

ಪಠ್ಯ ವಾಪಸ್,ಪ್ರಶಸ್ತಿ ವಾಪಸ್ ಇವುಗಳೆಲ್ಲ ಅರ್ಥವಿಲ್ಲದ ಪ್ರತಿಭಟನೆಗಳು ಎಂದು ಲೇವಡಿಮಾಡಿರುವ ರಾಜ್ಯ ಸಮಾಜಕಲ್ಯಾಣ ಸಚಿವ ಶ್ರೀನಿವಾಸ ಪೂಜಾರಿ ಪಠ್ಯಪರಿಷ್ಕರಣೆಯ ವಿವಾದ ಮುಗಿದ ವಿಷಯವಾಗಿದ್ದು ಶಾಲೆಗಳಿಗೆ ಪಠ್ಯಗಳನ್ನು ವಿತರಿಸುತಿದ್ದೇವೆ. ಈ ಬಗ್ಗೆ ಪ್ರತಿಭಟನೆಗಳಿಗೆ ಅರ್ಥವಿಲ್ಲ ಅಂಥ ಪ್ರತಿಭಟನೆಗಳನ್ನು ಲೆಕ್ಕಿಸುವುದೂ ಇಲ್ಲ ಎಂದು ಕಡಕ್ ಆಗಿ ಪ್ರತಿಕ್ರೀಯಿಸಿದ್ದಾರೆ

.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಮಾತನಾಡಿದ ಅವರು ಗಡ್ಡ ಬಿಟ್ಟು ಚೀಲ ಹಾಕಿಕೊಂಡು ಸಮಾಜ ಬದಲಾಯಿಸುತ್ತೇವೆ ಎನ್ನುವ ಪ್ರಗತಿಪರರ ಭ್ರಮೆ ಸತ್ಯವಾಗುವುದಿಲ್ಲ. ಪ್ರಗತಿಪರರು ಸರ್ಕಾರ ವ್ಯವಸ್ಥೆಯನ್ನು ವಿರೋಧ ಮಾಡಿದರೆ ರಾಜ,ಮಂತ್ರಿ,ವ್ಯವಸ್ಥೆ ಸರಿದಾರಿಯಲ್ಲಿದೆ ಎಂದು ತಿಳಿಯಬೇಕು ಎಂದು ಪ್ರಗತಿಪರರನ್ನು ಕಾಲೆಳೆದಿರುವ ಪೂಜಾರಿ ಚಾಣಕ್ಯರ ಮಾತನ್ನು ಉಲ್ಲೇಖಿಸಿದ್ದಾರೆ. ಇದರಿಂದ ಪಠ್ಯಪರಿಷ್ಕರಣೆಯ ವಿವಾದದ ಹಿನ್ನೆಲೆಯಲ್ಲಿ ಪ್ರಗತಿಪರರ ಬಗ್ಗೆ ಲೇವಡಿ ಮಾಡಿ ಹೊಸ ವಿವಾದ ಹುಟ್ಟುಹಾಕಿದಂತಾಗಿದೆ.
ಪಠ್ಯಪರಿಷ್ಕರಣೆ,ಕಾಂಗ್ರೆಸ್ ನಾಯಕರ ಮೇಲಿನ ತನಿಖೆ ಈ ವಿಚಾರಗಳಲ್ಲಿ ರಾಜಕೀಯ ನಡೆಯುತ್ತಿದೆ ಎಂದಿರುವ ಸಚಿವರು ಇವನ್ನೆಲ್ಲಾ ಲೆಕ್ಕಿಸದೆ ಮೋದಿ ನೇತೃತ್ವದಲ್ಲಿ ಸರ್ಕಾರ ಸುಸ್ಥಿರವಾಗಿದೆ ಎಂದರು.
