲ್ಲಿ ಅದಕ್ಕೆ ಬಹಳ ದೊಡ್ಡ ಆದರ್ಶ ಗಾಂಧಿ. ತಾನು ಎಲ್ಲಿದ್ದೇನೆ ಎಂಬುದು ನಮಗೆ ಅರ್ಥವಾದರೆ ಸಾಗಬೇಕಾದ ದಾರಿ ಕಾಣುತ್ತದೆ. ಗಾಂಧಿ ಕೋಟು ಬಿಸುಟುವುದು ಅಂಬೇಡ್ಕರ್ ಕೋಟು ಹಾಕಿ ಸಮಾಜವನ್ನು ಎದುರಾಗುವುದು ವಿರುದ್ದವೆನಿಸಿದರೂ ಅದೇ ಭಾರತ ಸಮಾಜ ಸಾಗಬೇಕಾದ ದಾರಿ ಕೂಡ.

ಹಾಗೆ ಆತ್ಮಾವಲೋಕನ ಸಾಧ್ಯ ಆಗದೇ ಇದ್ದಾಗ ಶ್ರೇಷ್ಠತೆಯನ್ನ ಅಪ್ಪಿಕೊಳ್ಳುತ್ತಾ, ಅದಕೆ ಬೇಕಾದ ಕಥೆ ಸಮರ್ಥನೆ ವಾದವನ್ನ ಬೇಯಿಸುತ್ತಾ, ಇತಿಹಾಸದ ತಪ್ಪುಗಳನ್ನು ತಿದ್ದುಕೊಳ್ಳುವ ಗೋಜಿಗೆ ಹೋಗದೇ ಹೆಚ್ಚುಗಾರಿಕೆಯ ನಂಜನ್ನು ಮುಂದಿನ ಪೀಳಿಗೆಗೆ ಬಳುವಳಿ ಕೊಟ್ಟರೆ ಕಾಲೇಜಿನಲ್ಲಿ ಜಾತಿ ಎಲ್ಲಿದೆ ಎನ್ನುವ ವಿದ್ಯಾರ್ಥಿಗಳು ಹೆಚ್ಚುತ್ತಾರೆ.

ಬ್ರಾಹ್ಮಣರೇನು ಅಷ್ಟು ರಾಕ್ಷಸರೇ ಎಂದು ಇತಿಹಾಸ ಮತ್ತು ಪುರಾಣದಲ್ಲಿ ಆಯ್ದ ಒಂದಿಷ್ಟು ಘಟನೆ ಹೆಕ್ಕಿ ವಾದ ಮಂಡಿಸಿ ಬರೆಯುವವರಿಗೆ ಗೊತ್ತಿರಬೇಕು ಈ ದೇಶ 3 ದಶಕದ ಕಾಲ ನೇತಾರಿಕೆ ನೀಡಿದ್ದು. ಈ ದೇಶ ಸಾರ್ವಕಾಲಿಕ ಆದರ್ಶ ಎಂದು ಸ್ವೀಕರಿಸಿದ ಮಹಾತ್ಮ ಗಾಂಧಿ ಹುಟ್ಟಿದ್ದು ಮೇಲ್ಜಾತಿ ಕುಟುಂಬದಲ್ಲಿಯೇ. ಅವರು ಹುಟ್ಟಿದ ಜಾತಿ ಕಾರಣಕ್ಕೆ ಅವರು ಶ್ರೇಷ್ಠ ಆಗಲಿಲ್ಲ. ಶ್ರೇಷ್ಠತೆಯ ವ್ಯಸನ ಬಿಟ್ಟು ಆತ್ಮವಿಮರ್ಶೆಯ ಸತ್ಯ ಮತ್ತು ಅಹಿಂಸೆಯ ದಾರಿ ಅವರನ್ನ ಚರಿತ್ರೆಯಾಗಿ ಉಳಿಸಿದೆ.

ಗಾಂಧಿ ಮೇಲ್ಜಾತಿ ಹುಟ್ಟಿದರು ಎಂಬ ಕಾರಣಕ್ಕೆ ಅವರನ್ನ ಒಪ್ಪದವರು, ಅವಮಾನ ಮಾಡುವವರು ಇದ್ದಾರೆಯೇ…? ಅವರ ವಿಚಾರ ಒಪ್ಪದವರು ಅಂದು ಇದ್ದರು. ಇಂದೂ ಇದ್ದಾರೆ. ಮುಂದೂ ಇರುತ್ತಾರೆ ಆ ಪ್ರಶ್ನೆ ಬೇರೆ. ಅವರ ವಿಚಾರ ವಿರೋಧಿಸಿ ಅವರನ್ನ ಪ್ರೀತಿಸುವ ಅಂಬೇಡ್ಕರ್ ಎದುರೇ ಇದ್ದರು. ಅವರನ್ನ ಕೊಂದು ಗಾಂಧಿ ಮುಗಿಸುತ್ತೇವೆ ಎಂದವರು ದಿನ ದಿನಕ್ಕೂ ಕುಬ್ಜರಾಗುತ್ತ ಗಾಂಧಿ ಎತ್ತರ ಏರುತ್ತಾ ಇದ್ದಾರೆ.

ಪ್ರಶ್ನೆ ಒಳಗಿನದು
ಉತ್ತರವೂ ಒಳಗೇ ಇದೆ.

ಜಿ. ಟಿ ಸತ್ಯನಾರಾಯಣ ಕರೂರು.
10-06-2021

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

1 Comment

  1. ಜಿ ಟಿ ಸತ್ಯನಾರಾಯಣ ಅವರ ಬರೆಹದ ಹೂರಣ ನಮ್ಮೆಲ್ಲರ ಅನುಭವ ಆಗಿದೆ.

Leave a Reply

Your email address will not be published. Required fields are marked *